ಅಹಮದಾಬಾದ್: ಐಡೆನ್ ಮಾರ್ಕ್ರಾಮ್ ಸ್ಫೋಟಕ ಬ್ಯಾಟಿಂಗ್ ಮತ್ತು ಮಾರ್ಕೊ ಜಾನ್ಸೆನ್ ಬೆಂಕಿ ಬೌಲಿಂಗ್ ಆಟಕ್ಕೆ ನ್ಯೂಜಿಲೆಂಡ್ ಮಂಕಾಯಿತು. ದಕ್ಷಿಣ ಆಫ್ರಿಕಾ 7 ವಿಕೆಟ್‌ಗಳ ಜಯ ಸಾಧಿಸಿತು.
ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ನ್ಯೂಜಿಲೆಂಡ್ ಮೊದಲು ಬ್ಯಾಟಿಂಗ್ ಮಾಡಿತು. ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 175 ರನ್ ಗಳಿಸಿತು. ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ 7 ವಿಕೆಟ್‌ಗಳಿಂದ ಗೆದ್ದಿತು.
ಸೌತ್ ಆಫ್ರಿಕಾ ಪರ ಐಡೆನ್ ಮಾರ್ಕ್ರಾಮ್ 44 ಬಾಲ್‌ಗೆ 8 ಫೋರ್ ಮತ್ತು 4 ಸಿಕ್ಸರ್‌ಗಳೊಂದಿಗೆ 86 ರನ್ ಗಳಿಸಿ ಮಿಂಚಿದರು. ಡೇವಿಡ್ ಮಿಲ್ಲರ್ 24, ಡೆವಾಲ್ಡ್ ಬ್ರೆವಿಸ್ ಮತ್ತು ರಯಾನ್ ರಿಕೆಲ್ಟನ್ ತಲಾ 21 ಹಾಗೂ ಕ್ವಿಂಟನ್ ಡಿ ಕಾಕ್ 21 ರನ್ ಗಳಿಸಿ ಗೆಲುವಿಗೆ ಕಾಣಿಕೆ ನೀಡಿದರು.
ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ಕಳಪೆ ಪ್ರದರ್ಶನ ನೀಡಿತು. ಮಾರ್ಕ್ ಚಾಪ್ಮನ್ 48 ರನ್‌ಗಳಿಸಿ ಅರ್ಧಶತಕ ವಂಚಿತರಾದರು. ಡೇರಿಲ್ ಮಿಚೆಲ್ 32, ಜೇಮ್ಸ್ ನೀಶಮ್ 23 ರನ್ ಗಳಿಸಿದರು. ಸೌತ್ ಆಫ್ರಿಕಾ ಪರ ಮಾರ್ಕೊ ಜಾನ್ಸೆನ್ 4 ವಿಕೆಟ್ ಕಬಳಿಸಿದರು. ಲುಂಗಿ ಎನ್‌ಗಿಡಿ, ಕೇಶವ ಮಹಾರಾಜ್, ಕಾರ್ಬಿನ್ ಬಾಷ್ ತಲಾ 1 ವಿಕೆಟ್ ಪಡೆದರು.

