ಢಾಕಾ: ಇಮ್ರಾನ್ ಪಾಕ್ ಪ್ರಧಾನಿಯಾಗುತ್ತಾರೆ ಎಂದು ತಮ್ಮ ಆಧ್ಯಾತ್ಮಿಕ ಶಕ್ತಿಯಿಂದ ಭವಿಷ್ಯ ನುಡಿದಿದ್ದ ಬುಶ್ರಾ ಬೀಬಿಗೆ ಇಮ್ರಾನ್ ಖಾನ್ ಈಗ ವಿಚ್ಛೇದನ ನೀಡಬಹುದು ಎಂದು ಬಾಂಗ್ಲಾದೇಶ ಬರಹಗಾರ್ತಿ ತಸ್ಲೀಮಾ ನಸ್ರಿನ್ ಕುಟುಕಿದ್ದಾರೆ.
Advertisement
ಪಾಕಿಸ್ತಾನದ ಪ್ರಧಾನಿ ಸ್ಥಾನ ಬಿಕ್ಕಟ್ಟು ಕುರಿತು ಟ್ವೀಟ್ ಮಾಡಿರುವ ಅವರು, ʻಇಮ್ರಾನ್ ಖಾನ್, ಬುಶ್ರಾ ಅವರನ್ನು ವಿವಾಹವಾದರು. ಏಕೆಂದರೆ ಬುಶ್ರಾ ತನ್ನ ವಿಶೇಷ ಆಧ್ಯಾತ್ಮಿಕ ಶಕ್ತಿಯಿಂದ ಇಮ್ರಾನ್ ಪ್ರಧಾನಿಯಾಗುತ್ತಾರೆ ಎಂದು ಹೇಳಿದ್ದರು. ಆದರೆ ಇಮ್ರಾನ್ ತಮ್ಮ ಅವಧಿಯನ್ನು ಪೂರ್ಣಗೊಳಿಸಲು ಸಾಧ್ಯವಾಗುವುದಿಲ್ಲ ಎಂದು ಅವರು ಭವಿಷ್ಯ ನುಡಿದಿರಲಿಲ್ಲ. ಅದಕ್ಕಾಗಿ ಆಕೆಗೆ ಇಮ್ರಾನ್ ವಿಚ್ಛೇದನ ನೀಡಬಹುದು. ಇಮ್ರಾನ್ ಎಂದಿಗೂ ಸಾಯುವುದಿಲ್ಲ ಎಂದು ಭವಿಷ್ಯವಾಣಿ ನುಡಿಯುವ ಹೆಣ್ಣು ಗಿಣಿಯನ್ನು ಖಾನ್ ಮದುವೆಯಾಗಬಹುದುʼ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಭಾರತವನ್ನು ಹೊಗಳಿದ ಇಮ್ರಾನ್ ಖಾನ್‍ಗೆ ಪಾಕ್ ಬಿಟ್ಟು ತೊರೆಯಿರಿ ಎಂದ ಷರೀಫ್ ಪುತ್ರಿ
Advertisement
Imran Khan married Bushra because Bushra with her special spiritual power said Imran would be the Prime Minister.Did she predict he won't be able to complete his term? Certainly not. Now he can divorce her& marry a fortune-telling female parrot who will say Imran will never die.
— taslima nasreen (@taslimanasreen) April 9, 2022
Advertisement
ಇಮ್ರಾನ್ ಖಾನ್ ಚುನಾವಣೆಯಲ್ಲಿ ಗೆದ್ದ ನಂತರ 2018 ರಲ್ಲಿ ಬುಶ್ರಾ ಬೀಬಿ ಅವರನ್ನು ವಿವಾಹವಾದರು. ಬುಶ್ರಾ ಬೀಬಿ ಅವರು ಪಾಕಿಸ್ತಾನದ ಪ್ರಥಮ ಮಹಿಳೆಯಾದಾಗಿನಿಂದ ವಾಮಾಚಾರ ಮಾಡುತ್ತಿದ್ದಾರೆ ಎಂದು ವಿರೋಧ ಪಕ್ಷಗಳು ಆರೋಪಿಸಿದ್ದವು. ಇಮ್ರಾನ್ ಖಾನ್ 2015 ರಿಂದ ಬುಶ್ರಾ ಬೀಬಿಯನ್ನು ಆಧ್ಯಾತ್ಮಿಕ ಮಾರ್ಗದರ್ಶನಕ್ಕಾಗಿ ಭೇಟಿಯಾಗುತ್ತಿದ್ದರು.
Advertisement
ಬೀಬಿ ಅವರ ರಾಜಕೀಯ ಭವಿಷ್ಯವಾಣಿಗಳು ನಿಜವಾಗಿವೆ ಎಂದು ಪಾಕಿಸ್ತಾನಿ ಮಾಧ್ಯಮಗಳು ವರದಿ ಮಾಡಿವೆ. ಇಮ್ರಾನ್ ಖಾನ್ ಅವರನ್ನು ಮದುವೆಯಾಗುವ ಮೊದಲು, ಬುಶ್ರಾ ಬೀಬಿ ಅವರು ಸರ್ಕಾರಿ ಅಧಿಕಾರಿಯಾಗಿದ್ದ ಖವಾರ್ ಫರೀದ್ ಮೇನಕಾ ಅವರನ್ನು ವಿವಾಹವಾಗಿದ್ದರು. ಇದನ್ನೂ ಓದಿ: ಪಾಕ್ ಅನ್ನು ಟಿಶ್ಯೂ ಪೇಪರ್ ಆಗಿ ಬಳಸಿ ಎಸೆಯಲಾಗಿದೆ: ಇಮ್ರಾನ್ ಕಿಡಿ