ರಜನಿಕಾಂತ್ ನಟನೆಯ ಜೈಲರ್ (Jailer) ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಸಖತ್ ಸದ್ದು ಮಾಡುತ್ತಿದೆ. ಸಿನಿಮಾ ರಿಲೀಸ್ ದಿನದಿಂದಲೂ ಈವರೆಗೂ ಪ್ರೇಕ್ಷಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಲೇ ಇದೆ. ಒಂದು ಕಡೆ ಚಿತ್ರತಂಡ ಗೆಲುವನ್ನು ಸಂಭ‍್ರಮಿಸುತ್ತಿದ್ದರೆ ಮತ್ತೊಂದು ಕಡೆ ಕೋರ್ಟ್ ಕಾರಣದಿಂದಾಗಿ ಆತಂಕವನ್ನೂ ಪಡುತ್ತಿದ್ದಾರೆ. ಈ ಸಿನಿಮಾದಲ್ಲಿ ಸಾಕಷ್ಟು ಹಿಂಸಾತ್ಮಕ ದೃಶ್ಯಗಳು ಇವೆ ಎಂದು ಎನ್.ಪಿ.ಪಿ ಮುಖಂಡ ರವಿ (Ravi) ಮದ್ರಾಸ್ (Madras) ಹೈಕೋರ್ಟ್ ಮೆಟ್ಟಿಲು ಏರಿದ್ದಾರೆ.
Advertisement
ಜೈಲರ್ ಸಿನಿಮಾದಲ್ಲಿ ಸಾಕಷ್ಟು ಹಿಂಸಾತ್ಮಕ ದೃಶ್ಯಗಳಿವೆ. ಅವುಗಳು ಸಮಾಜದ ಮೇಲೆ ಭಾರೀ ಪರಿಣಾಮ ಬೀರುವಂತವುಗಳು. ಆದರೂ, ಚಿತ್ರಕ್ಕೆ ಯು/ಎ ಪ್ರಮಾಣ ಪತ್ರವನ್ನು ಸೆನ್ಸಾರ್ ಮಂಡಳಿ ನೀಡಿದೆ. ಅದು ಹೇಗೆ ಯು/ಎ ಪ್ರಮಾಣ ಪತ್ರ ನೀಡಿತು ಎಂದು ಅರ್ಥವಾಗುತ್ತಿಲ್ಲ. ಈ ಸಿನಿಮಾದ ಪ್ರದರ್ಶನವನ್ನು ಕೂಡಲೇ ನಿಲ್ಲಿಸಿ, ಸೆನ್ಸಾರ್ ಮಂಡಳಿಗೆ ನೋಟಿಸ್ ಜಾರಿ ಮಾಡಬೇಕು ಎಂದು ರವಿ ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ:‘ಟೈಗರ್ ನಾಗೇಶ್ವರ್ ರಾವ್’ ಟೀಸರ್ ಔಟ್- ಮಾಸ್ ಆಗಿ ಎಂಟ್ರಿ ಕೊಟ್ಟ ರವಿತೇಜ
Advertisement
Advertisement
ಜೈಲರ್ ಸಿನಿಮಾ ಯಶಸ್ಸಿನ ಬೆನ್ನಲ್ಲೇ ಸೂಪರ್ ಸ್ಟಾರ್ ರಜನಿಕಾಂತ್ ಟೆಂಪಲ್ ರನ್ ಮಾಡುತ್ತಿದ್ದಾರೆ. ಸಿನಿಮಾ ರಿಲೀಸ್ ವೇಳೆ ಅವರು ಹಿಮಾಲಯಕ್ಕೆ ಹಾರಿದ್ದರು. ಅಲ್ಲಿ ಧ್ಯಾನಕ್ಕೆ ಶರಣಾಗಿದ್ದರು. ಅಲ್ಲಿಂದ ಹೊರಟು ಇದೀಗ ಉತ್ತರ ಪ್ರದೇಶದ ಹಲವು ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ. ಇಂದು ಅಯೋಧ್ಯಗೆ ತೆರಳಿ ಶ್ರೀ ರಾಮನ ದರ್ಶನ ಪಡೆದಿದ್ದಾರೆ. ನಿರ್ಮಾಣ ಹಂತದಲ್ಲಿರುವ ದೇವಸ್ಥಾನವನ್ನೂ ಅವರು ವೀಕ್ಷಣೆ ಮಾಡಿದರು. ಡಲಿದ್ದಾರೆ.
Advertisement
ಮೊನ್ನೆಯಷ್ಟೇ ರಜನಿಕಾಂತ್ (Rajanikanth) ಅವರು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ (Yogi Adityanath) ಭೇಟಿಯಾಗಿದ್ದರು. ನಿನ್ನೆ (ಆಗಸ್ಟ್ 19) ಜೈಲರ್ (Jailer) ಚಿತ್ರವನ್ನ ಅವರೊಂದಿಗೆ ವೀಕ್ಷಿಸಿದ್ದರು. ಲಕ್ನೋದಲ್ಲಿ ಸಿಎಂ ಮತ್ತು ಅಭಿಮಾನಿಗಳ ಜೊತೆಗೆ ‘ಜೈಲರ್’ ಸಿನಿಮಾ ವೀಕ್ಷಣೆ ಮಾಡಿದ್ದಾರೆ.
ತಲೈವಾ-ಶಿವಣ್ಣ ಕಾಂಬೋ ‘ಜೈಲರ್’ (Jailer) ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ತಲೈವಾ ಸಿನಿಮಾವನ್ನ ಒಪ್ಪಿ ಜನ ಮೆಚ್ಚಿಕೊಂಡಿದ್ದಾರೆ. ಸದ್ಯ ಸಿನಿಮಾ ಪ್ರಚಾರಕ್ಕಾಗಿ ಲಕ್ನೋದಲ್ಲಿ ತಲೈವಾ ಬೀಡು ಬಿಟ್ಟಿದ್ದಾರೆ. ಯುಪಿ ಸಿಎಂ ಯೋಗಿ ಆದಿತ್ಯನಾಥ್ ಜೊತೆ ನಿನ್ನೆ ಸಂಜೆ 7ಕ್ಕೆ ‘ಜೈಲರ್’ ಸಿನಿಮಾ ನೋಡೋದು ಫಿಕ್ಸ್ ಆಗಿತ್ತು. ಅಷ್ಟೇ ಅಲ್ಲದೇ, ರಾಜ್ಯಪಾಲರಾದ ಆನಂದಿಬೇನ್ ಪಟೇಲ್ ಅವರನ್ನು ಕೂಡ ತಲೈವಾ ಭೇಟಿಯಾಗಿದ್ದರು.
Web Stories