ಓಮಿಕ್ರಾನ್‍ಗಿಂತ ಓ ಮಿತ್ರೋನ್ ಹೆಚ್ಚು ಅಪಾಯಕಾರಿ: ಶಶಿ ತರೂರ್

Public TV
1 Min Read
shashi tharoor

ನವದೆಹಲಿ: ದೇಶವನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಷಣದ ವೇಳೆ ಬಳಸುವ ಓ ಮಿತ್ರೋನ್ ಎಂಬ ಪದ ಓಮಿಕ್ರಾನ್‍ಗಿಂತ ಹೆಚ್ಚು ಅಪಾಯಕಾರಿ ಎಂದು ಕಾಂಗ್ರೆಸ್ ನಾಯಕ ಶಶಿ ತರೂರ್ ವ್ಯಂಗ್ಯವಾಡಿದ್ದಾರೆ.

NARENDRA MODI

ಓಮಿಕ್ರಾನ್‍ಗಿಂತ ತುಂಬಾ ಅಪಾಯಕಾರಿ ಎಂದರೆ ಓ ಮಿತ್ರೋನ್. ನಾವು ಪ್ರತಿದಿನ ನೋಡುತ್ತಿದ್ದರೆ ದ್ವೇಷ ಮತ್ತು ಧರ್ಮಾಂಧತೆಯ ಪ್ರಚಾರ ಸಂವಿಧಾನದ ಮೇಲಿನ ಕಪಟ ದಾಳಿಗಳು ಮತ್ತು ನಮ್ಮ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುತ್ತಿದೆ. ಈ ವೈರಸ್‍ನಲ್ಲಿ ಯಾವುದೇ ಸೌಮ್ಯ ಲಕ್ಷಣಗಳಿಲ್ಲ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಟೆನ್ಷನ್ ಫ್ರೀ – ಮೂರು ದಿನ ರೆಸಾರ್ಟ್‌ನಲ್ಲಿ ವಿಶ್ರಾಂತಿ

ಬಿಜೆಪಿ ವಕ್ತಾರ ಶೆಹಜಾದ್ ಪೂನವಾಲಾ ಅವರು, ಇದು ದೇಶದಲ್ಲಿ ಗಂಭೀರವಾಗಿರುವ ಕೋವಿಡ್ ಪರಿಸ್ಥಿತಿಯನ್ನು ಹಗುರಗೊಳಿಸುವ ಪ್ರಯತ್ನವಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ರಾಹುಲ್ ಗಾಂಧಿಯನ್ನು ಪ್ರಧಾನಿ ಮಾಡುವುದು ನಮ್ಮ ಗುರಿ: ನಲಪಾಡ್ ಅಧಿಕಾರ ಸ್ವೀಕಾರ

Share This Article
Leave a Comment

Leave a Reply

Your email address will not be published. Required fields are marked *