ಬೆಂಗಳೂರು: ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ, ಕರ್ನಾಟಕ (NSUI)ರವರ ವತಿಯಿಂದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ವಿದ್ಯಾರ್ಥಿಗಳು,ವಿದ್ಯಾರ್ಥಿ ಸಮೂಹದ ಮಾರಕವಾಗಿರುವ ಕೆಲವು ಗಂಭೀರ ವಿಷಯಗಳ ಬಗ್ಗೆ ಮೌರ್ಯ ವೃತ್ತ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಲಾಯಿತು.
Advertisement
ಯು.ಜಿ.ಸಿ. ಮಾರ್ಗಸೂಚಿಯನ್ವಯ 2020-21 ನೇ ಶೈಕ್ಷಣಿಕ ವರ್ಷಕ್ಕೆ ಬಡ್ತಿ ಹಾಗೂ ಇಂಟರ್‍ಮೀಡಿಯೇಟ್ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ 2021-22ನೇ ಶೈಕ್ಷಣಿಕ ವರ್ಷವನ್ನು ಪ್ರಾರಂಭಿಸುವ ಬಗ್ಗೆ. ಹಲವಾರು ವಿದ್ಯಾರ್ಥಿಗಳು ಹೇಳುವಂತೆ, ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಪರಿಗಣಿಸುವ ಶೈಕ್ಷಣಿಕ ದಿನಚರಿಯ ವರ್ಷವು ಯು.ಜಿ.ಸಿ ಯವರು ಮತ್ತು ಕರ್ನಾಟಕ ರಾಜ್ಯ ಸರ್ಕಾರವು ರೂಪಿಸಿರುವ ಶೈಕ್ಷಣಿಕ ದಿನಚರಿಯ ವರ್ಷಕ್ಕೆ ಪೂರಕವಾಗಿಲ್ಲ. ಇತರ ವಿಶ್ವವಿದ್ಯಾಲಯಗಳಿಗೆ ಹೋಲಿಸಿದರೆ, ಕ.ರಾ.ಕಾ.ವಿ.ಯ ವಿದ್ಯಾರ್ಥಿಗಳು ಒಂದು ಸೆಮೆಸ್ಟರ್ ಹಿಂದುಳಿದಿದ್ದಾರೆ. ದುರದೃಷ್ಟಕರವೆಂದರೆ, ಕರ್ನಾಟಕ ರಾಜ್ಯದಲ್ಲಿನ ಇತರೆ ವಿಶ್ವವಿದ್ಯಾಲಯಗಳಿಗೆ ಹೋಲಿಕೆ ಮಾಡಿದರೆ, ಕ.ರಾ.ಕಾ.ವಿ.ದ ಶೈಕ್ಷಣಿಕ ವರ್ಷವನ್ನು ವಿಳಂಬವಾಗಿ ಪ್ರಾರಂಭಿಸುವುದಿರಿಂದ, ಕ.ರಾ.ಕಾ.ವಿ.ದ ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ವೃತ್ತಿಪರತೆಗೂ ದೂರಗಾಮಿಯಾಗಿ ವ್ಯತಿರಿಕ್ತ ಪರಿಣಾಮ ಉಂಟು ಮಾಡುತ್ತದೆ. ಇದನ್ನೂ ಓದಿ: ಕೃಷಿ ವಿಜ್ಞಾನಗಳ ವಿವಿ 11ನೇ ಘಟಿಕೋತ್ಸವ- ರಾಜ್ಯಪಾಲರಿಂದ ಪದವಿ ಪ್ರದಾನ
