ನವದೆಹಲಿ: ನಗದು ವ್ಯವಹಾರದ ಗರಿಷ್ಠ ಮಿತಿಯನ್ನು 2 ಲಕ್ಷ ರೂ. ಇಳಿಸಬೇಕೆಂಬ ಹೊಸ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಆರ್‍ಬಿಐಗೆ ಸಲ್ಲಿಸಿದೆ.
ಈ ವರ್ಷದ ಹಣಕಾಸು ಬಜೆಟ್‍ನಲ್ಲಿ ಅರುಣ್ ಜೇಟ್ಲಿ ನಗದು ವ್ಯವಹಾರಕ್ಕೆ 3 ಲಕ್ಷ ರೂ. ಗರಿಷ್ಠ ಮಿತಿಯನ್ನು ಪ್ರಕಟಿಸಿದ್ದರು. ಈಗ ಈ ಮಿತಿಯಲ್ಲಿ 1 ಲಕ್ಷ ರೂ. ಕಡಿತಗೊಳಿಸಿ 2 ಲಕ್ಷ ರೂ. ಇಳಿಸಬೇಕೆಂಬ ಹೊಸ ಪ್ರಸ್ತಾಪವನ್ನು ಕೇಂದ್ರ ಸರ್ಕಾರ ಆರ್‍ಬಿಐಗೆ ಸಲ್ಲಿಸಿದೆ.
Advertisement
ಹಣಕಾಸು ಮಸೂದೆಗೆ ಮಾಡಲಾಗಿರುವ 40 ತಿದ್ದುಪಡಿಯಲ್ಲಿ ಈ ತಿದ್ದುಪಡಿ ಅಂಶವೂ ಸೇರಿದೆ. ತಿದ್ದುಪಡಿಯ ಬಳಿಕ ಕಂದಾಯ ಕಾರ್ಯದರ್ಶಿ ಹಸ್ಮುಕ್ ಆಧಿಯಾ ಟ್ವೀಟ್ ಮಾಡಿ, ಒಂದು ವೇಳೆ ನಿಯಮವನ್ನು ಉಲ್ಲಂಘಿಸಿದರೆ ಅಷ್ಟೇ ಮೊತ್ತದ ದಂಡವನ್ನು ಪಾವತಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.
Advertisement
ಕಪ್ಪು ಹಣದ ವಿರುದ್ಧ ತನಿಖೆ ನಡೆಸಲು ಸುಪ್ರೀಂಕೋರ್ಟ್ ರಚನೆ ಮಾಡಿದ್ದ ವಿಶೇಷ ತನಿಖಾ ತಂಡ ಸಲ್ಲಿಸಿದ್ದ ವರದಿಯ ಶಿಫಾರಸಿನಂತೆ ನಗದು ಹಣಕಾಸು ವ್ಯವಹಾರವನ್ನು ತಡೆಗಟ್ಟಲು ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಅರುಣ್ ಜೇಟ್ಲಿ ಬಜೆಟ್ ಮಂಡನೆ ಮಾಡುವಾಗ ಸಮರ್ಥಿಸಿಕೊಂಡಿದ್ದರು.
Advertisement
ಈ ಮಸೂದೆ ಕಾಯ್ದೆಯಾಗಿ ಜಾರಿಯಾದರೆ 2 ಲಕ್ಷ ರೂ.ಗಳಿಗಿಂತ ಹೆಚ್ಚಿನ ವ್ಯವಹಾರವನ್ನು ಜನರು ಚೆಕ್, ಡಿಡಿ, ಆನ್‍ಲೈನ್ ಮೂಲಕ ಮಾಡಬೇಕಾಗುತ್ತದೆ.
Advertisement
1/2 In the official amend.to FBill Govt has proposed that limit of 3 lakhs for cash tranx,beyond which it is illegal, be reduced to 2 lakhs
— Dr Hasmukh Adhia (@adhia03) March 21, 2017
2/2 The penalty for violating this is a fine equivalent to the amount of transaction
— Dr Hasmukh Adhia (@adhia03) March 21, 2017