DistrictsKarnatakaLatestMain PostVijayapura

ಮಕ್ಕಳ ಮಾರಾಟ ದಂಧೆ: ಆರೋಪಿ ನರ್ಸ್ ಜಯಮಾಲಾ ಹೈಡ್ರಾಮಾ

ವಿಜಯಪುರ: ಜಿಲ್ಲೆಯಲ್ಲಿ ಕಾನೂನು ಬಾಹಿರ ಮಕ್ಕಳ ಮಾರಾಟ ದಂಧೆ ಪ್ರಕರಣದದಲ್ಲಿ ನರ್ಸ್ ಜಯಮಾಲಾಳನ್ನು ಪೊಲೀಸರು ಬಂಧಿಸಿದ್ದರು. ಮಹಜರಿಗಾಗಿ ಜಯಮಾಲಾಳನ್ನು ಅವಳ ಮನೆಗೆ ಕರೆತಂದಿದ್ದಾಗ ಹೈಡ್ರಾಮಾ ಮಾಡಿದ್ದಾಳೆ.

ಕಿಂಗ್ ಪಿನ್ ಸ್ಟಾಪ್ ನರ್ಸ್ ಜಯಮಾಲಾ ಅವರನ್ನು ಬಂಧನ ಮಾಡಲಾಗಿದೆ. ಇನ್ನು ಮಹಜರಿಗಾಗಿ ಜಯಮಾಲಾಳನ್ನು ಅವಳ ಮನೆಗೆ ಪೊಲೀಸರು ಕರೆತಂದಿದ್ದರು. ಈ ವೇಳೆ ಚಿತ್ರೀಕರಣಕ್ಕೆ ಮುಂದಾದ ಕ್ಯಾಮೆರಾ ಕಂಡು ನರ್ಸ್ ಜಯಮಾಲಾ ಹೈಡ್ರಾಮಾ ಮಾಡಿದ್ದಾಳೆ. ತನ್ನನ್ನು ಚಿತ್ರೀಕರಿಸದಂತೆ ಜಯಮಾಲಾ ಕ್ಯಾಮೆರಾ ಎದುರು ಕಿಡಿಕಾರಿದ್ದಾಳೆ.

ವಿಜಯಪುರ ನಗರದ ಅಥಣಿ ಗಲ್ಲಿಯಲ್ಲಿ ಜಯಮಾಲಾ ಮನೆಯಲ್ಲಿ ಮಹಜರು ಮಾಡಿದ ಪೊಲೀಸರು ಹೆಚ್ಚಿನ ವಿಚಾರಣೆಗಾಗಿ ನಗರದ ಮಹಿಳಾ ಪೊಲೀಸ್ ಠಾಣೆಗೆ ಕೊಂಡೊಯ್ದಿದ್ದಾರೆ. ಜಯಮಾಲಾ ಮೇಲೆ ಮಕ್ಕಳ ಅಕ್ರಮ ಸಾಗಣೆ ಮತ್ತು ಮಾರಾಟದ ಅರೋಪದ ದೂರು ದಾಖಲಾಗಿದ್ದು, ಸದ್ಯ 5 ಮಕ್ಕಳನ್ನು ಪೊಲೀಸರು ರಕ್ಷಿಸಿದ್ದಾರೆ. ಇದನ್ನೂ ಓದಿ: SSLC ಪ್ರಶ್ನೆ ಪತ್ರಿಕೆ ಸೋರಿಕೆ: ಖಾಸಗಿ ಶಾಲೆಯ ಕ್ಲರ್ಕ್ ಬಂಧನ

Leave a Reply

Your email address will not be published.

Back to top button