ಪವನ್ ಕಲ್ಯಾಣ್ (Pawan Kalyan) ಹಾಗೂ ಜೂ.ಎನ್‌ಟಿಆರ್ ಫ್ಯಾನ್ಸ್ ನಡುವೆ ಮತ್ತೆ ಯುದ್ಧ ಶುರುವಾಗಿದೆ. ಸೋಷಿಯಲ್ ಮೀಡಿಯಾದಲ್ಲಂತೂ ಇಬ್ಬರ ಬಳಗದ್ದೇ ಜಗಳ. ಇದೀಗ್ ಎನ್‌ಟಿಆರ್ ಅಭಿಮಾನಿ ಶ್ಯಾಮ್ ಎನ್ನುವವರು ಆತ್ಮಹತ್ಯೆ ಮಾಡಿಕೊಂಡಿದ್ದ ವಿಷಯಕ್ಕೆ ಕೊಲೆ (Murder) ಹಣೆಪಟ್ಟಿ ಕಟ್ಟಲಾಗಿದೆ. ಇದನ್ನು ಪವನ್ ಫ್ಯಾನ್ಸ್ ಮಾಡಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ.
ಜೂ.ಎನ್‌ಟಿಆರ್ (Junior NT) ಗೆ ಅತಿ ಹೆಚ್ಚು ಅಭಿಮಾನಿ ಬಳಗ ಇದೆ. `ಎನ್‌ಟಿಆರ್ ಗ್ಲೋಬಲ್ ಸ್ಟಾರ್’ ಹೀಗಂತ ಮೊನ್ನೆ ಪವನ್ ಹೇಳಿದ್ದರು. ಅದರ ಹಿಂದೆಯೇ ಎನ್‌ಟಿಆರ್ ಅಭಿಮಾನಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆದರೆ ಇದು ಆತ್ಮಹತ್ಯೆ ಅಲ್ಲ, ಪವನ್ ಫ್ಯಾನ್ಸ್ (Fans) ಕೊಲೆ ಮಾಡಿದ್ದಾರೆ ಎಂದು ಎನ್‌ಟಿಆರ್ ಫ್ಯಾನ್ಸ್ ಹೇಳುತ್ತಿದ್ದಾರೆ. ಇದನ್ನೂ ಓದಿ:ಹೊಸ ಸಿನಿಮಾ ಮುನ್ನ ಫ್ಯಾಮಿಲಿ ಜೊತೆ ರಾಜಮೌಳಿ ಟ್ರಿಪ್
`ಪವನ್‌ಗಿಂತ ಎನ್‌ಟಿಆರ್‌ಗೆ ಹೆಚ್ಚು ಬಳಗ ಇದೆ’ ಎಂದು ಆತ್ಮಹತ್ಯೆ ಮಾಡಿಕೊಂಡಿರುವ ಶಾಮ್ ಸೋಶಿಯಲ್ ಮೀಡಿಯಾದಲ್ಲಿ ಬರೆದಿದ್ದರು. ಅದಕ್ಕೆ ಕೊಲೆ ಮಾಡಲಾಗಿದೆ ಎನ್ನುವ ಮಾತು ಹಬ್ಬಿದೆ. ಸತ್ತಿರುವ ಎನ್‌ಟಿಆರ್ ಅಭಿಮಾನಿ ಕೊರಳಿನಲ್ಲಿ ಗಾಯದ ಗುರುತು, ಜೇಬಲ್ಲಿ ನಶೆ ಪದಾರ್ಥದ ಕವರ್ ಸಿಕ್ಕಿವೆ. ಆತ್ಮಹತ್ಯೆ ಎಂದು ಬಿಂಬಿಸಲು ಹೀಗೆ ಮಾಡಿದ್ದಾರೆ. ಹೀಗಂತ ಎನ್‌ಟಿಆರ್ ಫ್ಯಾನ್ಸ್ ಚರ್ಚಿಸುತ್ತಿದ್ದಾರೆ.
ಈ ಹಿಂದೆ ಅನೇಕ ಬಾರಿ ಫ್ಯಾನ್ಸ್ ನಡುವೆ ಗಲಾಟೆ ನಡೆದಿವೆ. ಅತ್ತ ಪವನ್ ಹಾಗೂ ಎನ್‌ಟಿಆರ್ ತಮ್ಮ ಕಾಯಕದಲ್ಲಿ ಬಿಜಿಬಿಜಿ. ಈ ಫ್ಯಾನ್ಸ್ ವಾರ್‌ಗೆ ಯಾವಾಗ ಮುಕ್ತಿಯೋ ಗೊತ್ತಿಲ್ಲ. ಒಂದಂತೂ ಸತ್ಯ. ಸ್ಟಾರ್ಸ್ ಆರಾಮಾಗಿರುತ್ತಾರೆ. ಫ್ಯಾನ್ಸ್ ಹೊಡೆದಾಡಿಕೊಂಡು ಸಾಯುತ್ತಾರೆ. ಇದೇ ಸತ್ಯ, ಅದೇ ನಿತ್ಯ.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]