ಹಿರಿಯ ನಟ ಶಶಿಕುಮಾರ್ ಪುತ್ರ ಅಕ್ಷಿತ್ ನಟನೆಯ ‘ಓ ಮೈ ಲವ್’ ಚಿತ್ರದ ಟ್ರೇಲರ್ ಅನಾವರಣ ಕಾರ್ಯಕ್ರಮವು ಕಲಾವಿದರ ಸಂಘದಲ್ಲಿ ಅದ್ದೂರಿಯಾಗಿ ನಡೆಯಿತು. ನಟ, ಹಿರಿಯ ನಿರ್ದೇಶಕ ಎಸ್.ನಾರಾಯಣ್ ಮಾತನಾಡಿ ಚಿತ್ರರಂಗಕ್ಕೆ ಒಳ್ಳೆ ನಿರ್ಮಾಣ ಸಂಸ್ಥೆ ಬಂದಿದೆ. ನಾಯಕಿ ತಂದೆಯಾಗಿ 20 ದಿವಸ ಕೆಲಸ ಮಾಡಿದ್ದೇನೆ. 80ರ ದಶಕದಲ್ಲಿ ಶಿವಣ್ಣ-ರವಿಚಂದ್ರನ್ ಹೊರತುಪಡಿಸಿದರೆ ಅಂದು ಸುಂದರವಾದ ಯುವಕನೊಬ್ಬನ ಆಗಮನವಾಯಿತು. ಅದುವೇ ಶಶಿಕುಮಾರ್ ಮುಂದೆ ಸುಪ್ರಿಂ ಹೀರೋ ಆಗಿ ಖ್ಯಾತಿ ಪಡೆದರು. ಅವರೊಂದಿಗೆ ಚಿತ್ರ ಮಾಡಬೇಕಾಗಿತ್ತು. ಕಾರಣಾಂತರದಿಂದ ಆಗಲಿಲ್ಲ. ಪ್ರೀತಿ ಕುರಿತಾದ ಚಿತ್ರಗಳು ಸೋಲುವುದು ಕಡಿಮೆ. ಜನ ಇಂತಹ ಚಿತ್ರಗಳನ್ನು ಇಷ್ಟಪಡುತ್ತಾರೆ. ’ಚೈತ್ರದ ಪ್ರೇಮಾಂಜಲಿ’ ’ಚಲುವಿನ ಚಿತ್ತಾರ’ ’ಮುಂಗಾರು ಮಳೆ’ ಇನ್ನು ಮುಂತಾದವು ಕಣ್ಣ ಮುಂದೆ ಬರುತ್ತದೆ. ಇದರಲ್ಲಿ ಗೆಲುವಿಗೆ ಬೇಕಾದ ಕಥೆಯನ್ನು ನಿರ್ದೇಶಕರು ಆರಿಸಿಕೊಂಡಿದ್ದಾರೆ. ಗೊಂದಲ ಇಲ್ಲದಂತೆ ದೃಶ್ಯಗಳನ್ನು ಪೋಣಿಸಿದ್ದಾರೆ. ಗೆಲುವಿನ ಸಿಂಚನ ಕಾಣ್ತಾ ಇದೆ ಎಂದರು.
