ಬೆಂಗಳೂರು: ಫಿಲಂ ಚೇಂಬರ್‍ಗೆ ಸರ್ಕಾರದ ವತಿಯಿಂದ ಆಡಳಿತಾಧಿಕಾರಿಯನ್ನು ನೇಮಿಸಲು ಸರ್ಕಾರ ಮುಂದಾಗಿದೆ. ಈ ಕುರಿತು ಸರ್ಕಾರದ ಅಧೀನ ಕಾರ್ಯದರ್ಶಿ ಕೆ.ಟಿ ಪ್ರಕಾಶ್ ಅವರು ಫಿಲಂ ಚೇಂಬರ್ ಗೆ ನೋಟಿಸ್ ಜಾರಿ ಮಾಡಿದ್ದಾರೆ.
ಫಿಲಂ ಚೇಂಬರ್ ಅಧ್ಯಕ್ಷ ಸಾ.ರಾ ಗೋವಿಂದು ಅವರ ಅಧಿಕಾರಾವಧಿ ಮುಗಿದು 9 ತಿಂಗಳು ಕಳೆದರೂ ಮುಂದಿನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೇ ನಡೆಯದಿರುವುದೇ ಪ್ರಮುಖ ಕಾರಣವಾಗಿದೆ.
Advertisement
ಇದೀಗ ಸರ್ಕಾರ, ಚುನಾವಣೆ ನಡೆಸಿ ಅಧ್ಯಕ್ಷರನ್ನು ಆಯ್ಕೆ ಮಾಡುವಂತೆ ಸೂಚಿಸಿ ಈಗಾಗಲೇ 2 ನೋಟಿಸ್ ಕಳುಹಿಸಿಕೊಟ್ಟಿದೆ. ಆದರೆ ಈ ಕುರಿತು ಫಿಲಂ ಚೇಂಬರ್‍ನಿಂದ ಯಾವುದೇ ಪ್ರತಿಕ್ರಿಯೇ ಬಾರದ ಹಿನ್ನೆಯಲ್ಲಿ ಸರ್ಕಾರದ ಆಡಳಿತ ಅಧಿಕಾರಿಯನ್ನು ನೇಮಕ ಮಾಡಲು ಮುಂದಾಗಿದೆ. ಈ ಕುರಿತು ನೋಟಿಸ್ ಕಳುಹಿಸಿಕೊಡಲಾಗಿದ್ದು 15 ದಿನಗಳ ಒಳಗೆ ಲಿಖಿತ ರೂಪದ ಉತ್ತರವನ್ನು ನೀಡಬೇಕು ಎಂದು ಸೂಚಿಸಿದೆ.
Advertisement
Advertisement
Advertisement