ನವದೆಹಲಿ: ಬಿಜೆಪಿಯ ಮಾಜಿ ವಕ್ತಾರೆ ನೂಪುರ್ ಶರ್ಮಾ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನ್ಯಾಯಾಧೀಶರು ವ್ಯಕ್ತಪಡಿಸಿದ ಅಭಿಪ್ರಾಯದ ವಿರುದ್ಧ ಬಹಿರಂಗ ಪತ್ರ ಬರೆಯಲಾಗಿದ್ದು, ಸುಪ್ರೀಂಕೋರ್ಟ್ `ಲಕ್ಷ್ಮಣ ರೇಖೆಯನ್ನು’ ಮೀರಿದ್ದು ತುರ್ತಾಗಿ ಸರಿಪಡಿಸುವ ಅವಶ್ಯಕತೆಯಿದೆ ಎಂದು ಉಲ್ಲೇಖಿಸಲಾಗಿದೆ.
ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಹಾಗೂ ಜೆ.ಬಿ.ಪರ್ದಿವಾಲಾ ಅವರಿದ್ದ ದ್ವಿಸದಸ್ಯ ಪೀಠವು ವಿಚಾರಣೆ ಬಳಿಕ ವ್ಯಕ್ತಪಡಿಸಿದ ಅಭಿಪ್ರಾಯವನ್ನು ಟೀಕಿಸಿ 15 ಮಂದಿ ನಿವೃತ್ತ ನ್ಯಾಯಾಧೀಶರು, 77 ಐಎಎಸ್ ಅಧಿಕಾರಿಗಳು 25 ಮಂದಿ ವಿವಿಧ ವಲಯದ ಅನುಭವಿಗಳು ಈ ಬಹಿರಂಗ ಪತ್ರವನ್ನು ಬರೆದಿದ್ದು ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ನಾಯಿಕಚ್ಚಿ ರೇಬಿಸ್ ಕಾಯಿಲೆಯಿಂದ ಬಳಲುತ್ತಿದ್ದ ಕಾಲೇಜು ವಿದ್ಯಾರ್ಥಿನಿ ಸಾವು
ಪತ್ರದಲ್ಲಿ, ಇತ್ತಿಚೆಗೆ ನ್ಯಾಯಾಧೀಶರು ವ್ಯಕ್ತಪಡಿಸಿದ್ದ ಭಿನ್ನಾಭಿಪ್ರಾಯಗಳು ದುರದೃಷ್ಟಕರವಾಗಿದೆ. ಇದು ಪ್ರಜಾಪ್ರಭುತ್ವದ ನ್ಯಾಯಂಗ ವ್ಯವಸ್ಥೆಯ ಮೇಲೂ ಅಳಿಸಲಾಗದ ಗಾಯವನ್ನುಂಟುಮಾಡಿದೆ. ದೇಶದ ಭದ್ರತೆಯ ಮೇಲೂ ಗಂಭೀರ ಪರಿಣಾಮ ಬೀರುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ತುರ್ತಾಗಿ ಸರಿಪಡಿಸುವ ಅಗತ್ಯವಿದೆ ಎಂದು ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಪ್ರಿಯಕರನ ಜೊತೆ ಸಿಕ್ಕಿಬಿದ್ದ ಮಹಿಳೆಗೆ ಗಂಡನನ್ನು ಹೆಗಲ ಮೇಲೆ ಹೊತ್ತು ನಡೆಯೋ ಶಿಕ್ಷೆ!
ಬಾಂಬೆ ಹೈಕೋರ್ಟ್ನ ಮಾಜಿ ಮುಖ್ಯ ನ್ಯಾಯಮೂರ್ತಿ ಕ್ಷಿತಿಜ್ ವ್ಯಾಸ್, ಗುಜರಾತ್ ಹೈಕೋರ್ಟ್ ಮಾಜಿ ನ್ಯಾಯಾಧೀಶ ಎಸ್.ಎಂ.ಸೋನಿ, ರಾಜಸ್ಥಾನ ಹೈಕೋರ್ಟ್‌ನ ಮಾಜಿ ನ್ಯಾಯಾಧೀಶರಾದ ಆರ್.ಎಸ್.ರಾಥೋಡ್ ಮತ್ತು ಪ್ರಶಾಂತ್ ಅಗರ್ವಾಲ್ ಹಾಗೂ ದೆಹಲಿ ಹೈಕೋರ್ಟ್ ಮಾಜಿ ನ್ಯಾಯಾಧೀಶ ಎಸ್.ಎನ್.ಧಿಂಗ್ರಾ, ಮಾಜಿ ಐಎಎಸ್ ಅಧಿಕಾರಿಗಳಾದ ಆರ್.ಎಸ್.ಗೋಪಾಲನ್ ಮತ್ತು ಎಸ್.ಕೃಷ್ಣ ಕುಮಾರ್, ರಾಯಭಾರಿ (ನಿವೃತ್ತ) ನಿರಂಜನ್ ದೇಸಾಯಿ, ಮಾಜಿ ಡಿಜಿಪಿಗಳಾದ ಎಸ್ಪಿ ವೈದ್ ಮತ್ತು ಬಿಎಲ್ ವೋಹ್ರಾ, ಲೆಫ್ಟಿನೆಂಟ್ ಜನರಲ್ ವಿ.ಕೆ.ಚತುರ್ವೇದಿ (ನಿವೃತ್ತ) ಮತ್ತು ಏರ್ ಮಾರ್ಷಲ್ (ನಿವೃತ್ತ) ಎಸ್.ಪಿ.ಸಿಂಗ್ ಈ ಪತ್ರಕ್ಕೆ ಸಹಿ ಹಾಕಿದ್ದಾರೆ.
ಈಚೆಗಷ್ಟೇ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಸಿದ ಪೀಠವು ಉದಯಪುರನಲ್ಲಿ ನಡೆದ ಕನ್ಹಯ್ಯಲಾಲ್ ಹತ್ಯೆಗೆ, ದೇಶದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡಲು ನೂಪುರ್ ಶರ್ಮಾ ಅವರೇ ನೇರ ಕಾರಣ. ಅವರು ದೇಶದ ಕ್ಷಮೆ ಕೇಳಬೇಕು ಎಂದು ಹೇಳಿತ್ತು.