Advertisement
ಹಿಂದಿನ ನೆನಪಿಗಳಿಗೆ ಜಾರಿದ ಶಶಿಕುಮಾರ್ ನನ್ನ ಬೆಳಸಿದಂತೆ ಮಗನನ್ನು ಮುಂದಕ್ಕೆ ತನ್ನಿರಿ. ಒಂದು ದಿವಸವು ಸೆಟ್‌ಗೆ ಹೋಗಿಲ್ಲ, ಚಿತ್ರವನ್ನು ನೋಡಿಲ್ಲ. ಪತ್ರಿಕೆಗಳಿಂದ ಬಂದ ವಿಮರ್ಶೆಗಳಿಂದ ಸಾಕಷ್ಟು ಕಲಿತೆ. ಇಂದು ಡಿಜಿಟಲ್ ಮಾಧ್ಯಮ ಬಂದಿರುವುದರಿಂದ ಹೆಚ್ಚು ಪರಿಣಾಮಕಾರಿಯಾಗಿದೆ. ಸರಿಯಾದ ಸಮಯಕ್ಕೆ ಬಂದು ಕೆಲಸ ಮಾಡಿಸುವುದರಲ್ಲಿ ಎಸ್.ನಾರಾಯಣ್ ಪ್ರಮುಖರಾಗಿರುತ್ತಾರೆ. ಅವರ ಶೂಟಿಂಗ್ ವರಸೆಯನ್ನು ಕಣ್ಣಾರೆ ಕಂಡಿರುವೆ. ಇಂತಹವರಿಂದ ಕಲಿಯುವುದು ಸಾಕಷ್ಟು ಇದೆ. ನಮ್ಮ ಜಮಾನ ಮುಗಿಯಿತು. ಇಂದಿನ ಪೀಳಿಗೆಯು ಇದನ್ನು ಮುಂದುವರೆಸಿಕೊಂಡು ಹೋಗಬೇಕೆಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ:ವಿಕ್ರಾಂತ್ ರೋಣ ಸಿನಿಮಾ ಆಗೋಕೆ ಇವರೇ ಸ್ಪೂರ್ತಿ: ಕಿಚ್ಚ ಹೀಗಂದಿದ್ದು ಯಾರ ಬಗ್ಗೆ?
Advertisement
Advertisement
ಒಮ್ಮೆ ಚಿತ್ರಮಂದಿರಕ್ಕೆ ಭೇಟಿ ನೀಡಿ ಸಿನಿಮಾ ನೋಡಿದರೆ ನೀವುಗಳು ಓ ಮೈ ಲವ್ ಕುಟುಂಬದವರಾಗುತ್ತೀರಾ. ನಿರ್ಮಾಪಕರು ಒಳ್ಳೆ ಕಥೆಯನ್ನು ಬರೆದಿದ್ದಾರೆ. ಅದಕ್ಕೆ ತಕ್ಕಂತೆ ಸನ್ನಿವೇಶಗಳನ್ನು ಸೃಷ್ಟಿಸಿ ಶ್ರೀಮಂತವಾಗಿ ಚಿತ್ರೀಕರಿಸಲಾಗಿದೆ. ಬಳ್ಳಾರಿ ಭಾಗದವರು ಮೊದಲ ಬಾರಿ ಸಿನಿಮಾರಂಗಕ್ಕೆ ಬಂದಿದ್ದಾರೆ. ಅಂತಹವರನ್ನು ಉಳಿಸಿಕೊಳ್ಳುವುದು ನಮ್ಮ ಜವಬ್ದಾರಿಯಾಗಿದೆ ಅಂತ ನಿರ್ದೇಶಕ ಸ್ಮೈಲ್ ಶ್ರೀನು ಹೇಳಿದರು.
Advertisement
ನಾಯಕ ಅಕ್ಷಿತ್ ಶಶಿಕುಮಾರ್, ನಾಯಕಿ ಕೀರ್ತಿ ಕಲ್ಕರೆ ಇಬ್ಬರಿಗೂ ಹೊಸ ಅನುಭವವಾಗಿದ್ದರಿಂದ ಹೆಚ್ಚೇನು ಮಾತನಾಡಲಿಲ್ಲ. ಸುಂದರಶ್ರೀ, ಸಂಗೀತ, ಪೃಥ್ವಿ, ವಿತರಕ ಕಮ್ಮರ್ ಮುಂತಾದವರು ಆಸೀನರಾಗಿದ್ದರು. ನಿರ್ಮಾಪಕ ಜಿ.ರಾಮಾಂಜಿನಿ ಅವರು ಹೆಚ್ಚು ಸಂಪರ್ಕ ಹೊಂದಿರುವುದರಿಂದ ಬಳ್ಳಾರಿಯಿಂದ ಹೆಚ್ಚು ಅತಿಥಿಗಳು ಕಾರ್ಯಕ್ರಮಕ್ಕೆ ಆಗಮಿಸಿದ್ದು ವಿಶೇಷವಾಗಿತ್ತು.