ಚಡ್ಡಿ-ಬನಿಯನ್ ಧರಿಸಿ ಆಮೀರ್ ಮಗಳ ಕೈ ಹಿಡಿದ ನೂಪುರ್

Public TV
1 Min Read
Nupur Shikhare Marriage

ನಿನ್ನೆಯಷ್ಟೇ ಬಾಲಿವುಡ್ ಖ್ಯಾತ ನಟ ಆಮೀರ್ ಖಾನ್ (Aamir Khan) ಪುತ್ರಿ ಇರಾ ಖಾನ್ ಮದುವೆಯಾಗಿದೆ. ಇರಾ ಖಾನ್ (Ira Khan) ಮತ್ತು ನೂಪುರ್ ಶಿಖಾರೆ (Nupur Shikhare) ಮದುವೆ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿವೆ. ಫೋಟೋ ವೈರಲ್ ಆಗಲು ಕಾರಣ, ನೂಪುರ್ ಧರಿಸಿರುವ ಕಾಸ್ಟ್ಯೂಮ್.

ira khan 1 1

ಸಾಮಾನ್ಯವಾಗಿ ಮದುವೆಯಲ್ಲಿ ಲಕ್ಷಾಂತರ ಬೆಲೆ ಬಾಳು ಸೂಟ್ ಧರಿಸೋದು ವಾಡಿಕೆ. ಆದರೆ, ಮದುವೆಯ ಸಂದರ್ಭದಲ್ಲಿ ನೂಪುರ್ ಚಡ್ಡಿ ಮತ್ತು ಬನಿಯನ್ ಧರಿಸಿದ್ದಾರೆ. ಈ ಕಾಸ್ಟ್ಯೂಮ್ ನೋಡಿದ ಅಭಿಮಾನಿಗಳು ಇದ್ಯಾವ ರೀತಿಯ ದಿರಿಸು ಎಂದು ಕಾಮೆಂಟ್ ಮಾಡಿದ್ದಾರೆ. ಜೊತೆಗೆ ಅಚ್ಚರಿಯನ್ನೂ ವ್ಯಕ್ತ ಪಡಿಸಿದ್ದಾರೆ.

ira khan 2

ಮುಂಬೈನ ಖಾಸಗಿ ಹೋಟೆಲ್‌ನಲ್ಲಿ ಈ ಮದುವೆ (Wedding) ಅದ್ದೂರಿಯಾಗಿ ನೆರವೇರಿದ್ದು, ಇರಾ- ನೂಪುರ್ ಶಿಖಾರೆ ಜೋಡಿ ಮರಾಠಿ ಪದ್ಧತಿಯಂತೆ ಮದುವೆಯಾಗಿದ್ದಾರೆ. ಗುರುಹಿಯರ ಸಮ್ಮುಖದಲ್ಲಿ ಹೊಸ ಬಾಳಿಗೆ ಇರಾ-ನೂಪುರ್ ಜೋಡಿ ಕಾಲಿಟ್ಟಿದ್ದಾರೆ.

ira khan

ಆಮೀರ್ ಖಾನ್- ಮಾಜಿ ಮೊದಲ ಪತ್ನಿ ರೀನಾ ದತ್ತ ಅವರ ಪುತ್ರಿ ಇರಾ, ಕೋರ್ಟ್ ಮ್ಯಾರೇಜ್ ಜೊತೆಗೆ ಮಹಾರಾಷ್ಟ್ರದ ಸಂಪ್ರದಾಯಿಕ ಶೈಲಿಯಲ್ಲಿ ಇರಾ ಖಾನ್- ನೂಪುರ್ ಮದುವೆ ನಡೆದಿದೆ. ಮದುವೆಯ ಬಳಿಕ ರಾಜಸ್ಥಾನದಲ್ಲಿ ಅದ್ದೂರಿಯಾಗಿ ಆರತಕ್ಷತೆ ಕಾರ್ಯಕ್ರಮ ಮಾಡಲು ಪ್ಲ್ಯಾನ್ ಮಾಡಲಾಗಿದೆ.

 

ಆಮೀರ್ ಪುತ್ರಿ ಇರಾ ಖಾನ್ ಅವರು ನೂಪುರ್ ಜೊತೆ ಹಲವು ವರ್ಷಗಳಿಂದ ಒಬ್ಬರನೊಬ್ಬರು ಪ್ರೀತಿಸುತ್ತಿದ್ದರು. ಇದೀಗ ಗುರುಹಿರಿಯರ ಸಮ್ಮತಿಯ ಮೇರೆಗೆ ಹೊಸ ಬಾಳಿಗೆ ಕಾಲಿಡುತ್ತಿದ್ದಾರೆ.

Share This Article