ಜೈಪುರ್: ಮಹಿಳಾ ನರ್ಸ್ ಒಬ್ಬರು ಎಐಐಎಂಎಸ್(ಏಮ್ಸ್) ಆಸ್ಪತ್ರೆಯಲ್ಲೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಜಸ್ಥಾನದ ಜೋಧಪುರ್‌ನಲ್ಲಿ ನಡೆದಿದೆ.
ಕೇರಳ ಮೂಲದ ಬಿಜು ಪುನೋಜ್ ಆತ್ಮಹತ್ಯೆಗೆ ಶರಣಾದ ನರ್ಸ್. ಬಿಜು ಕಳೆದ ಎರಡು ವರ್ಷಗಳಿಂದ ಈ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡಿಕೊಂಡಿದ್ದರು. ಕಟ್ಟಡದ ಮೂರನೇ ಮಹಡಿಯಲ್ಲಿರುವ ರೂಮಿನಿಂದ ಹೊಗೆ ಬರುತ್ತಿದ್ದಾಗ ದಾರಿಹೋಕರೊಬ್ಬರು ಗಮನಿಸಿ ತಕ್ಷಣ ಆಸ್ಪತ್ರೆಯ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಆಸ್ಪತ್ರೆಯ ಆಡಳಿತಕ್ಕೆ ಮಾಹಿತಿ ತಿಳಿದ ತಕ್ಷಣ ಅಗ್ನಿಶಾಮಕ ಅಧಿಕಾರಿಯನ್ನು ಪರಿಶೀಲಿಸಲು ರೂಮಿನ ಬಳಿ ಕಳುಹಿಸಿದ್ದಾರೆ.
Advertisement
Advertisement
ನರ್ಸ್ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ರೂಮಿನ ಬಾಗಿಲುಗಳನ್ನು ಲಾಕ್ ಮಾಡಿಕೊಂಡಿದ್ದರು. ಸ್ಥಳಕ್ಕೆ ಬಂದ ಅಗ್ನಿಶಾಮಕ ಅಧಿಕಾರಿ ಬಾಗಿಲನ್ನು ಮುರಿದು ರೂಮಿನ ಒಳಗೆ ಹೋಗಿದ್ದಾರೆ. ಆಗ ಬೆಂಕಿಯಲ್ಲಿ ಸುಟ್ಟಿದ್ದ ಮಹಿಳೆಯ ಶವ ಪತ್ತೆಯಾಗಿದೆ. ನಂತರ ಈ ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
Advertisement
ಶನಿವಾರ ರಾತ್ರಿ ಸುಮಾರು 8:30ಕ್ಕೆ ಏಮ್ಸ್ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬಳು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ನಮಗೆ ಮಾಹಿತಿ ಸಿಕ್ಕಿತು. ತಕ್ಷಣ ನಾವು ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದೇವೆ. ಕಟ್ಟಡದ ಮೂರನೇ ಮಹಡಿಯಲ್ಲಿ ಆಪರೇಷನ್ ಥಿಯೇಟರ್ ಬಳಿಯ ರೂಮಿನಲ್ಲಿ ಮಹಿಳೆಯ ಶವ ಪತ್ತೆಯಾಗಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಚೈನ್ ಸಿಂಗ್ ಮಹೇಚಾ ತಿಳಿಸಿದ್ದಾರೆ.
Advertisement
Jodhpur: A nurse committed suicide in a gallery behind Operation Theater in AIIMS by immolating herself yesterday. Police say, "her shift ended at 7:30 pm. We got a call at 8:30 pm. She was from Kerala. A nurse says she was in depression due to some family issues". #Rajasthan pic.twitter.com/ecMei0SiVY
— ANI (@ANI) June 29, 2019
ಇತ್ತೀಚೆಗೆ ಕುಟುಂಬದ ಸಮಸ್ಯೆಗಳ ಬಗ್ಗೆ ಬಿಜು ಪುನೋಜ್ ಖಿನ್ನತೆಯಿಂದ ಬಳಲುತ್ತಿದ್ದರು ಎಂದು ಮಹಿಳೆಯ ರೂಮ್‍ಮೇಟ್ ಹೇಳಿದ್ದಾರೆ. ಆದರೆ ಆಸ್ಪತ್ರೆಯ ರೂಮಿನೊಳಗೆ ಪ್ಲಾಸ್ಟಿಕ್ ಬಾಟಲ್ ನಲ್ಲಿ ಬೆಂಕಿ ತಗಲುವ ವಸ್ತು (inflammable material) ವನ್ನು ಮೊದಲೇ ತೆಗೆದುಕೊಂಡು ಹೋಗಿದ್ದರು ಎಂದು ಪೊಲೀಸರು ಶಂಕಿಸಿದ್ದಾರೆ. ಸದ್ಯಕ್ಕೆ ಈ ಕುರಿತು ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಮುಂದವರಿಸಿದ್ದಾರೆ.