ಖಾಕಿ ಚಡ್ಡಿ ಏನು ಈ ದೇಶದ ರಾಷ್ಟ್ರಧ್ವಜವೇ: ಎನ್‍ಎಸ್‍ಯುಐ ಉಪಾಧ್ಯಕ್ಷೆ

Public TV
1 Min Read
bhavya bengaluru chaddi 1

ಬೆಂಗಳೂರು: ಖಾಕಿ ಚಡ್ಡಿ ಏನು ಈ ದೇಶದ ರಾಷ್ಟ್ರಧ್ವಜಾ ನಾ.. ಎಂದು ಎನ್‍ಎಸ್‍ಯುಐ ಉಪಾಧ್ಯಕ್ಷೆ ಭವ್ಯ ಪ್ರಶ್ನೆ ಮಾಡಿದ್ದಾರೆ.

ಪಠ್ಯಪುಸ್ತಕ ಪರಿಶೀಲನಾ ಸಮಿತಿ ನಿರ್ಧಾರ ವಿರೋಧಿಸಿ ತುಮಕೂರಿನಲ್ಲಿ ಪ್ರತಿಭಟನೆ ಮಾಡಿದಕ್ಕೆ ಎನ್‍ಎಸ್‍ಯುಐ ರಾಜ್ಯಾಧ್ಯಕ್ಷ ಕೀರ್ತಿ ಗಣೇಶ್ ಅವರನ್ನು ಬಂಧಿಸಲಾಗಿದೆ. ಇದನ್ನು ವಿರೋಧಿಸಿ ಇಂದು ಪ್ರತಿಭಟನಾ ಸಭೆಯನ್ನು ಯುವ ಕಾಂಗ್ರೆಸ್ ಆಯೋಜಿಸಿತ್ತು. ಇದನ್ನೂ ಓದಿ: ಕಾಶ್ಮೀರಿ ಪಂಡಿತರ ಮೇಲೆ ದಾಳಿ – 177 ಶಿಕ್ಷಕರ ವರ್ಗಾವಣೆ

bhavya bengaluru chaddi 3

ಪಠ್ಯ ಪರಿಷ್ಕರಣೆ ವೇಳೆ ಬಸವಣ್ಣ, ಕುವೆಂಪು, ನಾರಾಯಣಗುರು ಮತ್ತು ಟಿಪ್ಪು ಸುಲ್ತಾನ್ ಅವರ ವಿಷಯವನ್ನು ಬಿಟ್ಟು, ಕೆಲಸಕ್ಕೆ ಬಾರದೆ ಇರುವ ವಿಷಯಗಳನ್ನು ಪಠ್ಯದಲ್ಲಿ ಸೇರಿಸಲಾಗಿದೆ. ಈ ಮೂಲಕ ಯುವಕರ ಭವಿಷ್ಯ ಹಾಳು ಮಾಡಲಾಗುತ್ತಿದೆ. ಆ ರೀತಿ ನಡೆಯಬಾರದು ಎಂದು ಕೀರ್ತಿ ಗಣೇಶ್ ಅವರು ತಮ್ಮ ಎನ್‍ಎಸ್‍ಯುಐ ಪದಾಧಿಕಾರಿಗಳ ಜೊತೆ ಪ್ರತಿಭಟನೆ ಮಾಡುವುದಕ್ಕೆ ಹೋದ್ರೆ ಅವರನ್ನು ಜೈಲಿಗೆ ಹಾಕಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.

bhavya bengaluru chaddi 2

ಆರ್‍ಎಸ್‍ಎಸ್ ಚಡ್ಡಿಯನ್ನು ಸುಟ್ಟಿದ್ದಕ್ಕೆ ಕೀರ್ತಿ ಗಣೇಶ್ ಅವರನ್ನು ಜೈಲಿಗೆ ಹಾಕಿದ್ದಾರೆ. ಇವತ್ತು ಕೇವಲ ತುಮಕೂರಿನಲ್ಲಿ ಸುಟ್ಟಿದ್ದಾರೆ. ಆದರೆ ಮುಂದೆ ಯುವ ಕಾಂಗ್ರೆಸಿಗರು ಪ್ರತಿಯೊಂದು ಜಿಲ್ಲೆಯಲ್ಲಿಯೂ ಆರ್‌ಎಸ್‍ಎಸ್ ಚಡ್ಡಿಯನ್ನು ಸುಡುತ್ತಾರೆ ನೋಡುತ್ತೀರಿ. ಎಷ್ಟು ಜನಗಳನ್ನು ಬಂಧಿಸುತ್ತೀರಾ ಬಂಧಿಸಿ ಎಂದು ಸವಾಲು ಹಾಕಿದ್ದಾರೆ. ಇದನ್ನೂ ಓದಿ:  ಕೊರೊನಾ ಭೀತಿ: ಸಾರ್ವಜನಿಕ ಸ್ಥಳಗಳಲ್ಲಿ ಮತ್ತೆ ಮಾಸ್ಕ್ ಕಡ್ಡಾಯ 

bhavya bengaluru chaddi 4

ಕೆ.ಎಸ್.ಈಶ್ವರಪ್ಪ ಅವರು ಕೆಂಪುಕೋಟೆ ಮೇಲೆ ಕೇಸರಿ ಧ್ವಜವನ್ನು ಹಾರಿಸುತ್ತೇವೆ ಎಂದು ಹೇಳಿದ್ದರು. ಆದರೆ ಮುಂದಿನ ದಿನಗಳಲ್ಲಿ ಚಡ್ಡಿ ಹಾರಿಸುವುದಿಲ್ಲ ಎಂಬುದಕ್ಕೆ ಏನು ಗ್ಯಾರಂಟಿ? ಆದರೆ ಇದೇ ರೀತಿ ಬೇರೆ ಯಾರೇ ಮಾತನಾಡಿದ್ರೂ ಅವರಿಗೆ ರಾಷ್ಟ್ರದ್ರೋಹಿ ಎಂದು ಪಟ್ಟಕಟ್ಟಿ ಜೈಲಿಗೆ ಕಳುಹಿಸುತ್ತಿದ್ದರು ಎಂದು ಟೀಕಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *