ಚಂಡೀಗಢ: ಡ್ರಗ್ ಮಾಫಿಯಾದಲ್ಲಿ ತೊಡಗಿದ್ದ ಇಬ್ಬರ ಮನೆಗಳ ಮೇಲೆ ಪಂಜಾಬ್‌ನ (Punjab) ಆಪ್ ಸರ್ಕಾರ (AAP Government) ಬುಲ್ಡೋಜರ್ ಅಸ್ತ್ರ (Bulldozer Justice) ಪ್ರಯೋಗಿಸಿದೆ. ಡ್ರಗ್ ಮಾಫಿಯಾದಲ್ಲಿ ಭಾಗಿಯಾಗಿದ್ದ ಇಬ್ಬರ ಮನೆಗಳನ್ನು ಪಂಜಾಬ್ ಪೊಲೀಸರು ನೆಲಸಮಗೊಳಿಸಿದ್ದಾರೆ.
ಆರೋಪಿಗಳಾದ ಸೋನು ಮತ್ತು ರಾಹುಲ್ ಹನ್ಸ್‌ಗೆ ಸೇರಿದ್ದ ಅಕ್ರಮವಾಗಿ ನಿರ್ಮಿಸಿದ್ದ ಮನೆಗಳನ್ನು ಕೆಡವಲಾಗಿದೆ. ಇದು ರಾಜ್ಯ ಸರ್ಕಾರದ ಡ್ರಗ್ಸ್ ವಿರುದ್ಧದ ಕ್ರಮದ ಭಾಗವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: Haveri | ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಬಸ್ ಡಿಕ್ಕಿ – ಪ್ರಯಾಣಿಕರು ಪಾರು
Advertisement
ಆರೋಪಿಗಳು ಮೂರು ವರ್ಷಗಳಿಂದ ಮಾದಕ ವಸ್ತುಗಳ ಕಳ್ಳಸಾಗಣೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಸೋನು ವಿರುದ್ಧ ಆರು ಎಫ್‌ಐಆರ್‌ಗಳು ದಾಖಲಾಗಿದ್ದವು. ಇನ್ನೂ ರಾಹುಲ್ ಹನ್ಸ್ ಸಹ ಕೃತ್ಯದಲ್ಲಿ ತೊಡಗಿಕೊಂಡಿದ್ದ. ಆತನ ಮನೆ 47 ಲಕ್ಷ ರೂ. ಮೌಲ್ಯದ್ದಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement
Advertisement
ಕಳೆದ ವಾರ ಪಂಜಾಬ್ ಪೊಲೀಸರು ನಾಲ್ವರು ಮಾದಕ ವಸ್ತುಗಳ ಕಳ್ಳಸಾಗಣೆದಾರರನ್ನು ಬಂಧಿಸಿದ್ದರು. ಬಂಧಿತರಿಂದ 5 ಕೆ.ಜಿಗೂ ಹೆಚ್ಚು ಹೆರಾಯಿನ್ ವಶಪಡಿಸಿಕೊಂಡಿದ್ದರು. ಆರೋಪಿಗಳನ್ನು ಅಮೃತಸರ ನಿವಾಸಿಗಳಾದ ಗುರ್ಜಂತ್ ಸಿಂಗ್ ಅಲಿಯಾಸ್ ಕಲು ಮತ್ತು ಜಗ್ಜಿತ್ ಸಿಂಗ್, ತರಣ್ ತರಣ್‌ನ ಸಾಹಿಲ್ ಕುಮಾರ್ ಅಲಿಯಾಸ್ ಸಾಹಿಲ್ ಮತ್ತು ಫಿರೋಜ್‌ಪುರದ ರಿಂಕು ಎಂದು ಗುರುತಿಸಲಾಗಿದೆ.
Advertisement
ಪಂಜಾಬ್ ಸರ್ಕಾರ ಮಾದಕ ವಸ್ತುಗಳಿಂದ ಜನರನ್ನು ಮುಕ್ತವಾಗಿಸಲು ಔಷಧ, ಪರೀಕ್ಷಾ ಕಿಟ್‌ಗಳು, ಅಗತ್ಯವಿರುವ ಸಿಬ್ಬಂದಿ ಸೇರಿದಂತೆ ಪುನರ್ವಸತಿ ಮತ್ತು ಮಾದಕ ವಸ್ತುಗಳ ವ್ಯಸನ ಮುಕ್ತಿ ಕೇಂದ್ರಗಳನ್ನು ಸ್ಥಾಪಿಸಿದೆ. ಇವುಗಳ ಸ್ಥಿತಿ ಬಗ್ಗೆ ಖಚಿತಪಡಿಸಿಕೊಳ್ಳಲು ಎಲ್ಲಾ ಜಿಲ್ಲಾಧಿಕಾರಿಗಳಿಗೂ ನಿರ್ದೇಶಿಸಲಾಗಿದೆ. ಇದನ್ನೂ ಓದಿ: ಲಾಡ್ಲೇ ಮಶಾಕ್ ದರ್ಗಾದ ಶಿವಲಿಂಗ ಪೂಜೆಗೆ ಹೈಕೋರ್ಟ್ ಗ್ರೀನ್ ಸಿಗ್ನಲ್ – ಆಂದೋಲಾ ಶ್ರೀಗಿಲ್ಲ ಪೂಜೆ ಭಾಗ್ಯ