ಬೆಂಗಳೂರು: ಬಿಜೆಪಿ (BJP)-ಕಾಂಗ್ರೆಸ್ (Congress) ನಡುವೆ ಬಚ್ಚಾ, ಯೋಗ್ಯತೆ ಕದನ ಜೋರಾಗಿದೆ. ಇದಕ್ಕೀಗ ರಾಮ ರಾಜಕೀಯವೂ ಸೇರ್ಪಡೆಯಾಗಿದೆ. ಪ್ರಧಾನಿ ಮೋದಿ ಕಾಲಿನಡಿಯೂ ಸಿದ್ದರಾಮಯ್ಯ (Siddaramaiah) ಗೆ ಕುಳಿತುಕೊಳ್ಳೋ ಅರ್ಹತೆ ಇಲ್ಲ ಎಂಬ ಬಿಎಸ್‍ವೈ ಮಾತಿಗೆ ವಿಪಕ್ಷ ನಾಯಕರು ಟ್ವೀಟ್ ಮೂಲಕ ತಿರುಗೇಟು ನೀಡಿದ್ದಾರೆ.
Advertisement
ಮೋದಿ ಕಾಲಡಿಯಲ್ಲಿ ಕುಳಿತುಕೊಳ್ಳುವ ಗುಲಾಮಗಿರಿಯ ಯೋಗ್ಯತೆ ಯಡಿಯೂರಪ್ಪ (B.S Yediyurappa) ಅಂಥವರಿಗೆ ಇರಲಿ. ನನ್ನಂಥವರಿಗೆ ಅದು ಹೊಂದಾಣಿಕೆ ಆಗಲ್ಲ. ನಮ್ಮದು ಭುಜಕ್ಕೆ ಭುಜ ತಾಗಿಸಿ ನಡೆಯುವ ಡೆಮಾಕ್ರಟಿಕ್ ಸಂಸ್ಕೃತಿಯ ಪಕ್ಷ ಎಂದು ಸಿದ್ದರಾಮಯ್ಯ (Siddaramaiah) ಟಾಂಗ್ ನೀಡಿದ್ದಾರೆ. ಇದನ್ನೂ ಓದಿ: ನೀವು ಬಿಕಿನಿ ಬೇಕಾದರೆ ಹಾಕಿಕೊಳ್ಳಿ, ನಮ್ಮ ಮುಸ್ಲಿಂ ಹೆಣ್ಣು ಮಕ್ಕಳು ಹಿಜಬ್ ಧರಿಸುತ್ತಾರೆ: ಓವೈಸಿ
Advertisement
Advertisement
ಈ ಮಧ್ಯೆ ಕಾಂಗ್ರೆಸ್ ಟ್ವೀಟ್ ಮಾಡಿ, ರಾಮ ಜಪ ಮಾಡಿದೆ. ರಾಮಾಯಣವನ್ನು ರಾಮನ ವನವಾಸದ ಯಾತ್ರೆ ಆವರಿಸಿದೆ. ವನವಾಸದ ಉದ್ದಕ್ಕೂ ಭಾರತವನ್ನು ಅನ್ವೇಷಿಸುತ್ತಾ, ಭಾರತದ ವೈವಿದ್ಯತೆ ಆಸ್ವಾದಿಸುತ್ತಾ, ತನ್ನ ಹೆಜ್ಜೆ ಗುರುತುಗಳನ್ನು ಮೂಡಿಸುತ್ತಾ ರಾಮ ಸಾಗುತ್ತಾನೆ. ಅದೇ ರೀತಿ ರಾಹುಲ್ ಗಾಂಧಿ ಭಾರತದ ಶ್ರೇಷ್ಠತೆ ಅನ್ವೇಷಿಸುತ್ತಾ ನಡೆಯುತ್ತಿದ್ದಾರೆ ಎಂದಿದೆ.
Advertisement
ಇದಕ್ಕೆ ಬಿಜೆಪಿ ಟ್ವೀಟ್ (Tweet) ಮೂಲಕವೇ ತಿರುಗೇಟು ನೀಡಿದೆ. ರಾಮನ ಅಸ್ತಿತ್ವವನ್ನೇ ಪ್ರಶ್ನಿಸಿದವರು. ರಾಮಾಯಣ, ರಾಮನನ್ನು ಅಪಮಾನಿಸಿದರು ಇಂದು ಅಧಿಕಾರಕ್ಕಾಗಿ ರಾಮನ ಮೊರೆ ಹೋಗಿದ್ದಾರೆ. ಪ್ರಧಾನಿ ಮೋದಿ (NarendraModi) ಯವರು ಕಾಂಗ್ರೆಸ್ ಪಕ್ಷವನ್ನು ಬೀದಿಗೆ ಬರುವಂತೆ ಮಾಡಿದ್ದು ಮಾತ್ರವಲ್ಲ. ರಾಮನಾಮ ಜಪಿಸುವಂತೆಯೂ ಮಾಡಿದ್ದಾರೆ ಎಂದು ಲೇವಡಿ ಮಾಡಿದೆ. ಜೊತೆಗೆ ರಾಹುಲ್ ಗಾಂಧಿ (RahulGandhi) ಯನ್ನು ಅಪ್ರಬುದ್ಧ ಬಾಲಕನಿಗೆ ಬಿಜೆಪಿ ಹೋಲಿಕೆ ಮಾಡಿದೆ.