ಬೆಂಗಳೂರು: ಕೆಎಸ್‍ಆರ್‍ಟಿಸಿ ಬಸ್‍ಗಳಲ್ಲಿ ಇನ್ಮುಂದೆ ಸಾಕುಪ್ರಾಣಿಗಳ ಜೊತೆ ಪ್ರಯಾಣ ಬೆಳೆಸೋಕೆ ಅವಕಾಶ ನೀಡಲಾಗಿದೆ. ನಾಯಿಗಳನ್ನ ಜೊತೆಗೆ ಕೊಂಡೊಯ್ಯಲು ಮನಷ್ಯರಿಗೆ ನೀಡಲಾಗುವ ಬೆಲೆಯಷ್ಟೇ ಟಿಕೆಟ್ ಪಡೆಯಬೇಕಿದೆ.
ಕೆಎಸ್‍ಆರ್‍ಟಿಸಿ ಈ ಹೊಸ ನಿಯಮವನ್ನು ಜಾರಿಗೆ ತಂದಿದ್ದು, ಆಯಾಯ ಊರಿಗೆ ವಯಸ್ಕರಿಗೆ ಎಷ್ಟು ಬೆಲೆಯ ಟಿಕೆಟ್ ನೀಡಲಾಗುತ್ತದೆಯೋ ಅಷ್ಟೇ ಬೆಲೆಯ ಟಿಕೆಟ್ ದೊಡ್ಡ ನಾಯಿಗಳಿಗೆ ನೀಡಲಾಗುತ್ತದೆ ಎಂದು ತಿಳಿಸಿದೆ. ಇನ್ನು ಮರಿ ನಾಯಿಗಳಿಗೆ ಮಕ್ಕಳ ಟಿಕೆಟ್ ದರ ಅನ್ವಯವಾಗಲಿದೆ.
ಕೇವಲ ನಾಯಿಗಳು ಮಾತ್ರವಲ್ಲದೇ ಬೆಕ್ಕು, ಮೊಲದ ಜೊತೆಯೂ ಪ್ರಯಾಣ ಬೆಳೆಸಬಹುದು. ಆದ್ರೆ ಇವುಗಳಿಗೆ ಮಕ್ಕಳ ಟಿಕೆಟ್ ಅಂದ್ರೆ ಹಾಫ್ ಟಿಕೆಟ್ ತೆಗೆದುಕೊಳ್ಳಬೇಕು ಎಂದು ಕೆಎಸ್‍ಆರ್‍ಟಿಸಿಯಿಂದ ಇಂದು ಅಧಿಕೃತವಾಗಿ ಸುತ್ತೊಲೆ ಹೊರಡಿಸಲಾಗಿದೆ. ಇದರ ಜೊತೆಗೆ ಸರಕು ಸಾಗಾಣೆಯ ದರವೂ ಕೂಡ ಪರಿಷ್ಕರಣೆ ಮಾಡಲಾಗಿದೆ.