Advertisement
ಎನ್‍ಎಸ್‍ಯುಐ ಕರ್ನಾಟಕ ಘಟಕದ ವತಿಯಿಂದ ಕಾನೂನು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಕಳಕಳಿ ಮನವಿ ಮಾಡಿಕೊಂಡಿದ್ದು, ಇಂಟರ್‍ಮೀಡಿಯೇಟ್ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ (ODD. ಸೆಮೆಸ್ಟರ್) ಯುಜಿ.ಸಿ. ಮಾರ್ಗಸೂಚಿ ಮತ್ತು ಕರ್ನಾಟಕ ಸರ್ಕಾರದ ಮಾರ್ಗಸೂಚಿಯಂತೆ (50-50 ಅನುಪಾತದ ಮೌಲ್ಯಮಾಪನದಂತೆ) ನೂತನಪ್ರಾರಂಭಿಸಬೇಕೆಂದು ಕೋರುತ್ತೇವೆ. ಶೈಕ್ಷಣಿಕ ವರ್ಷವನ್ನು ಹಿಂದಿನ ಸೆಮೆಸ್ಟರ್ ಫಲಿತಾಂಶಗಳಲ್ಲಿ ಗೊಂದಲ ಮೂಡಿರುವುದು (ಮಾರ್ಚ್-ಜುಲೈ 2021ರಲ್ಲಿನ ಓಡಿಡಿ ಸೆಮೆಸ್ಟರ್) ಹಲವಾರು ವಿದ್ಯಾರ್ಥಿಗಳು ಹೇಳುವಂತೆ, ODD ಸೆಮೆಸ್ಟರ್ ಫಲಿತಾಂಶಗಳ ಪ್ರಕಟಣೆಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ಹಲವಾರು ರೀತಿಯಲ್ಲಿ ಗೊಂದಲಗಳನ್ನು ಎದುರಿಸುತ್ತಿದ್ದಾರೆ. ಇದನ್ನೂ ಓದಿ: ಮನ್ ಕಿ ಬಾತ್: ಕೋವಿಡ್ ಇನ್ನೂ ಹೋಗಿಲ್ಲ- ದೇಶದ ಜನತೆಗೆ ಪ್ರಧಾನಿ ಮೋದಿ ಎಚ್ಚರಿಕೆ
Advertisement
ಫಲಿತಾಂಶಗಳು ಪ್ರಕಟವಾದ 2 ತಿಂಗಳ ನಂತರವೂ ಹಲವಾರು ವಿದ್ಯಾರ್ಥಿಗಳಿಗೆ ಥಿಯರಿ ಅಂಕಗಳನ್ನು ನಂತರ ಪ್ರಕಟಿಸಲಾಗುವುದು To be annoubced Later(TBAL) ಎಂಬುದಾಗಿ ತೋರಿಸಲಾಗಿದೆ. ಹಲವಾರು ವಿದ್ಯಾರ್ಥಿಗಳಿಗೆ ಅಂಕಪಟ್ಟಿಯಲ್ಲಿ ಸಂಬಂಧಪಟ್ಟ ವಿಷಯಗಳಲ್ಲಿ ಥಿಯರಿ ಅಂಕಗಳನ್ನು ತೋರಿಸಿದ್ದು, ಅದೇ ವಿಷಯಕ್ಕೆ ಸಂಬಂಧಪಟ್ಟಂತೆ ಆಂತರಿಕ ಅಂಕಪಟ್ಟಿಯಲ್ಲಿ ಇಂದೀಕರಿಸುವಾಗ ತಿದ್ದಲಾಗಿದೆ. ಕೆಲವು ವಿದ್ಯಾರ್ಥಿಗಳಿಗೆ, ಹಲವಾರು ವಿಷಯಗಳ (ಥಿಯರಿ+ಆಂತರಿಕ) ಫಲಿತಾಂಶವನ್ನು ಅಂಕಪಟ್ಟಿಯಿಂದ ಕೈಬಿಡಲಾಗಿದೆ.
