ಬ್ರೆಸಿಲಿಯಾ: ಬ್ರೆಜಿಲ್‍ನ ರಿಯೊ ಡಿ ಜನೈರೊದಲ್ಲಿನ ವಿಮಾನ ನಿಲ್ದಾಣದ ಎಲೆಕ್ಟ್ರಾನಿಕ್ ಡಿಸ್ಪ್ಲೆ ಹ್ಯಾಕ್ ಮಾಡಿ, ಅದರಲ್ಲಿ ಅಶ್ಲೀಲ ವೀಡಿಯೋ ಪ್ರದರ್ಶನವಾದ ಘಟನೆ ನಡೆದಿದೆ.
ಬ್ರೆಜಿಲ್‍ನ ಏರ್‌ಪೋರ್ಟ್ ಆಪರೇಟರ್, ಇನ್ಫ್ರಾರೋ, ಮಾನಿಟರ್‌ಗಳನ್ನು ಖಾಸಗಿ ಕಂಪನಿಯೊಂದು ನಿರ್ವಹಿಸುತ್ತಿತ್ತು. ಇದು ಜಾಹೀರಾತು ಪರದೆಗಳಾಗಿವೆ. ಜಾಹಿರಾತುಗಳ ಜೊತೆಗೆ ವಿಮಾನದ ಮಾಹಿತಿ ಪ್ರಕಟವಾಗುತ್ತಿತ್ತು. ಆದರೆ ಮಾಹಿತಿಯ ಬದಲಿಗೆ ಅಶ್ಲೀಲ ವೀಡಿಯೋ ಪ್ರಸಾರಗೊಂಡಿದೆ.
Advertisement
Advertisement
ಘಟನೆಗೆ ಸಂಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಂಡಿದೆ ಮತ್ತು ಫೆಡರಲ್ ಪೊಲೀಸರಲ್ಲಿ ಪ್ರಕರಣ ದಾಖಲಿಸಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯ ಬಳಿಕ ಹ್ಯಾಕ್ ಆಗಿದ್ದ ಡಿಸ್ಪ್ಲೆಗಳನ್ನು ಆಫ್ ಮಾಡಿಲಾಗಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗಿದೆ. ಇದನ್ನೂ ಓದಿ: 1991ರ ಕಾಯಿದೆ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸುಪ್ರೀಂಕೋರ್ಟ್‍ಗೆ ಮತ್ತೊಂದು ಅರ್ಜಿ
Advertisement
Advertisement
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವಿರೋಧ ವ್ಯಕ್ತವಾಗಿದ್ದು, ಜನರು ಮಕ್ಕಳೊಂದಿಗೆ ಪ್ರಯಾಣಿಸುವಾಗ ಮುಜುಗರವನ್ನು ಉಂಟುಮಾಡುತ್ತದೆ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ. ಇದನ್ನೂ ಓದಿ: ಪ್ರೀತಿಗೆ ಪ್ರೀತಿ ಹರಿಸುವವರು ಹಿಂದೂಗಳು, ಪ್ರೀತಿಗೆ ರಕ್ತ ಹರಿಸುವವರು ಮುಸ್ಲಿಂ ಗೂಂಡಾಗಳು: ಶಿವಚಾರ್ಯ ಸ್ವಾಮೀಜಿ