ಓಟ್ಸ್ ಪೀನಟ್ ಬಟರ್ ಸ್ಮೂದಿ ಅತ್ಯಂತ ಸುಲಭವಾಗಿ ತಯಾರಿಸಬಹುದಾದ ಪೌಷ್ಟಿಕ ಪಾನೀಯಗಳಲ್ಲಿ ಒಂದಾಗಿದೆ. ಸಾಮಾನ್ಯವಾಗಿ ಜನರು ಸ್ಮೂದಿಗಳನ್ನು ತಮ್ಮ ಬಿಡುವಿನ ಸಮಯದಲ್ಲಿ ತಿನ್ನುವ ಲಘು ಉಪಹಾರವಾಗಿ ಪರಿಗಣಿಸಿದ್ದಾರೆ. ಹೆಚ್ಚಾಗಿ ತಮ್ಮ ತೂಕ ಕಡಿಮೆ ಮಾಡಲು ಬಯಸುವವರಿಗೆ ಇದು ಉಪಯುಕ್ತವಾಗಿದೆ. ಇವತ್ತಿನ ನಮ್ಮ ರೆಸಿಪಿಯಲ್ಲಿ ಆರೋಗ್ಯಕರ ಓಟ್ಸ್ ಪೀನಟ್ ಬಟರ್ ಸ್ಮೂದಿ ಯಾವ ರೀತಿ ಮಾಡುವುದು ಎಂಬುದನ್ನು ತಿಳಿಸಿಕೊಡುತ್ತಿದ್ದೇವೆ. ಹಾಗಿದ್ರೆ ಇದನ್ನು ಯಾವ ರೀತಿ ಮಾಡುವುದು ಎಂಬುದನ್ನು ತಿಳಿದುಕೊಳ್ಳಿ.
ಬೇಕಾಗುವ ಪದಾರ್ಥಗಳು:
ಪೀನಟ್ ಬಟರ್– 2ಚಮಚ
ಬಾಳೆಹಣ್ಣು– 1
ಚಿಯಾ(ಕಾಮ ಕಸ್ತೂರಿ)- 1 ಚಮಚ
ಓಟ್ಸ್– 1/2 ಕಪ್
ಸೋಯ ಮಿಲ್ಕ್– 1/2 ಕಪ್
ಕಡಲೆ ಬೀಜ– 1/2 ಕಪ್
ಮಾಡುವ ವಿಧಾನ:
* ಮೊದಲಿಗೆ ಓಟ್ಸ್ ಮತ್ತು ಪೀನಟ್ ಬಟರ್ ಅನ್ನು ಮಿಕ್ಸಿ ಜಾರಿಗೆ ಹಾಕಿ.
* ನಂತರ ಅದಕ್ಕೆ ಸೋಯಾ ಹಾಲು ಸೇರಿಸಿ.
* ಬಳಿಕ ಇದಕ್ಕೆ ಬಾಳೆಹಣ್ಣು ಮತ್ತು ಚಿಯಾ ಬೀಜಗಳನ್ನು ಹಾಕಿ ಚನ್ನಾಗಿ ರುಬ್ಬಿಕೊಳ್ಳಿ.
* ನಂತರ ಈ ಮಿಶ್ರಣವನ್ನು ಒಂದು ಗ್ಲಾಸಿಗೆ ಹಾಕಿ ಪುಡಿ ಮಾಡಿದ ಕಡಲೆ ಬೀಜದಿಂದ ಅಲಂಕರಿಸಿ.
* ಈಗ ಓಟ್ಸ್ ಪೀನಟ್ ಬಟರ್ ಸ್ಮೂದಿ ಸರ್ವ್ ಮಾಡಲು ರೆಡಿ.
Web Stories