– ಕುರುಬ ಸಮುದಾಯದ ಬೇಡಿಕೆ ಶೀಘ್ರದಲ್ಲೇ ನೆರವೇರುವ ಸಾಧ್ಯತೆಯಿದೆ
ಮಡಿಕೇರಿ: ಜಾತಿ ಜನಗಣತಿ (Caste census) ಕಾಲಂನಲ್ಲಿ ತಾವಾಗಿಯೇ ಮತಾಂತರ ಆಗುವವರಿಗೆ ಅವಕಾಶ ಇದೆ ಎಂದು ಸಚಿವ ಎನ್.ಎಸ್ ಬೋಸರಾಜು (NS Bosaraju) ಹೇಳಿದ್ದಾರೆ.
ಮಡಿಕೇರಿಯಲ್ಲಿ ಜಾತಿ ಜನಗಣತಿ ಮರು ಸಮೀಕ್ಷೆ ಕುರಿತು ಮಾತನಾಡಿ, ಜಾತಿಗಣತಿ ಕಾಲಂನಲ್ಲಿ ತಾವಾಗಿಯೇ ಮತಾಂತರ ಆಗುವುದಕ್ಕೆ ಅವಕಾಶ ಇದೆ. ಒತ್ತಾಯವಾಗಿ ಯಾರನ್ನೂ ಸೇರಿಸಲ್ಲ. ಈ ಬಗ್ಗೆ ಸಿದ್ದರಾಮಯ್ಯ ಅವರು ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ಆದ್ರೂ ಬಿಜೆಪಿಯವರು ತಪ್ಪು ಹುಡುಕುವ ಕೆಲಸ ಮಾಡ್ತಿದ್ದಾರೆ, ಅದೇ ಅವರ ಅಜೆಂಡಾ ಆಗಿದೆ. ಅಲ್ಲದೇ ಉತ್ತಮ ಆಡಳಿತದ ವಿರುದ್ಧ ಜನರಲ್ಲಿ ಗೊಂದಲ ಸೃಷ್ಟಿಮಾಡೋದು ಅವರ ಕೆಲಸವಾಗಿಬಿಟ್ಟಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಇದನ್ನೂ ಓದಿ: ಜಾತಿಗಣತಿ ಕಾಲಂನಲ್ಲಿ ಮತಾಂತರ ಜಾತಿಗೂ ಜಾಗ – ಸರ್ಕಾರದ ವಿರುದ್ಧ ಬಿಜೆಪಿ, ಕನಕ ಶ್ರೀ ಕಿಡಿ
ಇನ್ನೂ ಕುರುಬ ಸಮುದಾಯವನ್ನ ಎಸ್ಟಿಗೆ ಸೇರಿಸುವ ಪ್ರಕ್ರಿಯೆ ಚುರುಕುಗೊಂಡ ಬಗ್ಗೆ ಪ್ರತಿಕ್ರಿಯಿಸಿ, ಇದು ಹಲವು ವರ್ಷಗಳ ಬೇಡಿಕೆ, ಶೀಘ್ರದಲ್ಲೇ ನೆರವೇರುವ ಸಾಧ್ಯತೆಗಳು ಕಂಡುಬಂದಿದೆ. ಎಲ್ಲಿಯೂ ಗೊಂದಲ ಆಗದ ರೀತಿಯಲ್ಲಿ ಮಾಡಲಾಗುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ:ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ವಾಪಸ್ ಪಡೆಯುವ ಸುಳಿವು ನೀಡಿದ್ರಾ ಸಿಎಂ?
ಇದೇ ವೇಳೆ ಧರ್ಮಸ್ಥಳ ಪ್ರಕರಣದಲ್ಲಿ SIT ತನಿಖೆ ವಿಳಂಬ ವಿಚಾರವಾಗಿ ಮಾತನಾಡಿ, SIT ಬಗ್ಗೆ ಮೊದಲು ಸ್ವಾಗತ ಮಾಡಿದ್ದು ಬಿಜೆಪಿ ಅವರೇ. ಈಗ ಅದನ್ನ ವಿರೋಧ ಮಾಡುತ್ತಿದ್ದಾರೆ. ತನಿಖಾ ತಂಡ ಉತ್ತಮವಾಗಿ ಕೆಲಸ ಮಾಡುತ್ತಿದೆ. ಆದ್ರೂ ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದರು. ಇದನ್ನೂ ಓದಿ: ಧರ್ಮಸ್ಥಳ ಕೇಸ್ | ಷಡ್ಯಂತ್ರ ಮಾಡಿದವ್ರನ್ನ ಮುಟ್ಟೋಕೆ ಎಸ್‍ಐಟಿಗೆ ಧೈರ್ಯ ಇಲ್ಲ: ಬೊಮ್ಮಾಯಿ