ಬೆಂಗಳೂರು: ಗುತ್ತಿಗೆದಾರರರಿಗೆ ಸರ್ಕಾರ 600 ಕೋಟಿ ರಿಲೀಸ್ ಮಾಡಿದ ಬೆನ್ನಲ್ಲೇ ಗುತ್ತಿಗೆ ಸಂಘದ ಅಧ್ಯಕ್ಷ ಕೆಂಪಣ್ಣ (Kempanna) ಸುದ್ದಿಗೋಷ್ಠಿ ನಡೆಸುವ ಮೂಲಕ 40% ಕಮೀಷನ್ ಆರೋಪದಿಂದ ಉಲ್ಟಾ ಹೊಡೆದಿದ್ದಾರೆ.
ಎಲ್ಲಾ ಬಾಕಿ ಬಿಲ್ ಕ್ಲಿಯರ್ ಮಾಡುವಂತೆ ಒತ್ತಾಯ ಮಾಡಿದ್ವಿ. ಹಿಂದಿನ ಅವಧಿಯಲ್ಲಿ ಅಷ್ಟೊಂದು ಸ್ಪಂದನೆ ಸಿಕ್ಕಿರಲಿಲ್ಲ. ಆದರೆ ಈ ಬಾರಿ ಬಾಕಿ ಬಿಲ್ ಕ್ಲೀಯರ್ ಮಾಡುವ ಬಗ್ಗೆ ಸಿಎಂ, ಡಿಸಿಎಂ ಸಕಾರಾತ್ಮಕ ಸ್ಪಂದನೆ ಕೊಟ್ಟಿದ್ದಾರೆ. ನಮ್ಮ ಪದಾಧಿಕಾರಿಗಳು ಸರ್ಕಾರದ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಈ ಸರ್ಕಾರ 1054 ಮಂದಿ ಸಣ್ಣ ಗುತ್ತಿಗೆದಾರರಿಗೆ ಫುಲ್ ಕ್ಲೀಯರ್ ಮಾಡಿದೆ. ಒಂದು ಕೋಟಿ ಗುತ್ತಿಗೆದಾರರಿಗೆ ಬಿಲ್ ಕ್ಲೀಯರ್ ಮಾಡಿದೆ. ಒಟ್ಟು 600 ಕೋಟಿ ಈಗಾಗಲೇ ಸರ್ಕಾರ ಬಿಡುಗಡೆ ಮಾಡಿಕೊಟ್ಟಿದೆ. ಆದರೆ ಪ್ಯಾಕೇಜ್ ಗುತ್ತಿಗೆ ಪದ್ಧತಿ ರದ್ದಾಗಬೇಕು ಎನ್ನುವ ನಿಲುವು ಈಗಲೂ ಮುಂದುವರಿದಿದೆ ಎಂದರು.
Advertisement
Advertisement
ಕಳೆದ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ (Congress) ವಿರುದ್ಧ ಕಮಿಷನರ್ ಆರೋಪ ಮಾಡಿದ್ದ ಕೆಂಪಣ್ಣ, ಇದೀಗ ಕಮಿಷನ್ ತೆಗೆದುಕೊಂಡ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ. ನಾನು ಸರ್ಕಾರಕ್ಕೆ ಯಾವುದೇ ಕ್ಲೀನ್ ಚಿಟ್ ಕೊಡಲ್ಲ ಎಂದು ಹೇಳುವ ಮೂಲಕ ಅಡ್ಡ ಗೋಡೆ ಮೇಲೆ ದೀಪ ಇಟ್ಟಂತೆ ನಡೆ ಮುಂದುವರಿಸಿದ್ದಾರೆ.
Advertisement
ಅಧಿಕಾರಿಗಳು 40% ಕಮೀಷನ್ ಕೇಳ್ತಾರೆ ಅಂತಾ ಕೆಂಪಣ್ಣ ಈ ಹಿಂದೆ ಹೇಳಿದ್ದರು. ಆದರೆ ಈಗ ಯಾವುದೇ ಕಮೀಷನ್ ಇಲ್ಲದೇ ಹಣ ಬಿಡುಗಡೆ ಆಗಿದೆ ಅಂತಿದ್ದಾರೆ. ಸಂಪೂರ್ಣ ಬಿಲ್ ಕ್ಲೀಯರ್ ಮಾಡಿಕೊಡುವ ಬಗ್ಗೆ ಡಿಸಿಎಂ ನಮಗೆ ಭರಸವೆ ಕೊಟ್ಟಿದ್ದಾರೆ. ಶೀಘ್ರವೇ ಎಲ್ಲಾ ಬಾಕಿ ಬಿಲ್ ಕ್ಲೀಯರ್ ಮಾಡುತ್ತೇನೆ ಎಂದು ಹೇಳಿದ್ದಾರೆ. ನಮಗೆ ಇನ್ನೂ ಸಾವಿರಾರು ಕೋಟಿ ರೂಪಾಯಿ ಬಿಲ್ ಬಾಕಿ ಉಳಿದಿದೆ. ಅವೆಲ್ಲವನ್ನೂ ಸರ್ಕಾರ ಶೀಘ್ರದಲ್ಲೇ ಬಿಡುಗಡೆ ಮಾಡುವ ವಿಶ್ವಾಸ ನಮಗಿದೆ ಎಂದರು.
Advertisement
ಇದೇ ವೇಳೆ 600 ಕೋಟಿಯಲ್ಲಿ ಎಷ್ಟು ಪರ್ಸಂಟೇಜ್ ಕೊಟ್ಟಿರಿ? ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ಒಂದು ನಯಾ ಪೈಸೆ ಕೊಡದೆ ಯಾವ ಬಿಲ್ ಕೂಡ ಪಾಸ್ ಆಗಲ್ಲ ಎಂದು ಹೇಲುವ ಮೂಲಕ ಪರೋಕ್ಷವಾಗಿ ಕಮಿಷನ್ ಆರೋಪ ಮುಂದುವರಿಸಿದರು.
ಒಟ್ಟಿನಲ್ಲಿ ಈಗ ಪರ್ಸಂಟೇಜ್ ಕಡಿಮೆ ಆಗಿದೆ. ಆದರೆ ಎಷ್ಟಾಗಿದೆ ಗೊತ್ತಿಲ್ಲ. ಒಂದೊಂದೇ ಬಿಲ್ ಕ್ಲೀಯರ್ ಆಗುತ್ತಿದೆ, ಬಿಬಿಎಂಪಿಯದ್ದೂ ಆಗುತ್ತಿದೆ ಎಂದರು. ಕಾಂಗ್ರೆಸ್ ಸರ್ಕಾರವು ಸಣ್ಣ ಗುತ್ತಿಗೆದಾರರಿಗೆ 600 ಕೋಟಿ ಬಿಡುಗಡೆ ಮಾಡಿದೆ. ಹೀಗಾಗಿ ಸಿಎಂ, ಡಿಸಿಎಂಗೆ ನಮ್ಮ ನೋವು ಆಲಿಸಿದ್ದಕ್ಕೆ ಧನ್ಯವಾದಗಳು ಎಂದು ಹೇಳುವ ಮೂಲಕ ಕೇವಲ ನಾಲ್ಕೈದು ದಿನಕ್ಕೆ ಕೆಂಪಣ್ಣ ಉಲ್ಟಾ ಹೊಡೆದ್ರಾ ಎಂಬ ಪ್ರಶ್ನೆ ಎದ್ದಿದೆ.