ಬೆಂಗಳೂರು: ಇನ್ನು ಮುಂದೆ ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ‘ದೊಂಬರಾಟ’ ಪದವನ್ನು ವ್ಯಂಗ್ಯವಾಗಿ ಬಳಸುವಂತಿಲ್ಲ ಎಂದು ವಾರ್ತಾ ಇಲಾಖೆ ತಿಳಿಸಿದೆ.
ಹೌದು. ಸಂವಿಧಾನದ 1950 ರ ಅನ್ವಯ “ದೊಂಬರ ಜಾತಿಯು” ಪರಿಶಿಷ್ಟ ಜಾತಿಗಳ ಅಧಿಸೂಚನೆಯಲ್ಲಿ 33ನೇ ಉಪ ಜಾತಿಗಳಲ್ಲಿ ಸೇರ್ಪಡೆಯಾಗಿರುತ್ತದೆ. ದೊಂಬರ ಜಾತಿಯು ತನ್ನದೇ ಆದ ಸಂಸ್ಕೃತಿ ವೈಶಿಷ್ಟ್ಯತೆಯನ್ನು ಹೊಂದಿದ್ದು, ಸಂವಿಧಾನದ 1950 ನೇ ಪರಿಚ್ಚೇಧ 15 ರ ಅನ್ವಯ ಜಾತಿನಿಂದನೆ ಕಾನೂನು ಬಾಹಿರವಾಗಿರುತ್ತದೆ. ಆದ್ದರಿಂದ ಅನವಶ್ಯಕವಾಗಿ ಜಾತಿಯನ್ನು ವ್ಯಂಗ್ಯ ಪದವನ್ನಾಗಿ ಬಳಕೆ ಮಾಡಿಕೊಳ್ಳದಂತೆ ಮಾಧ್ಯಮದವರಿಗೆ ವಾರ್ತಾ ಇಲಾಖೆ ತಿಳಿಸಿದೆ.
Advertisement
ಯಾಕೆ ಬಳಸಬಾರದು?
ಅಖಿಲ ಕರ್ನಾಟಕ ದೊಂಬರ ಕ್ಷೇಮಾಭಿವೃದ್ಧಿ ಸಂಘ ಈ ಹಿಂದೆ ರಾಜಕೀಯ ಪಕ್ಷಗಳು ಹಾಗೂ ರಾಜಕಾರಣಿಗಳನ್ನು ದೂಷಿಸುವಾಗ ದೊಂಬರಾಟ ಎಂಬ ಪದವನ್ನು ಅವಹೇಳನಾಕಾರಿಯಾಗಿ ಬಳಸಲಾಗುತ್ತಿದೆ ಎಂದು ಆರೋಪಿಸಿತ್ತು.
Advertisement
ದೊಂಬರಾಟ ಪದ ಬಳಕೆಯನ್ನು ವ್ಯಂಗ್ಯರೂಪದಲ್ಲಿ ಬಳಸುವ ಮೂಲಕ ದೊಂಬರ ಸಮಾಜವನ್ನು ಕೀಳು ಮಟ್ಟ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಈ ಕಾರಣಕ್ಕೆ ದೊಂಬರಾಟ ಪದ ಬಳಸದಂತೆ ಅಧಿವೇಶನದಲ್ಲಿ ಸೂಚನೆ ಹೊರಡಿಸಬೇಕೆಂದು ಸಭಾಪತಿ ಹಾಗೂ ರಾಜ್ಯಪಾಲರನ್ನು ಒತ್ತಾಯಿಸಿತ್ತು. ಅಷ್ಟೇ ಅಲ್ಲದೇ ದೊಂಬರಾಟ ಎಂಬ ಪದವನ್ನು ಮಾಧ್ಯಮಗಳಲ್ಲಿ ಬಳಸುವುದನ್ನು ಸಂಘ ಖಂಡಿಸಿತ್ತು.