ಸಿಡ್ನಿ: ವಿಶ್ವ ಕ್ರಿಕೆಟ್‍ನಲ್ಲಿ ಮಂಕಡಿಂಗ್, ರನೌಟ್ ಎಂದು ಐಸಿಸಿ (ICC) ನಿಯಮ ಜಾರಿಗೆ ತಂದ ಬಳಿಕ ನಾನ್ ಸ್ಟ್ರೈಕರ್ ಬ್ಯಾಟ್ಸ್‌ಮ್ಯಾನ್‌ಗಳಿಗೆ ಸ್ಟ್ರೈಕ್ ಬಿಡುವ ಮುನ್ನ ಯೋಚಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಈ ನಡುವೆ ವಿಶ್ವಕಪ್ (T20 World Cup) ಪಂದ್ಯದಲ್ಲಿ ನ್ಯೂಜಿಲೆಂಡ್ (New Zealand) ತಂಡದ ಆಟಗಾರ ಗ್ಲೆನ್ ಫಿಲಿಪ್ಸ್ (Glenn Phillips) ನಾನ್ ಸ್ಟ್ರೈಕರ್ ರನೌಟ್‍ನಿಂದ ಪಾರಾಗಲು ಹೊಸ ಐಡಿಯಾ ಮಾಡಿದ್ದಾರೆ.
Advertisement
ಇತ್ತೀಚಿನ ದಿನಗಳಲ್ಲಿ ಬೌಲರ್ ಬಾಲ್ ಎಸೆಯುವ ಮುನ್ನ ನಾನ್ ಸ್ಟ್ರೈಕರ್ ಆಟಗಾರ ಕ್ರೀಸ್ ಬಿಟ್ಟು ಓಡಲು ಮುಂದಾದರೆ ಬೌಲರ್‌ಗೆ ರನೌಟ್ ಮಾಡುವ ಅವಕಾಶವಿದೆ. ಹಾಗಾಗಿ ಬೌಲರ್‌ಗಳು ನಾನ್ ಸ್ಟ್ರೈಕರ್ ಬ್ಯಾಟ್ಸ್‌ಮ್ಯಾನ್ ಕಡೆ ಕಣ್ಣಿಟ್ಟು ರನೌಟ್‍ಗೆ ಮುಂದಾಗುತ್ತಿದ್ದಾರೆ. ಈ ನಡುವೆ ಶ್ರೀಲಂಕಾ (Srilanka) ವಿರುದ್ಧದ ಪಂದ್ಯದಲ್ಲಿ ಗ್ಲೆನ್ ಫಿಲಿಪ್ಸ್ ನಾನ್ ಸ್ಟ್ರೈಕರ್ ರನೌಟ್‍ನಿಂದ ಪಾರಾಗಲು ಹೊಸ ಪರಿಹಾರ ಕಂಡುಕೊಂಡಿದ್ದು, ಬೌಲರ್ ಬಾಲ್ ಎಸೆಯುವ ಮುನ್ನ 100 ಮೀ. ಓಟಕ್ಕೂ ಮುನ್ನ ಓಟಗಾರ ಯಾವರೀತಿ ಸಿದ್ಧನಾಗುತ್ತಾನೊ ಅದೇ ರೀತಿ ರನ್‍ಗಾಗಿ ಓಡಲು ಫಿಲಿಪ್ಸ್ ಸಿದ್ಧರಾಗಿ ಓಡಿ ತೋರಿಸಿದ್ದಾರೆ. ಇದನ್ನೂ ಓದಿ: ಸತತ ಸೋಲಿನ ರುಚಿ – ಭಾರತದ ಗೆಲುವಿಗಾಗಿ ಪಾಕ್ ತಂಡ ಪ್ರಾರ್ಥನೆ
Advertisement
Advertisement
ಇದೀಗ ಫಿಲಿಪ್ಸ್ ಈ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ. ಪಂದ್ಯದಲ್ಲಿ ಫಿಲಿಪ್ಸ್ ತನ್ನ ಭರ್ಜರಿ ಶತಕದ ನೆರವಿನಿಂದ ಶ್ರೀಲಂಕಾ ವಿರುದ್ಧ ನ್ಯೂಜಿಲೆಂಡ್ 65 ರನ್‍ಗಳ ಭರ್ಜರಿ ಜಯ ಗಳಿಸಲು ನೆರವಾದರು.
Advertisement
ಕೇವಲ 7 ರನ್‍ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಕಿವೀಸ್ ತಂಡಕ್ಕೆ ಫಿಲಿಪ್ಸ್ 104 ರನ್ (64 ಎಸೆತ, 10 ಬೌಂಡರಿ, 4 ಸಿಕ್ಸ್) ಚಚ್ಚಿ ಪುಟಿದೇಳುವಂತೆ ಮಾಡಿದರು. ಅಂತಿಮವಾಗಿ ನ್ಯೂಜಿಲೆಂಡ್ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 167 ರನ್ ಬಾರಿಸಿ ಶ್ರೀಲಂಕಾಗೆ 168 ರನ್‍ಗಳ ಗುರಿ ನೀಡಿತು. ಇದನ್ನೂ ಓದಿ: ಮಂಕಡ್‌ಗೆ ಸಮ್ಮತಿ – ಬಾಲ್ ಎಸೆಯುವ ಮುನ್ನ ನಾನ್‍ಸ್ಟ್ರೈಕ್ ಬಿಟ್ಟರೆ ಉಳಿಗಾಲವಿಲ್ಲ
Nothing much to see here except Glenn Phillips setting an example for other cricketers on how to play ‘fair’ cricket! ????????#T20WorldCup #NZvSL pic.twitter.com/HAScijnZcc
— ames (@AmesforJakes) October 29, 2022
ನ್ಯೂಜಿಲೆಂಡ್ ನೀಡಿದ ದೊಡ್ಡ ಮೊತ್ತವನ್ನು ಬೆನ್ನಟ್ಟಿದ ಶ್ರೀಲಂಕಾ ತಂಡ ಕಿವೀಸ್ ಬೌಲರ್‌ಗಳ ಉರಿ ದಾಳಿಗೆ ನಲುಗಿ ಕಂಗಾಲಾಯಿತು. ಟ್ರೆಂಡ್ ಬೌಲ್ಟ್ ಬೆಂಕಿ ಬೌಲಿಂಗ್‍ಗೆ ಪತರುಗುಟ್ಟಿದ ಶ್ರೀಲಂಕಾ ಕೇವಲ 19.2 ಓವರ್‌ಗಳಲ್ಲಿ 102 ರನ್‍ಗಳಿಗೆ ಆಲೌಟ್ ಆಯಿತು. ಬೌಲ್ಟ್ 4 ವಿಕೆಟ್ ಕಿತ್ತು ಮಿಂಚಿದರು.