ನವದೆಹಲಿ: ಒಂದು ತಿಂಗಳ ಹಿಂದೆಯಷ್ಟೇ ಉದ್ಘಾಟನೆಯಾಗಿದ್ದ ಸಿಗ್ನೇಚರ್ ಸೇತುವೆಯ ಕೇಬಲ್ ಜೋಡಣೆಗೆ ಬಳಸಿದ್ದ ನಟ್ ಮತ್ತು ಬೋಲ್ಟ್ ಗಳನ್ನು ಕಳ್ಳತನ ಮಾಡಲಾಗಿದೆ.
ನವೆಂಬರ್ 5ಕ್ಕೆ ಲೋಕಾರ್ಪಣೆಯಾದ ಬಳಿಕ ಸ್ಟಂಟ್, ಸೆಲ್ಫಿ ವಿಚಾರದಲ್ಲಿ ಸುದ್ದಿಯಾಗಿದ್ದ ಸಿಗ್ನೇಚರ್ ಸೇತುವೆಯ ನಟ್ ಮತ್ತು ಬೋಲ್ಟ್ ಗಳನ್ನೇ ಕಳ್ಳರು ಕದ್ದಿದ್ದು ಈಗ ಭದ್ರತೆಯ ವಿಚಾರದಲ್ಲಿ ಸಾಕಷ್ಟು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.
Advertisement
Advertisement
ನಟ್, ಬೋಲ್ಟ್ ಗಳನ್ನು ಬಳಸಿ ಮೇಲ್ಮೈಯಿಂದ ಕಂಬಗಳನ್ನು ಸಂಪರ್ಕಿಸುವಂತೆ ಕೇಬಲ್‍ಗಳನ್ನು ಹಾಕಲಾಗಿದೆ. ಪ್ರತಿಯೊಂದು ಕೇಬಲ್ ತಲಾ 12 ನಟ್, ಬೋಲ್ಟ್‍ಗಳ ಮೇಲೆ ನಿಂತಿದ್ದು ಕಳ್ಳರು ಕದ್ದಿರುವ ವಿಚಾರ ಸೋಮವಾರ ಬೆಳಕಿಗೆ ಬಂದೆ. ಇದನ್ನೂ ಓದಿ: ಸಿಗ್ನೇಚರ್ ಬ್ರಿಡ್ಜ್ ಮೇಲೆ ಬಟ್ಟೆ ಬಿಚ್ಚಿ ಮಂಗಳಮುಖಿಯರ ಡ್ಯಾನ್ಸ್
Advertisement
ದೆಹಲಿ ಪ್ರವಾಸೋದ್ಯಮ ಮತ್ತು ಸಾರಿಗೆ ಅಭಿವೃದ್ಧಿ ನಿಗಮ (ಡಿಟಿಟಿಡಿಸಿ) ಎಂಜಿನಿಯರುಗಳು ನಡೆಸಿದ ಪರಿಶೀಲನೆ ವೇಳೆ ಈ ವಿಚಾರ ಬೆಳಕಿಗೆ ಬಂದಿದೆ. ಮುಂದಿನ ದಿನಗಳಲ್ಲಿ ಕಳ್ಳತನವಾಗದೇ ಇರಲು ವೆಲ್ಡಿಂಗ್ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement
ಸಿಸಿಟಿವಿ ಅಳವಡಿಸದ್ದು ಮತ್ತು ಭದ್ರತಾ ಸಿಬ್ಬಂದಿ ಇಲ್ಲದ ಕಾರಣ ಕಳ್ಳತನ ನಡೆದಿದ್ದು ಮುಂದೆ ಸಿಸಿಟಿವಿ ಅಳವಡಿಸಲಾಗುವುದು. ಸೇತುವೆ ಸಂಬಂಧಿಸಿದ ಕೆಲಸ ಇನ್ನೂ ಪೂರ್ಣಗೊಳ್ಳದ ಕಾರಣ ಡಿಟಿಡಿಸಿ ಇನ್ನೂ ದೆಹಲಿಯ ಲೋಕೋಪಯೋಗಿ ಇಲಾಖೆ ಸುಪರ್ದಿಗೆ ಸೇತುವೆಯನ್ನು ನೀಡಿಲ್ಲ. ಇದನ್ನೂ ಓದಿ:ಗೋವಾದಿಂದ ಮುಂಬೈಗೆ ಮರಳಿದ ತೇಜಸ್ ರೈಲಿನ ಸ್ಥಿತಿ ನೋಡಿ ಅಧಿಕಾರಿಗಳಿಗೆ ಶಾಕ್!
1997ರಲ್ಲಿ ವಜೀರಾಬಾದ್ ಸೇತುವೆಯಿಂದ ಶಾಲಾ ಬಸ್ ಉರುಳಿ, 22 ಮಕ್ಕಳು ಯಮುನಾ ನದಿಯಲ್ಲಿ ಕೊನೆಯುಸಿರೆಳೆದಿದ್ದರು. ಈ ದುರಂತ ನಡೆದ ಬಳಿಕ ಸರ್ಕಾರ ಬೃಹತ್ ತೂಗು ಸೇತುವೆ ಕಾಮಗಾರಿಯನ್ನು ಪ್ರಾರಂಭಿಸಿತ್ತು. 2010ರಲ್ಲಿ ಪೂರ್ಣಗೊಳ್ಳಬೇಕಿದ್ದ ಕಾಮಗಾರಿ ಹಣಕಾಸು ತೊಂದರೆಯಿಂದ ನಿಂತು ಹೋಗಿತ್ತು. ಸುಮಾರು 1594 ಕೋಟಿ ರೂ. ವೆಚ್ಚದಲ್ಲಿ 154 ಮೀಟರ್ ಉದ್ದದ ನಿರ್ಮಾಣಗೊಂಡಿರುವ ಈ ಸೇತುವೆಯನ್ನು ನವೆಂಬರ್ ನಲ್ಲಿ ಉದ್ಘಾಟಿಸಲಾಗಿತ್ತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv