ನವದೆಹಲಿ: ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಬೆನ್ನಲ್ಲೇ ಯುಜಿಸಿ-ನೆಟ್, ಜಂಟಿ ಸಿಎಸ್ಐಆರ್ ಯುಜಿಸಿ ನೆಟ್, ಎನ್ಸಿಇಟಿ ಪರೀಕ್ಷೆಗಳಿಗೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಹೊಸ ದಿನಾಂಕಗಳನ್ನು ಪ್ರಕಟಿಸಿದೆ.
UGC NET ಜೂನ್ 2024 ಪರೀಕ್ಷೆಗಳನ್ನು ಆಗಸ್ಟ್ 21 ಮತ್ತು ಸೆಪ್ಟೆಂಬರ್ 4 ರ ನಡುವೆ ನಡೆಸಲಾಗುವುದು. ಜಂಟಿ CSIR UGC NET ಅನ್ನು ಜುಲೈ 25 ರಿಂದ ಜುಲೈ 27 ರವರೆಗೆ ಮತ್ತು NCET ಪರೀಕ್ಷೆಗಳನ್ನು ಜುಲೈ 10 ರಂದು ನಡೆಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ದೆಹಲಿ ವಿಮಾನ ನಿಲ್ದಾಣದ ಮೇಲ್ಛಾವಣಿಯನ್ನು ನಾವು ನಿರ್ಮಿಸಿಲ್ಲ, 2009 ರಲ್ಲಿ ಬೇರೊಂದು ಕಂಪನಿ ನಿರ್ಮಿಸಿದೆ: L&T ಸ್ಪಷ್ಟನೆ
Advertisement
Advertisement
ಅಖಿಲ ಭಾರತ ಆಯುಷ್ ಸ್ನಾತಕೋತ್ತರ ಪ್ರವೇಶ ಪರೀಕ್ಷೆ (AIAPGET) 2024 ಈಗಾಗಲೇ ನಿಗದಿಪಡಿಸಿದಂತೆ ಜುಲೈ 6ರಂದು ನಡೆಯಲಿದೆ. ಯುಜಿಸಿ-ನೆಟ್ ಪರೀಕ್ಷೆ ಸೇರಿದಂತೆ ಎಲ್ಲಾ ಪರೀಕ್ಷೆಗಳು ಕಂಪ್ಯೂಟರ್ ಆಧಾರಿತವಾಗಿರುತ್ತವೆ. ಈ ಹಿಂದೆ, ಯುಜಿಸಿ ನೆಟ್ ಜೂನ್ 2024 ಪರೀಕ್ಷೆ ಆಫ್ಲೈನ್ನಲ್ಲಿ ನಡೆದಿತ್ತು.
Advertisement
Advertisement
ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ದೆಹಲಿಯ ಜಂತರ್ಮಂತರ್ನಲ್ಲಿ ವಿದ್ಯಾರ್ಥಿಗಳು ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಮುಂಬರುವ ಬಜೆಟ್ನಲ್ಲಿ ಹೆಜ್ಜಾಲ -ಚಾಮರಾಜನಗರ ರೈಲ್ವೆ ಮಾರ್ಗ ಯೋಜನೆ ಸೇರ್ಪಡೆ: ಅಶ್ವಿನಿ ವೈಷ್ಣವ್