ಬೆಂಗಳೂರು: ಬಸ್ ಸೀಟ್, ಉದ್ಯೋಗ ಮತ್ತು ಟ್ರೈನ್ ಬೋಗಿಯಲ್ಲಿ ಮಹಿಳೆಯರಿಗೆ ರಿಸರ್ವೆಷನ್ ಇದೆ. ಈಗ ಪಾರ್ಕಿಂಗ್ ನಲ್ಲೂ ಮಹಿಳಾ ಚಾಲಕರಿಗೆ ರಿಸರ್ವೆಷನ್ ಸಿಗುತ್ತಿದ್ದು, ಇದರ ಮೊದಲ ಹೆಗ್ಗಳಿಕೆ ನಮ್ಮ ಸಿಲಿಕಾನ್ ಸಿಟಿಗೆ ಸಿಕ್ಕಿದೆ.
ವೀಕ್ ಎಂಡ್ ಬಂದರೆ ಸಾಕು ಎಂಜಿ ರೋಡ್, ಬ್ರಿಗೇಡ್ ರೋಡ್ ಮತ್ತು ಚರ್ಜ್ ಸ್ಟ್ರೀಟ್ ನಲ್ಲಿ ಪಾರ್ಕಿಂಗ್ ಸಮಸ್ಯೆ ಇರುತ್ತದೆ. ರಜೆ ದಿನಗಳಲ್ಲಿ ಮಹಿಳೆಯರು ಪತಿ ಮತ್ತು ಮಕ್ಕಳ ಜೊತೆ ಸುತ್ತಾಡಿಕೊಂಡು ಶಾಂಪಿಗ್ ಮಾಡಿ, ಊಟ ಮಾಡಿಕೊಂಡು ಬರೋಣ ಅಂದುಕೊಂಡಿರುತ್ತಾರೆ. ಆದ್ರೆ ಸಾಮಾನ್ಯವಾಗಿ ಎಲ್ಲಾ ಕಡೆ ಪಾರ್ಕಿಂಗ್ ಸಮಸ್ಯೆ ಇದ್ದಿದ್ದೇ. ಇದಕ್ಕೆಲ್ಲ ಪರಿಹಾರ ನೀಡಬೇಕೆಂದು ಬಿಬಿಎಂಪಿ, ಮಹಿಳೆಯರಿಗೆ ಪಾರ್ಕಿಂಗ್ ರಿಸರ್ವೇಷನ್ ವ್ಯವಸ್ಥೆಯನ್ನು ನೀಡಲು ಮುಂದಾಗಿದೆ.
Advertisement
Advertisement
ನಗರದಲ್ಲಿ ಮಹಿಳೆಯರಿಗೆ ವಾಹನ ನಿಲುಗಡೆಯಲ್ಲಿ ಮೀಸಲಾತಿ ನೀಡುವುದಕ್ಕೆ ಬಿಬಿಎಂಪಿ ಯೋಜನೆ ರೂಪಿಸಿದ್ದು, ಮೊಟ್ಟ ಮೊದಲ ಬಾರಿಗೆ ಬ್ರಿಗೇಡ್ ರಸ್ತೆಯಲ್ಲಿ ಚಾಲನೆಗೆ ತರಲಾಗಿದೆ. ಬ್ರಿಗೇಡ್ ರಸ್ತೆಯಲ್ಲಿ ಮಹಿಳೆಯರಿಗೆ ಶೇಕಾಡ. 20 ರಷ್ಟು ಪಾರ್ಕಿಂಗ್ ರಿಸರ್ವೆಷನ್ ನೀಡಲಾಗಿದೆ. ಇದರಿಂದ ತುಂಬಾ ಸಂತಸವಾಗಿದೆ ಎಂದು ವಾಹನ ಸವಾರರಾದ ವಿದ್ಯಾ ಹೇಳಿದ್ರು.
Advertisement
ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಪಾರ್ಕಿಂಗ್ ನಲ್ಲಿ ರಿಸರ್ವೇಷನ್ ನೀಡುವ ಯೋಜನೆ ಉತ್ತಮವಾಗಿದ್ದು, ಮುಂದಿನ ದಿನಗಳಲ್ಲಿ ಬೆಂಗಳೂರಿನ ಎಲ್ಲ ಭಾಗಗಳಲ್ಲೂ ಈ ಮೀಸಲಾತಿ ವ್ಯವಸ್ಥೆಯನ್ನು ಜಾರಿಗೆ ತರಬೇಕೆನ್ನುವ ಆಶಾಯವಿದೆ ಎಂದು ಬಿಬಿಎಂಪಿ ಮೇಯರ್ ಸಂಪತ್ ರಾಜ್ ತಿಳಿಸಿದ್ರು.