– ಬಂಧಿತರಿಂದ 11.80 ಲಕ್ಷ ರೂ., 2 ಬೈಕ್ ವಶ
ಚಿಕ್ಕಬಳ್ಳಾಪುರ: ನಡು ರಸ್ತೆಯಲ್ಲಿ ಹತ್ತು, ಇಪ್ಪತ್ತು, ಐವತ್ತು ರೂಪಾಯಿ ಬಿಸಾಡಿ ಅಮಾಯಕರಿಂದ ಲಕ್ಷ ಲಕ್ಷ ದೋಚುತ್ತಿದ್ದ ಕುಖ್ಯಾತ ಓಜಿಕುಪ್ಪಂ ಗ್ಯಾಂಗ್‍ನ ಇಬ್ಬರು ಕಳ್ಳರನ್ನು ಚಿಕ್ಕಬಳ್ಳಾಪುರ ಪೊಲೀಸರು ಬಂಧಿಸಿದ್ದಾರೆ.
ರಾಜೇಶ್, ಶಣ್ಮುಗಂ ಬಂಧಿತ ಆರೋಪಿಗಳು. ಆಂಧ್ರ ಪ್ರದೇಶ, ಕರ್ನಾಟಕ ಗಡಿನಾಡಿನಲ್ಲಿ ಪೋಲಿಸರ ನಿದ್ದೆ ಕೆಡಿಸಿದ್ದ ಈ ಗ್ಯಾಂಗ್ ಎ.ಟಿ.ಎಂ, ಬ್ಯಾಂಕ್, ಎ.ಪಿ.ಎಂ.ಸಿ ಮಾರುಕಟ್ಟೆಗಳಲ್ಲಿ ಬರುವ ಸಾಮಾನ್ಯ ಜನರನ್ನು ಟಾರ್ಗೆಟ್ ಮಾಡಿ, ಕೈತುಂಬ ಹಣ ದೋಚಿಕೊಂಡು ಕ್ಷಣಾರ್ಧದಲ್ಲಿ ಪರಾರಿಯಾಗುತ್ತಿದ್ದರು.
Advertisement
ಗ್ಯಾಂಗ್ ಹಿನ್ನೆಲೆ ಏನು?:
ರಸ್ತೆಯಲ್ಲಿ 10, 20 ರೂಪಾಯಿ ಬಿಸಾಡಿ ನಿಮ್ಮ ದುಡ್ಡು ಬಿದ್ದಿದೆ ನೋಡಿ ಎಂದು ಗಮನ ಬೇರೆಡೆ ಸೆಳೆಯುವತ್ತಿದ್ದ ಓಜಿಕುಪ್ಪಂ ಗ್ಯಾಂಗ್ ಅಮಾಯಕರ ಹಣವನ್ನು ಎಗರಿಸುತ್ತಿದ್ದು. ಈ ಓಜಿಕುಪ್ಪಂ ಜಾಲ ಇತ್ತೀಚೆಗೆ ಆಂಧ್ರ, ಕರ್ನಾಟಕ ಗಡಿನಾಡು ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಚಿಂತಾಮಣಿ, ಚಿಕ್ಕಬಳ್ಳಾಪುರ ಗೌರಿಬಿದನೂರು, ಬಾಗೇಪಲ್ಲಿ ಗುಡಿಬಂಡೆ ಹಾಗೂ ಆಂಧ್ರದ ಗೊರಂಟ್ಲದಲ್ಲಿ ಹೆಚ್ಚು ಆಕ್ವೀವ್ ಆಗಿತ್ತು.