Advertisement
ಮಾನ್ಯ ಕರ್ನಾಟಕ ಉಚ್ಚನ್ಯಾಯಾಲಯದಲ್ಲಿನ ದಾವೆ 30.14389/2021, 2922/2021 ಮತ್ತು 15571/201 ಪ್ರಕರಣಗಳಲ್ಲಿ ಮಾನ್ಯ ನ್ಯಾಯಾಲಯವು ತೀರ್ಪು ನೀಡಿದ್ದು, ಅದರಂತೆ ಸೆಮೆಸ್ಟರ್ ಪರೀಕ್ಷೆಗಳಿಗೆ 50-50 ಅನುಪಾತದಲ್ಲಿ ಮೌಲ್ಯಮಾಪನ ನಡೆದಿದ್ದರೂ ಸಹ, ಹಲವಾರು ವಿದ್ಯಾರ್ಥಿಗಳಿಗೆ ಜೂನ್ 2020ರ ಫಲಿತಾಂಶವು ಇನ್ನೂ ತಲುಪಿಲ್ಲ, ಅಂಕಪಟ್ಟಿಯು ಅಪ್‍ಲೋಡ್ ಆಗಿರುವುದಿಲ್ಲ. ಕೆಲವು ಪುನರಾವರ್ತಿತ ವಿದ್ಯಾರ್ಥಿಗಳಿಗೆ ಸದರಿ ಅಂಕಪಟ್ಟಿಯಲ್ಲಾದ ಲೋಪದೋಷಗಳಿಂದಾಗಿ ಅವರುಗಳನ್ನು ವೃತ್ತಿಪರ ಸದರಿ ಅಂಕಪಟ್ಟಿಯಲ್ಲಾದ ಪದವಿ ಪ್ರಮಾಣಪತ್ರಗಳನ್ನು ಪಡೆಯಲಾಗದಂತೆ ನಿರಾಕರಿಸುವಂತಾಗುತ್ತದೆ. ಆದ್ದರಿಂದ, ಎನ್‍ಎಸ್‍ಯುಐ ಕರ್ನಾಟಕ ಘಟಕವು ಕಳಕಳಿಯಿಂದ ಮನವಿ ಸಲ್ಲಿಸುವುದೇನೆಂದರೆ, ಇನ್ನೂ ಪ್ರಕಟವಾಗದ ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶವನ್ನು ತಕ್ಷಣ ಪ್ರಕಟಿಸುವಂತೆ ಮತ್ತು ಅಂಕಪಟ್ಟಿಗಳಲ್ಲಿ (2.ಬಿ,2ಸಿ) ಸದರಿ ತಾಂತ್ರಿಕ ದೋಷಗಳಿಗೆ ಸೂಕ್ತ ತಿದ್ದುಪಡಿಗಳನ್ನು ಮಾಡುವಂತೆ ಕೋರಿದ್ದಾರೆ.
ಪರೀಕ್ಷಾ ವೇಳಾಪಟ್ಟಿಯನ್ನು ಪ್ರಕಟಿಸುವಿಕೆ
ಹಲವಾರು ವಿದ್ಯಾರ್ಥಿಗಳು ಹೇಳುವಂತೆ, ಹಿಂದಿನ ಸೆಮೆಸ್ಟರ್ ಪರೀಕ್ಷೆಗಳಿಗೆ ಅಂತಿಗೊಳಿಸಲಾದ ಪರೀಕ್ಷಾ ವೇಳಾಪಟ್ಟಿಯನ್ನು ಪರೀಕ್ಷೆಗಳು ಶುರುವಾಗುವ ಕೇವಲ 10 ದಿನಗಳ ಮೊದಲು ಬಿಡುಗಡೆ ಮಾಡಲಾಯಿತು. ಇದರಿಂದ ತೊಂದರೆಯಾಗಿದ್ದು, ಹಾಗಾಗಿ ಈ ಬಾರಿ ಈ ತೊಂದರೆ ನಿವಾರಣೆಗೆ ಪಟ್ಟು ಹಿಡಿದಿದ್ದಾರೆ. ಇದನ್ನೂ ಓದಿ: ನಾನು ಅಧಿಕಾರ ಬಯಸಿಲ್ಲ, ಜನ ಸೇವೆಯೇ ಗುರಿ: ಮೋದಿ
ಪ್ರತಿಭಟನೆಯಲ್ಲಿ ಎನ್.ಎಸ್.ಯು.ಐ. ಉಪಾಧ್ಯಕ್ಷರಾದ ಜಯೇಂದ್ರರ್ ಸಾಯಿ ,ಪ್ರಧಾನ ಕಾರ್ಯದರ್ಶಿಗಳಾದ ಮನೀಶ್ ಜಿ.ರಾಜ್ ಮೊಹಮ್ಮದ್ ಆಫೀದ್ ,ಮಾರುತಿ ,ದೀಪಕ್ ಗೌಡ, ರಾಹುಲ್ ಗೌಡ, ವಿಶ್ವವಿದ್ಯಾನಿಲಯದ ಸಂಯೋಜಕರಾದ ಹೃತಿಕ್, ವರುಣ್ ಗೌಡ, ರಿತ್ವಿಕ್ ಬಾಲ ಹಾಗೂ ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.