ತುಮಕೂರು: ನಗರದ ಜಿಲ್ಲಾಸ್ಪತ್ರೆಯ ನರ್ಸ್ ಗಳು ಮಾನವೀಯತೆಯನ್ನೇ ಮರೆತಿದ್ದಾರೆ. ಐಸಿಯುನಲ್ಲಿದ್ದ ಮಗುವನ್ನು ಸರಿಯಾಗಿ ಆರೈಕೆ ಮಾಡಲು ಲಂಚಕ್ಕಾಗಿ ಕೈಯೊಡ್ಡಿರುವ ಆರೋಪವೊಂದು ಕೇಳಿಬಂದಿದೆ.
ಈ ಸಂಬಂಧ ಶನಿವಾರ ವಸಂತ ಹಾಗೂ ಜ್ಯೋತಿ ಎಂಬ ಇಬ್ಬರು ನರ್ಸ್‍ಗಳು ರೆಡ್ ಹ್ಯಾಂಡ್ ಸಿಕ್ಕಿಬಿದ್ದಿದ್ದಾರೆ. ಇವರ ಕೈ ಬಿಸಿಯಾಗದಿದ್ದರೆ ಆಗತಾನೇ ಹುಟ್ಟಿದ ನವಜಾತ ಶಿಶುಗಳು ಬದುಕುಳಿಯುವುದು ಕಷ್ಟ ಎನ್ನುವ ಮಟ್ಟಿಗೆ ಲಂಚಾವತಾರ ತಾಂಡವವಾಡುತ್ತಿದೆ. ಈ ಮೂಲಕ ನರ್ಸ್ ಗಳು ನರರಾಕ್ಷಸಿಯರಾಗಿದ್ದಾರೆ.
Advertisement
Advertisement
ಶ್ವಾಸಕೋಶದ ತೊಂದರೆಯಿಂದ ನರಳುತಿದ್ದ ಶಿಶುವನ್ನು ತೀವ್ರ ನಿಗಾ ಘಟಕಕ್ಕೆ ಶಿಫ್ಟ್ ಮಾಡಲಾಗಿತ್ತು. ಮಗುವಿನ ಕೇರ್ ತಗೋಬೇಕಾದರೆ 500 ರೂ. ಕೊಡಬೇಕು ಎಂದು ನರ್ಸ ವಸಂತಾ ಮಗುವಿನ ಪೋಷಕರ ಬಳಿ ಬೇಡಿಕೆ ಇಟ್ಟಿದ್ದಾಳೆ ಎನ್ನಲಾಗಿದೆ.
Advertisement
ಆದ್ರೆ ಮಗುವಿನ ಪೋಷಕರು ಬಡವರಾಗಿದ್ದು, ಹೀಗಾಗಿ ಮಗುವಿನ ತಂದೆ 100 ರೂ. ಕೊಡಲು ಹೋದಾಗ ತಿರಸ್ಕರಿಸಿದ್ದಾರೆ. ಪುಡಿಗಾಸು ನಮಗೆ ಬೇಡಾ…ನಾವೂ ದುಡ್ಡು ನೋಡಿದವರೇ ಎಂದು ಧಮ್ಕಿ ಹಾಕಿದ್ದಾಳೆ. ಬಳಿಕ 200 ರೂ. ಕೊಟ್ಟಾಗ ತೆಗೆದುಕೊಂಡು ಸಹನರ್ಸ್ ಜ್ಯೋತಿಗೂ ಹಂಚಿದ್ದಾಳೆ ಎಂಬುದಾಗಿ ತಿಳಿದುಬಂದಿದೆ.