ನವದೆಹಲಿ: ಸಾರ್ವಜನಿಕ ವಲಯದಲ್ಲಿರುವ 21 ಬ್ಯಾಂಕ್ ಗಳನ್ನು 12ಕ್ಕೆ ಇಳಿಸಲು ಕೇಂದ್ರ ಸರ್ಕಾರ ಮುಂದಾಗಿದ್ದು, ಈ ನಿಟ್ಟಿನಲ್ಲಿ ಮತ್ತೊಂದು ಬ್ಯಾಂಕ್ ಗಳ ವಿಲೀನ ಪ್ರಕ್ರಿಯೆ ನಡೆಯುವ ಸಾಧ್ಯತೆಯಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಜೊತೆ 5 ಬ್ಯಾಂಕ್ ಗಳು ವಿಲೀನ ಪ್ರಕ್ರಿಯೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಮತ್ತಷ್ಟು ಬ್ಯಾಂಕ್ ಗಳನ್ನು ವಿಲೀನಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ.
Advertisement
ಮೂರು ಬ್ಯಾಂಕ್ ಗಳನ್ನು ಒಂದು ಬ್ಯಾಂಕಿನಲ್ಲಿ ವಿಲೀನಗೊಳಿಸುವುದಾಗಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಝೀ ಬಿಸಿನೆಸ್ ವಾಹಿನಿಯು ಯಾವೆಲ್ಲ ಬ್ಯಾಂಕ್ ಗಳು ಯಾವ ಬ್ಯಾಂಕ್ ಜೊತೆ ವಿಲೀನಗೊಳ್ಳಲಿದೆ ಎನ್ನುವ ವರದಿಯನ್ನು ಪ್ರಕಟಿಸಿದೆ.
Advertisement
21 ಸಣ್ಣ ಪುಟ್ಟ ಬ್ಯಾಂಕ್ ಗಳ ಬದಲಿಗೆ 12 ದೊಡ್ಡ ಬ್ಯಾಂಕ್ ಗಳನ್ನು ಸೃಷ್ಟಿಸಲು ಸರ್ಕಾರ ಮುಂದಾಗಿದೆ. ಎಸ್‍ಬಿಐ ವಿಲೀನದಂತೆ ಮತ್ತಷ್ಟು ಬ್ಯಾಂಕ್ ಗಳನ್ನು ಮುಂದೆ ವಿಲೀನ ಮಾಡಲಾಗುವುದು ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಜೂನ್ ಮೊದಲ ವಾರದಲ್ಲಿ ಹೇಳಿಕೆ ನೀಡಿದ್ದರು.
Advertisement
ಯಾವ ಬ್ಯಾಂಕ್ ಯಾವ ಬ್ಯಾಂಕ್ ಜೊತೆ ವಿಲೀನ
1. ಯುನೈಟೆಡ್ ಬ್ಯಾಂಕ್ + ಪಂಜಾಬ್ ಆಂಡ್ ಸಿಂಧ್ ಬ್ಯಾಂಕ್ —-> ಬ್ಯಾಂಕ್ ಆಫ್ ಬರೋಡಾ
2. ಸಿಂಡಿಕೇಟ್ ಬ್ಯಾಂಕ್ + ಇಂಡಿಯನ್ ಓವರ್‍ಸೀಸ್ ಬ್ಯಾಂಕ್ + ಯುಕೋ ಬ್ಯಾಂಕ್ —-> ಕೆನರಾ ಬ್ಯಾಂಕ್
3. ಐಡಿಬಿಐ ಬ್ಯಾಂಕ್ + ಸೆಂಟ್ರಲ್ ಬ್ಯಾಂಕ್ + ದೆನಾ ಬ್ಯಾಂಕ್ —-> ಯೂನಿಯನ್ ಬ್ಯಾಂಕ್
4. ಆಂಧ್ರ ಬ್ಯಾಂಕ್ + ಬ್ಯಾಂಕ್ ಆಫ್ ಮಹಾರಾಷ್ಟ್ರ+ ವಿಜಯ ಬ್ಯಾಂಕ್ —-> ಬ್ಯಾಂಕ್ ಆಫ್ ಇಂಡಿಯಾ
Advertisement
ಬ್ಯಾಂಕ್ ಗಳು ಎಸ್‍ಬಿಐ ಜೊತೆ ವಿಲೀನವಾಗಿದ್ದು ಯಾಕೆ?
ವಿಶ್ವದ ಟಾಪ್ 50 ಪಟ್ಟಿಯಲ್ಲಿ ಭಾರತದ ಯಾವೊಂದು ಬ್ಯಾಂಕ್ ಸ್ಥಾನ ಪಡೆದಿಲ್ಲ. ಈ ಪಟ್ಟಿಯಲ್ಲಿ ಸ್ಥಾನ ಪಡೆಯಲು ಎಸ್‍ಬಿಐ ಮುಂದಾಗುತ್ತಿದ್ದು, ಕೇಂದ್ರದ ಒಪ್ಪಿಗೆಯ ಹಿನ್ನೆಲೆಯಲ್ಲಿ ಬ್ಯಾಂಕ್‍ಗಳ ವಿಲೀನ ಪ್ರಕ್ರಿಯೆ ನಡೆದಿದೆ. ಸ್ಟೇಟ್ ಬ್ಯಾಂಕ್ ಆಫ್ ಮೈಸೂರು(ಎಸ್‍ಬಿಎಂ), ಸ್ಟೇಟ್ ಬ್ಯಾಂಕ್ ಆಫ್ ಬಿಕಾನೇರ್ ಹಾಗೂ ಜೈಪುರ್ (ಎಎಸ್‍ಬಿಜೆ), ಸ್ಟೇಟ್ ಬ್ಯಾಂಕ್ ಆಫ್ ಟ್ರಾವಂಕೂರ್(ಎಸ್‍ಟಿ), ಸ್ಟೇಟ್ ಬ್ಯಾಂಕ್ ಪಟಿಯಾಲಾ (ಎಎಸ್‍ಬಿಪಿ), ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ (ಎಎಸ್‍ಬಿಎಚ್)ಹಾಗೂ ಭಾರತೀಯ ಮಹಿಳಾ ಬ್ಯಾಂಕ್ (ಬಿಬಿಎಂ)ಗಳು ಎಸ್‍ಬಿಐ ಜೊತೆ ಏಪ್ರಿಲ್ 1ರಂದು ವಿಲೀನವಾಗಿತ್ತು.