Advertisement
Advertisement
ಸಾಮಾನ್ಯ ಜನರು ಪ್ರತಿದಿನ ಈ ಮೋಸದ ಜಾಲಕ್ಕೆ ಸಿಲುಕಿ ತಮ್ಮಲ್ಲಿರುವ ಹಣವನ್ನ ಕಳೆದುಕೊಳ್ತುತ್ತಿದ್ದರು. ಇದೆ ಗ್ಯಾಂಗ್‍ನ ಇಬ್ಬರು ಚಿಕ್ಕಬಳ್ಳಾಪುರ ನಗರದಲ್ಲಿ ತಮ್ಮ ಕೈಚಳಕ ತೋರಿ ಕೊಳವನಹಳ್ಳಿ ನಿವಾಸಿ ಜಯರಾಮಯ್ಯ ಹಾಗೂ ರತ್ನಮ್ಮ ದಂಪತಿ ಬ್ಯಾಂಕಿನಿಂದ ಹಣ ಡ್ರಾ ಮಾಡಿಕೊಂಡು ಬಂದಿದ್ದ ಮೂರುವರೆ ಲಕ್ಷ ರೂ. ಹಣವನ್ನು ಕಳ್ಳತನ ಮಾಡಿದ್ದರು. ಹೀಗಾಗಿ ರತ್ನಮ್ಮ ಜಯರಾಮಯ್ಯರಿಂದ ದೂರು ಪಡೆದ ಚಿಕ್ಕಬಳ್ಳಾಪುರ ನಗರ ಠಾಣೆ ಪೋಲಿಸರು, ಆರೋಪಿಗಳು ಬಳಸಿದ್ದ ಮೊಬೈಲ್ ಗಳ ಮೂಲಕ ಟ್ರೇಸ್ ಮಾಡಿ ಆರೋಪಿಗಳನ್ನು ಪತ್ತೆಹಚ್ಚಿದ್ದಾರೆ.
Advertisement
ಪ್ರತಿ ದಿನ ಒಂದೊಂದು ಊರಿನಲ್ಲಿ ಕಾರ್ಯಾಚರಣೆ ನಡೆಸುವ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆ ನಗಾರಿ ಮಂಡಲಂನ ಓ.ಜಿ.ಕುಪ್ಪಂ ಗ್ಯಾಂಗ್, ಬ್ಯಾಂಕ್, ಎ.ಟಿ.ಎಂ, ವಾಣಿಜ್ಯ ಸ್ಥಳಗಳಲ್ಲಿ ಹಣ ಪಡೆದು ಬರುವವರನ್ನು ಗುರಿಯಾಗಿಸಿ ಸ್ಕೆಚ್ ಹಾಕುತ್ತಿದ್ದರು. ಬಳಿಕ ಅವರಿಗೆ ಮತ್ತು ಬರುವ ಔಷಧ, ತುರಕೆ ಔಷಧ ಅಥವಾ ರಸ್ತೆಯಲ್ಲಿ ಹತ್ತು, ಇಪ್ಪತ್ತು ರೂಪಾಯಿ ಬಿಸಾಡಿ ನೋಡಿ ನಿಮ್ಮ ಹಣ ಬಿದ್ದಿದೆ ಎಂದು ಅವರ ಗಮನ ಸೆಳೆದು ಸಾರ್ವಜನಿಕರ ಹಣ ಲೂಟಿ ಮಾಡುತ್ತಿದ್ದರು.
ಸದ್ಯ ಬಂಧಿತ ಆರೋಪಿಗಳಿಂದ 11.80 ಲಕ್ಷ ರೂ., 2 ಬೈಕ್ ಜಪ್ತಿ ಮಾಡಿದ್ದಾರೆ. ಅಲ್ಲದೆ ಆರೋಪಿಗಳ ಬಂಧನದಿಂದ ಹಲವು ಪ್ರಕರಣಗಳನ್ನು ಪೊಲೀಸರು ಭೇದಿಸಿದ್ದು, ಹಣ ಕಳೆದುಕೊಂಡ ಸಾಮಾನ್ಯ ಜನರಿಗೆ ಮರಳಿ ಹಣ ಸಿಗುವಂತೆ ಮಾಡಲು ಪೊಲೀಸರು ಯಶಸ್ವಿಯಾಗಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv