ಚಾಮರಾಜನಗರ: ಹುಲಿ ಸಂರಕ್ಷಿತಾರಣ್ಯ ಬಂಡೀಪುರ (Bandipur Tiger Reserve) ಈಗ ರಾಜ್ಯದಲ್ಲೇ ಅತಿಹೆಚ್ಚು ಆನೆಗಳನ್ನು (Elephants) ಹೊಂದಿದ ಅರಣ್ಯ ಪ್ರದೇಶವಾಗಿಯೂ ಗುರುತಿಸಿಕೊಂಡಿದೆ.
ಚಾಮರಾಜನಗರ (Chamarajanagar) ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಅರಣ್ಯ ವ್ಯಾಪ್ತಿಯಲ್ಲಿ 1,116 ಆನೆಗಳು ಪತ್ತೆಯಾಗಿದ್ದು, ರಾಜ್ಯದಲ್ಲೇ ನಂ.1 ಅರಣ್ಯ ಪ್ರದೇಶವಾಗಿದೆ. ಜೊತೆಗೆ ವನ್ಯಪ್ರಿಯರ ಹಾಟ್‌ಸ್ಪಾಟ್ ಆಗಿಯೂ ಬಂಡೀಪುರ ಗುರುತಿಸಿಕೊಂಡಿದೆ ಎಂದು ಬಂಡೀಪುರ ಮುಖ್ಯ ಅರಣ್ಯಾಧಿಕಾರಿ ರಮೇಶ್ ಕುಮಾರ್ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಬಿಜೆಪಿ ವಿರುದ್ಧದ 40% ಆರೋಪ ಸತ್ಯ, ಡಿಕೆಶಿ ವಿರುದ್ಧ 15% ಕಮಿಷನ್ ಆರೋಪ ಸುಳ್ಳು: ರಾಮಲಿಂಗಾ ರೆಡ್ಡಿ
Advertisement
Advertisement
6 ವರ್ಷಗಳಲ್ಲಿ ಆನೆಗಳ ಸಂಖ್ಯೆ ಹೆಚ್ಚಳ:
ಕಳೆದ 6 ವರ್ಷಗಳ ಅವಧಿಯಲ್ಲಿ ಆನೆಗಳ ಸಂಖ್ಯೆ 3146 ರಷ್ಟು ಹೆಚ್ಚಳವಾಗಿದೆ. ಇದರೊಂದಿಗೆ ದೇಶದಲ್ಲಿ ಈಗಾಗಲೇ ಹುಲಿಗಳ ಸಂಖ್ಯೆಯಲ್ಲಿ 2ನೇ ಸ್ಥಾನದಲ್ಲಿರುವ ಕರ್ನಾಟಕ ಆನೆಗಳ ಸಂಖ್ಯೆಯಲ್ಲಿ ಮೊದಲ ಸ್ಥಾನಕ್ಕೇರಿದೆ. ರಾಜ್ಯದಲ್ಲೀಗ ಒಟ್ಟು 6,395 ಆನೆಗಳಿವೆ. ಇದನ್ನೂ ಓದಿ: ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳೀಧರನ್ ಹೊಸ ಇನ್ನಿಂಗ್ಸ್ ಆರಂಭ – ಧಾರವಾಡದಲ್ಲಿ 900 ಕೋಟಿ ಹೂಡಿಕೆ
Advertisement
ಬಂಡೀಪುರ ನಂ.1:
ರಾಜ್ಯದಲ್ಲಿ ಒಟ್ಟು 23 ಅರಣ್ಯ ಪ್ರದೇಶಗಳಿವೆ. ಈ ಪೈಕಿ ಬಂಡೀಪುರ ಹುಲಿ ಸಂರಕ್ಷಿತಾರಣ್ಯದಲ್ಲಿ 1,116 ಆನೆಗಳಿದ್ದು, ರಾಜ್ಯದಲ್ಲೇ ಅತಿಹೆಚ್ಚು ಆನೆಗಳನ್ನು ಹೊಂದಿರುವ ಅರಣ್ಯವಾಗಿದೆ. ನಾಗರಹೊಳೆ ಅರಣ್ಯ (Nagarahole Forest) ವ್ಯಾಪ್ತಿಯಲ್ಲಿ 831, ಯಲ್ಲಾಪುರ, ಹಳಿಯಾಳ, ಕುದುರೆಮುಖ ಮತ್ತು ಭದ್ರಾವತಿ ಅರಣ್ಯದಲ್ಲಿ ಅತಿ ಕಡಿಮೆ ಆನೆಗಳಿವೆ. ಯಲ್ಲಾಪುರದಲ್ಲಿ 2, ಹಳಿಯಾಳದಲ್ಲಿ 3, ಕುದುರೆಮುಖದಲ್ಲಿ 5 ಮತ್ತು ಭದ್ರಾವತಿಯಲ್ಲಿ 8 ಆನೆಗಳಿವೆ. ಇದರೊಂದಿಗೆ ಮಲೆ ಮಹದೇಶ್ವರ ವನ್ಯಧಾಮದಲ್ಲಿ 706, ಬಿಳಿಗಿರಿ ರಂಗನಬೆಟ್ಟ ಹುಲಿ ಸಂರಕ್ಷಿತಾರಣ್ಯದಲ್ಲಿ 619 ಆನೆಗಳು ಪತ್ತೆಯಾಗಿದ್ದು, ರಾಜ್ಯದಲ್ಲಿರುವ ಒಟ್ಟು 6,395 ಆನೆಗಳಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
Advertisement
ಆನೆ ಗಣತಿ ನಡೆದಿದ್ದು ಹೇಗೆ?
ಕರ್ನಾಟಕ, ಕೇರಳ ಮತ್ತು ತಮಿಳುನಾಡು ರಾಜ್ಯಗಳ ಮುಂದಾಳತ್ವದೊಂದಿಗೆ 2023ರ ಮೇ 19-19ರ ವರೆಗೆ ಏಕಕಾಲದಲ್ಲಿ ಆನೆಗಳ ಗಣತಿ ನಡೆಸಲಾಯಿತು. ಅದೇ ದಿನಾಂಕದಂದು ಆಂಧ್ರ ಪ್ರದೇಶದಲ್ಲಿಯೂ ಇದೇ ರೀತಿ ಗಣತಿ ಕಾರ್ಯ ನಡೆಸಲಾಯಿತು. ಭಾರತೀಯ ವಿಜ್ಞಾನ ಸಂಸ್ಥೆಯ ತಾಂತ್ರಿಕ ನೆರವಿನೊಂದಿಗೆ ಕರ್ನಾಟಕ ಅರಣ್ಯ ಇಲಾಖೆಯು ಆನೆಗಳ ಗಣತಿ ನಡೆಸಿದೆ. ರಾಜ್ಯದ 32 ವಿಭಾಗಗಳಿಂದ 3,400ಕ್ಕೂ ಹೆಚ್ಚು ಸಿಬ್ಬಂದಿ ಆನೆಗಳ ಗಣತಿ ಕಾರ್ಯದಲ್ಲಿ ಭಾಗವಹಿಸಿದ್ದರು. ಆನೆಗಣತಿಯನ್ನು ನೇರ ಎಣಿಕೆ, ಬ್ಲಾಕ್ ಎಣಿಕೆ, ಲದ್ದಿ ಎಣಿಕೆ ಮತ್ತು ವಾಟರ್ ಹೋಲ್ ಎಣಿಕೆ ಮೂಲಕ ಕೈಗೊಳ್ಳಲಾಗಿತ್ತು.
ಪ್ರತಿ 5 ವರ್ಷಗಳಿಗೊಮ್ಮೆ ಅರಣ್ಯ ಇಲಾಖೆ ಆನೆ ಗಣತಿ ನಡೆಸಲಿದೆ. ಅದರಂತೆ ಕಳೆದ ಮೇ ತಿಂಗಳಲ್ಲಿ ಆನೆ ಗಣತಿ ನಡೆಸಲಾಗಿತ್ತು. ಗಣತಿಯನ್ವಯ ಬಂಡೀಪುರ ನಂ.1 ಆನೆಗಳ ಆವಾಸಸ್ಥಾನವಾಗಿದೆ. ಹುಲಿಗಳ ಸಂಖ್ಯೆಯಲ್ಲಿ ದೇಶದಲ್ಲೇ 2ನೇ ಸ್ಥಾನ ಪಡೆದಿರುವ ಬಂಡೀಪುರ ರಾಜ್ಯಕ್ಕೆ ನಂ.1 ಸ್ಥಾನದಲ್ಲಿದೆ.
Web Stories