ರಾಯಚೂರು: ರಾಯಚೂರು (Raichuru) ಜಿಲ್ಲೆಯ ಮಾನ್ವಿಯಲ್ಲಿ ನಡೆದ ಸಿಎಂ ಸ್ವಾಭಿಮಾನಿ ಸಮಾವೇಶ ಬಳಿಕ ಖರ್ಗೆಯವರನ್ನು ಸಚಿವ ಎನ್.ಎಸ್.ಬೋಸರಾಜು (NS Bosaraju) ಭೇಟಿ ಮಾಡಿದರು.
ಮುಡಾ ಪ್ರಕರಣದಲ್ಲಿ (MUDA Scam) ಬಿಜೆಪಿ (BJP), ಜೆಡಿಎಸ್ (JDS) ಆರೋಪಗಳಿಗೆ ಉತ್ತರ ನೀಡಬೇಕೆಂದೇ ಮಾನ್ವಿಯಲ್ಲಿ (Manvi) ಸಿಎಂ ಸಿದ್ದರಾಮಯ್ಯ (CM Siddaramaiah) ಅವರ ಬೆಂಬಲಿಗರು ಆಯೋಜಿಸಿದ್ದ ಸಮಾವೇಶದಲ್ಲಿ ಎನ್.ಎಸ್.ಬೋಸರಾಜು ಮಾತನಾಡಿದರು. ಬಳಿಕ ಬೆಂಗಳೂರಿನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರನ್ನು (Mallikarjun Kharge) ಭೇಟಿ ಮಾಡಿರುವುದು ಕುತೂಹಲ ಮೂಡಿಸಿದೆ.ಇದನ್ನೂ ಓದಿ:
ಸಿಎಂ ಸಿದ್ದರಾಮಯ್ಯಗೆ ಬೆಂಬಲ ಸೂಚಿಸಲು ಬೃಹತ್ ಸಮಾವೇಶ ಆಯೋಜಿಸಲಾಗಿತ್ತು. ಸಮಾವೇಶದ ಮೂಲಕ ವಿರೋಧ ಪಕ್ಷದ ನಾಯಕರಿಗೆ ಸಿಎಂ ಬೆಂಬಲಿಗರು ಠಕ್ಕರ್ ಕೊಟ್ಟರು. ಸಿದ್ದರಾಮಯ್ಯ ಜೊತೆ ನಾವೆಲ್ಲ ಇದ್ದೀವಿ ಎಂದು ಹೇಳಿ ಸಂದೇಶ ರವಾನಿಸಿದರು. ಯಾವುದೇ ಕಾರಣಕ್ಕೂ ರಾಜೀನಾಮೆ ನೀಡಲ್ಲ ಎಂದು ಸಿಎಂ ಭಾವನಾತ್ಮಕವಾಗಿ ಹೇಳಿದರು.
ಸನ್ಮಾನ್ಯ ರಾಜ್ಯಸಭೆಯ ವಿರೋಧ ಪಕ್ಷದ ನಾಯಕರು ಹಾಗೂ ಎಐಸಿಸಿ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಖರ್ಗೆ @kharge ಅವರ ಬೆಂಗಳೂರಿನ ನಿವಾಸಕ್ಕೆ ಇಂದು ಭೇಟಿ ನೀಡಿ, ಸೌಹಾರ್ದಯುತವಾಗಿ ಕುಶಲೋಪರಿ ವಿಚಾರಿಸಲಾಯಿತು. ಪಕ್ಷದ ಕಾರ್ಯ ಚಟುವಟಿಕೆಗಳು ಹಾಗೂ ಕೈಗೊಳ್ಳಬೇಕಾದ ಅಭಿವೃದ್ಧಿ ಕೆಲಸಗಳ ಬಗ್ಗೆ ಚರ್ಚಿಸಲಾಯಿತು.#Karnataka#Congress pic.twitter.com/3LHMP9gMQx
— N.S Boseraju (@NsBoseraju) October 7, 2024
ಬೃಹತ್ ಸಮಾವೇಶ ಬಳಿಕ ಮಲ್ಲಿಕಾರ್ಜುನ ಖರ್ಗೆಯನ್ನು ಬೆಂಗಳೂರಿನ ಖರ್ಗೆ ನಿವಾಸದಲ್ಲಿ ಭೇಟಿಯಾದರು. ಭೇಟಿ ಮಾಡಿ ಉಭಯ ಕುಶಲೋಪರಿಯನ್ನು ವಿಚಾರಿಸಿದರು. ಪಕ್ಷದ ಕಾರ್ಯ ಚಟುವಟಿಕೆಗಳು ಹಾಗೂ ಕೈಗೊಳ್ಳಬೇಕಾದ ಅಭಿವೃದ್ಧಿ ಕೆಲಸಗಳ ಬಗ್ಗೆ ಚರ್ಚಿಸಲಾಯಿತು ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿಕೊಂಡಿದ್ದಾರೆ.ಇದನ್ನೂ ಓದಿ: