ಬೆಂಗಳೂರು: ಬಿಬಿಎಂಪಿ ಆಯಕಟ್ಟಿನ ಅವಶ್ಯಕತೆಗಿಂತ ಅಧಿಕ ಇಂಜಿನಿಯರ್‍ಗಳನ್ನು ನಿಯೋಜನೆ ಮಾಡಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಬೆಂಗಳೂರು ದಕ್ಷಿಣ ವಿಭಾಗದ ಬಿಜೆಪಿ ಅಧ್ಯಕ್ಷರು ಮತ್ತು ಮಾಜಿ ಆಡಳಿತಪಕ್ಷದ ನಾಯಕರಾದ ಎನ್.ಆರ್.ರಮೇಶ್ ದೂರು ನೀಡಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯ ಆಯಕಟ್ಟಿನಲ್ಲಿ ಅವಶ್ಯಕತೆಗಿಂತ ಹೆಚ್ಚು ಇಂಜಿನಿಯರ್‍ಗಳು ಇದ್ದಾರೆ. ಅವರಿಂದ ಸಾರ್ವಜನಿಕ ತೆರಿಗೆ ಹಣ ವ್ಯರ್ಥವಾಗುತ್ತಿದೆ. ಅವರನ್ನು ವಾಪಸ್ ಕಳಿಸುವಂತೆ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ರಮೇಶ್ ದೂರು ನೀಡಿದ್ದಾರೆ. ಬಿಬಿಎಂಪಿ ಆಯಕಟ್ಟಿನ ಪ್ರಮುಖ 4 ಇಲಾಖೆಗಳಲ್ಲಿ ಅವಶ್ಯಕತೆಗಿಂತ 136 ಆಧಿಕ ಇಂಜಿನಿಯರ್ ಗಳು ಇಲಾಖೆಯಲ್ಲಿ ಇದ್ದು, ಬಿಬಿಎಂಪಿಗೆ ವ್ಯರ್ಥವಾಗಿ ಹಣ ವೆಚ್ಚ ಆಗುತ್ತಿದೆ. ಈ ಕುರಿತು ಕ್ರಮ ವಹಿಸುವಂತೆ ಒತ್ತಾಯಿಸಿದ್ದಾರೆ.ಇದನ್ನೂ ಓದಿ:ಈ ಬಾರಿಯ ಮೊಬೈಲ್ ಆ್ಯಪ್ ಬೆಳೆ ಸಮೀಕ್ಷೆ ಯಶಸ್ಸಿಗೆ ಎಲ್ಲರೂ ಕೈಜೋಡಿಸಿ: ಬಿ.ಸಿ.ಪಾಟೀಲ್
Advertisement
Advertisement
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ನಗರ ಯೋಜನೆ, ರಸ್ತೆಗಳ ಮೂಲಭೂತ ಸೌಕರ್ಯ ಕೇಂದ್ರ, ಬೃಹತ್ ನೀರುಗಾಲುವೆಗಳಲ್ಲಿ ಅವಶ್ಯಕತೆಗಿಂತ ಹೆಚ್ಚು ಮಂದಿ ಇದ್ದಾರೆ. ಪ್ರಸ್ತುತ 136 ಮಂದಿ ಇಂಜಿನಿಯರ್‍ಗಳು ಇದ್ದಾರೆ. 2005 ರಿಂದ 2007ರಲ್ಲಿ ನೇಮಕವಾದ ಇಂಜಿನಿಯರ್‍ಗಳು ಇಲ್ಲೆ ಇದ್ದಾರೆ. ಇವರಿಗೆ ಪ್ರತಿ ತಿಂಗಳಿಗೆ 3 ಕೋಟಿಯಂತೆ ವರ್ಷಕ್ಕೆ 36 ಕೋಟಿ ರೂ. ಸಾರ್ವಜನಿಕ ಹಣ ವ್ಯರ್ಥ ಆಗ್ತಾ ಇದೆ. ಮುಖ್ಯ ಆಯುಕ್ತರು ಎಚ್ಚೆತ್ತು ಕ್ರಮ ವಹಿಸಬೇಕು ಎಂದು ತಿಳಿಸಿದ್ದಾರೆ.ಇದನ್ನೂ ಓದಿ:ಕಾಮಗಾರಿ ವಿಚಾರಕ್ಕೆ ಧ್ವನಿ ಎತ್ತಿದ್ದ ಸಾಮಾಜಿಕ ಹೋರಾಟಗಾರನ ಮೇಲೆ ಹಲ್ಲೆ
Advertisement
Advertisement
ಬಿಬಿಎಂಪಿಯಲ್ಲಿ 2005, 2009ರಲ್ಲಿ ನಿಯೋಜನೆಗೊಂಡ ಇಂಜಿನಿಯರ್ ಗಳು ಇನ್ನೂ ಹಾಗೇ ಇದ್ದಾರೆ. ಅವರನ್ನು 2 ವರ್ಷಕ್ಕೊಮ್ಮೆ ಬದಲಾವಣೆ ಮಾಡಬೇಕು. ಆದರೆ ಈ ಕ್ರಮ ಇನ್ನೂ ಜರುಗಿಸಿಲ್ಲ. ಜೊತೆಗೆ ಅವಶ್ಯಕತೆಗಿಂತ ಹೆಚ್ಚು ಇಂಜಿನಿಯರ್ ಇದ್ದಾರೆ ಅವರನ್ನು ವಾಪಸ್ ಕಳಿಸಬೇಕು ಎಂದು ಮುಖ್ಯ ಆಯುಕ್ತರಿಗೆ ದೂರು ನೀಡಿದ್ದೇನೆ ಎಂದರು. ಇನ್ನೂ ಬಿಬಿಎಂಪಿ ಮುಖ್ಯ ಆಯುಕ್ತರ ಅನುಪಸ್ಥಿತಿ ಹಿನ್ನೆಲೆ ದೂರನ್ನು ವಿಶೇಷ ಆಯುಕ್ತ ದಯಾನಂದ್ ಸ್ವೀಕರಿಸಿದ್ದಾರೆ.