ನವದೆಹಲಿ: ರೈಲ್ವೇ ಪ್ರಯಾಣಿಕರಿಗೆ ಭಾರತೀಯ ರೈಲ್ವೇ ಇಲಾಖೆ ಶಾಕಿಂಗ್ ನ್ಯೂಸ್ ನೀಡುತ್ತಿದೆ. ಇನ್ನು ಮುಂದೆ ವಿಮಾನ ಪ್ರಯಾಣದ ರೀತಿ ರೈಲಿನಲ್ಲಿ ಪ್ರಯಾಣ ಮಾಡುವಾಗ ಹೆಚ್ಚುವರಿ ಲಗೇಜ್ ಕೊಂಡೊಯ್ಯುವರಿಗೆ ಭಾರತೀಯ ರೈಲ್ವೆ ಕಡಿವಾಣ ಹಾಕಲಿದೆ.
ಬೋಗಿಗಳಲ್ಲಿ ಹೆಚ್ಚುವರಿ ಲಗೇಜುಗಳನ್ನು ತೆಗೆದುಕೊಂಡು ಹೋಗಲಾಗುತ್ತಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ರೈಲ್ವೇ ಇಲಾಖೆ ಮೂರು ದಶಕಗಳಷ್ಟು ಹಳೆಯದಾದ ಲಗೇಜ್ ನಿಯಮಗಳನ್ನು ಕಟ್ಟು ನಿಟ್ಟಿನಿಂದ ಜಾರಿಗೊಳಿಸಲು ನಿರ್ಧರಿಸಿದ್ದು, ಇನ್ನು ಮುಂದೆ ಹೆಚ್ಚುವರಿ ಲಗೇಜ್ ಪತ್ತೆಯಾದರೆ, 6 ಪಟ್ಟು ದಂಡ ವಿಧಿಸಬೇಕಾಗುತ್ತದೆ ಎಂದು ಇಲಾಖೆ ಮಂಗಳವಾರ ಸ್ಪಷ್ಟ ಪಡಿಸಿದೆ.
Advertisement
Advertisement
ನಿಯಮದ ಪ್ರಕಾರ, ಸ್ಲೀಪರ್ ಮತ್ತು ಸೆಕೆಂಡ್ ಕ್ಲಾಸ್ ನಲ್ಲಿ ಪ್ರಯಾಣಿಸುವ ಪ್ರಯಾಣಿಕರು 40 ಹಾಗೂ 35 ಕೆಜಿ ತೂಕದ ಲಗೇಜನ್ನು ಶುಲ್ಕ ಪಾವತಿಸದೆ ತಮ್ಮೊಂದಿಗೆ ತೆಗೆದುಕೊಂಡು ಹೋಗಬಹುದು. ಇನ್ನು ಪಾರ್ಸೆಲ್ ಕಚೇರಿಯಲ್ಲಿ ಲಗೇಜ್ ಗಾಗಿ ಶುಲ್ಕ ಪಾವತಿಸಿ ಸುಮಾರು 80 ಕೆಜಿ ಹಾಗೂ 70 ಕೆಜಿ ತೂಕದ ಲಗೇಜ್ ತೆಗೆದುಕೊಂಡು ಹೋಗಬಹುದು. ಇದಕ್ಕಿಂತ ಹೆಚ್ಚುವರಿ ಲಗೇಜನ್ನು ಲಗೇಜ್ ವ್ಯಾನ್ ಗೆ ಹಾಕಿ ತೆಗೆದುಕೊಂಡು ಹೋಗುವ ಅವಕಾಶ ವಿದೆ.
