ಮುಂಬೈ: ಬಾಲಿವುಡ್ ಸ್ಟಾರ್‍ಗಳು ತಾವು ಎಷ್ಟೇ ಬ್ಯೂಸಿ ಆಗಿದ್ದರೂ ಸಂಪ್ರಾದಾಯಿಕ ಹಬ್ಬಗಳಲ್ಲಿ ಭಾಗಿಯಾಗುವುದನ್ನು ಯಾವತ್ತು ಮಿಸ್ ಮಾಡಿಕೊಳ್ಳಲ್ಲ. ಪ್ರತಿವರ್ಷದಂತೆ ಈ ಬಾರಿಯೂ ಬಿ-ಟೌನ್ ಸ್ಟಾರ್ ಗಳು ದೀಪಾವಳಿಯನ್ನು ಅತ್ಯಂತ ಸಡಗರದಿಂದ ಆಚರಿಸಿದ್ದಾರೆ.
ಶಾರುಖ್ ಖಾನ್, ಆಮೀರ್ ಖಾನ್, ವರುಣ್ ಧವನ್, ಆಭಿಷೇಕ್ ಬಚ್ಚನ್, ಕಂಗನಾ ರಣಾವತ್, ಶಿಲ್ಪಾ ಶೆಟ್ಟಿ, ಕರೀನಾ ಕಪೂರ್ ಸೇರಿದಂತೆ ಬಾಲಿವುಡ್ ಬಳಗ ಸಂಭ್ರಮದ ದೀಪಾವಳಿಯನ್ನು ಆಚರಿಸಿದ್ದಾರೆ. ಹಬ್ಬಕ್ಕಾಗಿ ತಮ್ಮ ಸಹ ನಟ-ನಟಿಯರನ್ನು ಮನೆಗೆ ಆಹ್ವಾನ ನೀಡಿ ಸತ್ಕರಿಸಿದ್ದಾರೆ.
Advertisement
ಕುಟುಂಬದ ಸದಸ್ಯರೊಂದಿಗೆ ದೀಪಾವಳಿ ಆಚರಿಸಿರುವ ಫೋಟೋಗಳನ್ನು ತಾರೆಯರು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾರೆ. ಇನ್ನೂ ಕೆಲವರು ಹಬ್ಬದ ಆಚರಣೆಯೊಂದಿಗೆ ಮೋಜು ಮಸ್ತಿಯನ್ನು ಸಹ ಮಾಡಿದ್ದಾರೆ.