ಮಂಡ್ಯ: ಇನ್ಮುಂದೆ ನಾನು ಸಿನಿಮಾ ಮಾಡೋದನ್ನು ಬಂದ್ ಮಾಡಿದ್ದೇನೆ, 24*7 ಫುಲ್ ಟೈಮ್ ರಾಜಕಾರಣಿ ಆಗಿ ಕೆಲಸ ಮಾಡ್ತೀನಿ ಎಂದು ನಟ, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಹೇಳಿದ್ದಾರೆ.
2023ರ ವಿಧಾನಸಭಾ ಚುನಾವಣೆಯಲ್ಲಿ ರಾಮನಗರ (Ramanagara) ಕ್ಷೇತ್ರದಿಂದ ಸ್ಪರ್ಧಿಸಿದ ಸೋತ ಬಳಿಕ ನಿಖಿಲ್ ಕುಮಾರಸ್ವಾಮಿ ಇನ್ನೂ ರಾಜಕೀಯ ಬಿಟ್ಟು ಸಿನಿಮಾ ಕ್ಷೇತ್ರದ ಕಡೆಯೇ ಒಲವು ತೋರಿಸುತ್ತಾರೆ ಎಂದು ಹೇಳಲಾಗಿತ್ತು. ಈ ಸಂಬಂಧ ಹಲವು ಕಡೆ ಅವರ ತಂದೆ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಸಹ ಅದೇ ರೀತಿ ಸ್ಪಂದನೆ ಮಾಡಿದ್ದರು. ಇದನ್ನೂ ಓದಿ: ಬಿಜೆಪಿ ವಿರುದ್ಧ ಸುಳ್ಳು ಜಾಹೀರಾತು ಆರೋಪ ಕೇಸ್ – ರಾಹುಲ್ ಗಾಂಧಿಗೆ ಷರತ್ತುಬದ್ಧ ಜಾಮೀನು, ಡಿಕೆಸು ಪ್ರಾಪರ್ಟಿ ಶ್ಯೂರಿಟಿ
Advertisement
Advertisement
ಶುಕ್ರವಾರ ಮಂಡ್ಯದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ನಿಖಿಲ್, ನಾನು ಇನ್ಮುಂದೆ ಸಿನಿಮಾ ಮಾಡೋದನ್ನ ಬಂದ್ ಮಾಡಿದ್ದೇನೆ. ಪಕ್ಷ ಕಟ್ಟುವ ಜವಾಬ್ದಾರಿ ನನ್ನ ಮೇಲೆ ಇದೆ. ಹೀಗಾಗಿ ನಾನು ರಾಜ್ಯಾದ್ಯಂತ ಸಂಚಾರ ಮಾಡಿ ಪಕ್ಷ ಸಂಘಟನೆ ಮಾಡ್ತೀನಿ. ಸಿನಿಮಾ ಮಾಡೋದನ್ನು ಬಂದ್ ಮಾಡಿದ್ದೇನೆ. 24*7 ರಾಜಕಾರಣಿ ಆಗಿ ಕೆಲಸ ಮಾಡ್ತೀನಿ ಎಂದು ನಿಖಿಲ್ ಹೇಳಿದ್ದಾರೆ. ಇದನ್ನೂ ಓದಿ: ಡ್ರಗ್ಸ್ ಪ್ರಕರಣ: ಕೇಸ್ ಇತ್ಯರ್ಥ ಆಗೋತನಕ ತೆಲುಗು ಕಲಾವಿದರ ಸಂಘದಿಂದ ಹೇಮಾ ಅಮಾನತು
Advertisement
Advertisement
ಜಾಗ್ವಾರ್ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಿಖಿಲ್, ನಾಯಕ ನಟನಾಗಿ ಪಾದಾರ್ಪಣೆ ಮಾಡಿದ್ದು, ಬಳಿಕ ಸೀತಾರಾಮ ಕಲ್ಯಾಣ, ರೈಡರ್ ಸಿನಿಮಾದಲ್ಲಿ ನಾಯಕ ನಟನಾಗಿ ನಟಿಸಿದ್ದಾರೆ. ಇನ್ನೂ ದರ್ಶನ್ ನಾಯಕ ನಟನೆಯ ಕುರುಕ್ಷೇತ್ರ ಸಿನಿಮಾದಲ್ಲಿ ʻಅಭಿಮನ್ಯುʼ ಪಾತ್ರದಲ್ಲಿ ಕಾಣಿಸಿಕೊಂಡು ನಿಖಿಲ್ ಸೈ ಎನ್ನಿಸಿಕೊಂಡಿದ್ದರು. ಸದ್ಯ ನಿಖಿಲ್ ಅವರ ಕೈಯಲ್ಲಿ ಯದುವೀರ ಎಂಬ ಸಿನಿಮಾ ಸಹ ಇತ್ತು. ಇದೀಗ ಸದ್ಯ ನಿಖಿಲ್ ಸಿನಿಮಾ ಕ್ಷೇತ್ರದಿಂದ ದೂರ ಉಳಿಯುವ ನಿರ್ಧಾರ ಮಾಡಿದ್ದಾರೆ. ಇದನ್ನೂ ಓದಿ: ಭಾನುವಾರ ಸಂಜೆ 6 ಗಂಟೆಗೆ ಮೋದಿ ಪ್ರಧಾನಿಯಾಗಿ ಪ್ರಮಾಣವಚನ