Advertisement
ಈ ನಿಯಮಗಳು ಹಿಂದಿನಿಂದಲೂ ಇವೆ. ಆದರೆ ಈಗ ಈ ನಿಯಮಗಳನ್ನು ಕಟ್ಟು ನಿಟ್ಟಾಗಿ ಜಾರಿಗೊಳಿಸಲಾಗುತ್ತಿದೆ. ಕೆಲವು ಪ್ರಯಾಣಿಕರು ಅಧಿಕ ಲಗೇಜನ್ನು ತಂದು ಬೋಗಿಯಲ್ಲಿ ಹಾಕುತ್ತಿದ್ದರು.ಇದರಿಂದ ಇತರೆ ಪ್ರಯಾಣಿಕರಿಗೆ ತೊಂದರೆಯಾಗುತ್ತಿತ್ತು. ಈ ಕಾರಣದಿಂದ ಅನೇಕ ದೂರುಗಳು ರೈಲ್ವೆ ಇಲಾಖೆಗೆ ಬಂದಿವೆ. ಆದ್ದರಿಂದ ಈಗಾಗಲೇ ಇರುವ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಇಲಾಖೆ ಮುಂದಾಗಿದೆ. ಪ್ರಯಾಣಿಕರ ಬಳಿ ಹಣ ಪಾವತಿಸಿದ 40ಕೆಜಿಗೂ ಹೆಚ್ಚಿನ ಲಗೇಜ್ ಪತ್ತೆಯಾದರೆ ಅದರ ಆರು ಪಟ್ಟು ದಂಡ ವಿಧಿಸಲಾಗುವುದು ಎಂದು ರೈಲ್ವೆ ಮಂಡಳಿಯ ಮಾಹಿತಿ ಮತ್ತು ಪ್ರಚಾರ ನಿರ್ದೇಶಕ ವೇದ್ ಪ್ರಕಾಶ್ ಹೇಳಿದ್ದಾರೆ.
Advertisement
ವಿಮಾನ ನಿಲ್ದಾಣಗಳಲ್ಲಿ ಪ್ರತಿ ಪ್ರಯಾಣಿಕರ ತಪಾಸಣೆ ನಡೆಸುವ ರೀತಿ ರೈಲ್ವೆ ಪ್ರಯಾಣಿಕರ ಲಗೇಜ್ ಗಳ ತಪಾಸಣೆಗಳನ್ನು ನಡೆಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದರು. ಒಬ್ಬ ಪ್ರಯಾಣಿಕನು ಸ್ಲೀಪರ್ ಬೋಗಿಯಲ್ಲಿ 500 ಕಿ.ಮೀ ದೂರ ಪ್ರಯಾಣ ಮಾಡಿದರೆ. ಅವರು 80 ಕೆಜಿ ತೂಕದ ಲಗೇಜ್ ಹೊಂದಿದ್ದರೆ. ಅದರಲ್ಲಿ 40 ಕೆಜಿ ಲಗೇಜಿಗೆ 109 ರೂ ಶುಲ್ಕ ಪಾವತಿಸಿ ಲಗೇಜ್ ವ್ಯಾನ್ ನಲ್ಲಿ ತೆಗೆದುಕೊಂಡು ಹೋಗಬೇಕಾಗುತ್ತದೆ. ಒಂದು ವೇಳೆ ಈ ರೀತಿ ಮಾಡದೆ ಹೋದರೆ ಅವರು ಆರು ಪಟ್ಟು ಅಂದರೆ 654 ರೂ ದಂಡ ಪಾತಿಸಬೇಕಾಗುತ್ತದೆ.
ಎಸಿ ಮತ್ತು ಫಸ್ಟ್ ಕ್ಲಾಸ್ ಪ್ರಯಾಣಿಕರಿಗೆ 70 ಕೆಜಿ ಲಗೇಜ್ ಯಿಂದ ಗರಿಷ್ಠ 150 ಕೆಜಿ ತೂಕದ ಲಗೇಜ್ ತೆಗೆದುಕೊಂಡು ಹೋಗಬಹುದು. ಆದರೆ ಹೆಚ್ಚುವರಿ 80 ಕೆಜಿ ಲಗೇಜಿಗೆ ಶುಲ್ಕ ಪಾವತಿಸಿದ ನಂತರ ಸಾಗಿಸಬಹುದು. ಇನ್ನು ಎಸಿ ಎರಡು-ಹಂತದ ಪ್ರಯಾಣಿಕರು 50 ಕೆಜಿ ಲಗೇಜ್ ನನ್ನು ಉಚಿತವಾಗಿ ಮತ್ತು 50 ಕೆಜಿಗೆ ಶುಲ್ಕವನ್ನು ಪಾವತಿಸುವ ಮೂಲಕ ಗರಿಷ್ಟ 100 ಕೆಜಿ ಲಗೇಜ್ ಗಳನ್ನು ಸಾಗಿಸಬಹುದು.