ಭೋಪಾಲ್: ಮಧ್ಯಪ್ರದೇಶದ ಸಾಗರ್‌ನಲ್ಲಿರುವ ಖಾಸಗಿ ಶಾಲೆಯಲ್ಲಿ 39 ಮಕ್ಕಳಿಗೆ ಆಂಟಿ-ಕೊರೊನಾ ವೈರಸ್ ಲಸಿಕೆ ಡೋಸ್‍ಗಳನ್ನು ನೀಡಲು ಒಂದೇ ಸಿರಿಂಜ್ ಬಳಸಿದ ಲಸಿಕೆದಾರನನ್ನು ಬಂಧಿಸಲಾಗಿದೆ.
Advertisement
ಜೈನ್ ಪಬ್ಲಿಕ್ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಲಸಿಕೆ ಶಿಬಿರವನ್ನು ಆಯೋಜಿಸಲಾಗಿತ್ತು. ಜಿತೇಂದ್ರ ಅಹಿರ್ವಾರ್ ಎಂದು ಗುರುತಿಸಲಾದ ನರ್ಸಿಂಗ್ ವಿದ್ಯಾರ್ಥಿಯನ್ನು ಲಸಿಕೆ ಹಾಕಲು ನಿಯೋಜಿಸಲಾಗಿದೆ. ವ್ಯಾಕ್ಸಿನೇಷನ್ ನಡೆಯುತ್ತಿರುವಾಗ ಜಿತೇಂದ್ರ, ಸಿರಿಂಜ್ ಬದಲಾಯಿಸದಿರುವುದನ್ನು ಗಮನಿಸಿದ ವಿದ್ಯಾರ್ಥಿಯ ತಂದೆ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: 6 ರಿಂದ 7 ಮಂದಿ ಸೇರಿ ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ – ಮೂವರು ಶಂಕಿತರು ವಶ
Advertisement
….क्रांतिकारी बहुतई क्रांतिकारी….
2022 में भी एक ही सिरिंज से 30 बच्चों को वैक्सीन लगाने का कारनामा सिर्फ भारतवर्ष में ही संभव है…
वैसे मामला एमपी के सागर का है…जहां के स्वास्थ्य मंत्री @DrPRChoudhary खुद डॉ हैं.. pic.twitter.com/K5ggqv81X2
— Anurag Amitabhانوراگ امیتابھअनुराग अमिताभ (@anuragamitabh) July 27, 2022
Advertisement
ಈ ಕುರಿತು ಪೋಷಕರು ಪ್ರಶ್ನೆ ಮಾಡಿದಾಗ ಆತ, ನಮ್ಮ ಗಾಡಿಯಲ್ಲಿ ಒಂದೇ ಸಿರಿಂಜ್ ಇತ್ತು. ಅದಕ್ಕೆ ನಾವು ಅದನ್ನೆ ಬಳಸಿದ್ದೇವೆ. ಇದರಲ್ಲಿ ನನ್ನದೇನೂ ತಪ್ಪಿಲ್ಲ ಎಂದು ಸಮರ್ಥನೆ ಮಾಡಿಕೊಂಡಿದ್ದಾನೆ. ಈ ಹಿನ್ನೆಲೆ ಪೋಷಕರು ಆತನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಜಿತೇಂದ್ರನನ್ನು ಪೋಷಕರು ಸೆರೆ ಹಿಡಿದಿದ್ದು, ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ವೈರಲ್ ಆಗುತ್ತಿದಂತೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
Advertisement
ಜಿತೇಂದ್ರ ಅಹಿರ್ವಾರ್ ಖಾಸಗಿ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಯಾಗಿದ್ದು, ಆರೋಗ್ಯ ಇಲಾಖೆಯಿಂದ ಲಸಿಕೆ ಕಾರ್ಯಕ್ರಮವನ್ನು ಕೈಗೊಳ್ಳಲು ತರಬೇತಿ ಪಡೆದಿದ್ದಾರೆ ಎಂದು ಸಾಗರ ಜಿಲ್ಲೆಯ ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ(ಸಿಎಂಎಚ್‍ಒ) ಡಾ.ಡಿ.ಕೆ.ಗೋಸ್ವಾಮಿ ತಿಳಿಸಿದ್ದಾರೆ. ಇದನ್ನೂ ಓದಿ: ಯುವತಿ ಫೋಟೋ ಬಳಸಿ ಯುವಕರಿಂದ 19 ಲಕ್ಷ ರೂ. ಎಗರಿಸಿದ್ದ ಆರೋಪಿ ಅರೆಸ್ಟ್
ಜಿತೇಂದ್ರ ಅವರ ಆರೋಪಗಳ ಬಗ್ಗೆ ಸಿಎಂಎಚ್‍ಒ ಡಾ.ಗೋಸ್ವಾಮಿ ಅವರನ್ನು ಕೇಳಿದಾಗ, ಇದು ತನಿಖೆಯ ವಿಷಯವಾಗಿದೆ. ಘಟನೆಗೆ ಕಾರಣರಾದ ಜಿಲ್ಲಾ ವ್ಯಾಕ್ಸಿನೇಷನ್ ಅಧಿಕಾರಿಯನ್ನು ಈಗಾಗಲೇ ಅಮಾನತುಗೊಳಿಸಲಾಗಿದೆ. ಪೊಲೀಸರು ಗುರುವಾರ ಸಂಜೆ ಸಾಗರ್ ನಗರದಿಂದ ಜಿತೇಂದ್ರನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಎಫ್‍ಐಆರ್ ದಾಖಲಿಸಿಕೊಳ್ಳಾಗಿದೆ ಎಂದು ವಿವರಿಸಿದ್ದಾರೆ.