ಬೆಂಗಳೂರು: ವಿಶ್ವದ ನಂಬರ್ ಒನ್ ಮೆಸೆಂಜಿಂಗ್ ಅಪ್ಲಿಕೇಷನ್ ವಾಟ್ಸಪ್ ನಲ್ಲಿ ಫಾರ್ವರ್ಡ್ ಮೆಸೇಜನ್ನು ಇನ್ನು ಮುಂದೆ ಸುಲಭವಾಗಿ ತಿಳಿಯಬಹುದು.
ವಿಶ್ವಾದ್ಯಂತ ವಾಟ್ಸಪ್ ಸಂದೇಶಗಳಿಂದ ಹರಡುವ ಸುದ್ದಿಗಳಿಂದಾಗಿ ಅನಾಹುತ ಸಂಭವಿಸುತ್ತಿರುವುದು ದಿನೇ ದಿನೇ ಹೆಚ್ಚಾಗುತ್ತಿದೆ. ಈ ಸಂದೇಶಗಳನ್ನು ಯಾರು ಕಳುಹಿಸಿದ್ದಾರೆ ಅಥವಾ ಯಾರು ಫಾರ್ವರ್ಡ್ ಮಾಡಿದ್ದಾರೆ ಎನ್ನುವುದನ್ನು ಪತ್ತೆಹಚ್ಚಲು ಕೇವಲ ವಿಶೇಷ ತನಿಖೆಯಿಂದ ಮಾತ್ರವೇ ಸಾಧ್ಯವಾಗುತ್ತಿತ್ತು.
Advertisement
ವಾಟ್ಸಪ್ ನ ಹೊಸ ಫೀಚರ್ ನಿಂದಾಗಿ ಈ ರೀತಿ ತೊಂದರೆ ಪಡುವ ಅಗತ್ಯ ಈಗ ಗ್ರಾಹಕರಿಗೆ ಇರುವುದಿಲ್ಲ. ವಾಟ್ಸಪ್ ತನ್ನ ನೂತನ ಫೀಚರ್ ನಲ್ಲಿ ಮೆಸೇಜ್ ಮೇಲ್ಭಾಗದಲ್ಲೇ ಆ ಮಸೇಜ್ Forwarded ಎಂದು ಬರೆದಿರುತ್ತದೆ. ಈ ಮೂಲಕ ಮೆಸೇಜನ್ನು ಸ್ವತಃ ಕ್ರಿಯೇಟ್ ಮಾಡಿ ಕಳುಹಿದ್ದಾರೋ ಅಥವಾ ಬೇರೆಯವರು ಸೆಂಡ್ ಮಾಡಿದ್ದ ಮೆಸೇಜನ್ನು ಫಾರ್ವರ್ಡ್ ಮಾಡಿದ್ದರೋ ಎನ್ನುವದನ್ನು ಪತ್ತೆ ಮಾಡಬಹುದಾಗಿದೆ.
Advertisement
ಒಂದು ತಿಂಗಳ ಹಿಂದೆ ಬೀಟಾ ಆವೃತ್ತಿಯನ್ನು ಬಳಸುತ್ತಿದ್ದ ಬಳಕೆದಾರರಿಗೆ ಈ ವಿಶೇಷತೆಯನ್ನು ನೀಡಿದ್ದ ವಾಟ್ಸಪ್ ಈಗ ತನ್ನ ಎಲ್ಲ ಬಳಕೆದಾರರಿಗೆ ವಿಸ್ತರಿಸಿದೆ. ಹೊಸ ವಿಶೇಷತೆ ಬೇಕಿದ್ದರೆ ಗ್ರಾಹಕರು ವಾಟ್ಸಪ್ ಅಪ್ಲಿಕೇಶನ್ ಅನ್ನು ಅಪ್‍ಡೇಟ್ ಮಾಡಿಕೊಳ್ಳಬೇಕು.