ನವದೆಹಲಿ: ಪಾಸ್ ಪೋರ್ಟ್ ಪಡೆಯಲು ಹೇರಿದ್ದ ಕಠಿಣ ಷರತ್ತುಗಳನ್ನು ಕೇಂದ್ರ ವಿದೇಶಾಂಗ ಸಚಿವಾಲಯ ಸಡಿಲಗೊಳಿಸಿ ಶೀಘ್ರವಾಗಿ ಕೈ ಸೇರುವಂತ ಹೊಸ ಯೋಜನೆಗಳನ್ನು ಜಾರಿಗೊಳಿಸಿದೆ.
ಮಂಗಳವಾರ ನಡೆದ ರಾಷ್ಟ್ರೀಯ ಪಾಸ್ ಪೋರ್ಟ್ ದಿನದಂದು ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‍ರವರು, ಪಾಸ್ ಪೋರ್ಟ್ ನಿಯಾಮಳಿಗಳಲ್ಲಿ ಹಲವು ತಿದ್ದುಪಡಿಗಳನ್ನು ಮಾಡಿ, ಹಲವು ಕಠಿಣ ಷರತ್ತುಗಳನ್ನು ಸಡಿಲಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
Advertisement
ಹೊಸ ಯೋಜನೆಯಿಂದ ದೇಶದ ನಾಗರಿಕರು ತಮ್ಮ ಮೂಲ ವಿಳಾಸದಿಂದ ದೇಶದ ಯಾವುದೇ ಭಾಗದಲ್ಲಿಯೂ ಕೂಡ ಅರ್ಜಿ ಸಲ್ಲಿಸುವ ಸೌಲಭ್ಯವನ್ನು ಪಡೆದುಕೊಂಡಿದ್ದಾರೆ. ಈ ಬದಲಾವಣೆಯಿಂದ ಉದ್ಯೋಗಕ್ಕಾಗಿ ಬೇರೆ ಕಡೆ ವಾಸಿಸುವ ಜನರಿಗೆ ಅನುಕೂಲವಾಗಿದೆ. ಅಲ್ಲದೇ ಜನರು ತಮಗೆ ಬೇಕಾದ ಸೇವಾಕೇಂದ್ರವನ್ನು ಆಯ್ಕೆಮಾಡಿಕೊಳ್ಳುವ ಸೌಲಭ್ಯವನ್ನು ಪಡೆದುಕೊಂಡಿದ್ದಾರೆ ಎಂದು ಹೇಳಿದರು.
Advertisement
Now, through Passport Seva app, people can apply for a passport from any part of the country. Police verification will be done on the address you will give on the app. The passport will be dispatched to that address: EAM Sushma Swaraj pic.twitter.com/rdYdq6sRsb
— ANI (@ANI) June 26, 2018
Advertisement
ಪಾಸ್ ಪೋರ್ಟ್ ಸಲ್ಲಿಸಲು ಹೊಸ ಮೊಬೈಲ್ ಆ್ಯಪನ್ನು ಜಾರಿಗೊಳಿಸಿದ್ದು, ಇದರಿಂದ ಯಾವುದೇ ಭಾಗದಿಂದಲೂ ನಾಗರಿಕರು ಅರ್ಜಿ ಸಲ್ಲಿಸಬಹುದು. ಈ ಯೋಜನೆ ಈಗಿನಿಂದಲೇ ಜಾರಿಬರಲಿದ್ದು, ನೀವು ಒಂದು ವೇಳೆ ಬೆಂಗಳೂರಿನಲ್ಲಿದ್ದುಕೊಂಡು ಕೆಲಸಕ್ಕಾಗಿ ಕೋಲ್ಕತ್ತಾಗೆ ಬಂದಿದ್ದರೆ ನೀವು ಬೆಂಗಳೂರಿನಲ್ಲಿ ಮೊದಲು ಅರ್ಜಿ ಸಲ್ಲಿಸಬೇಕಾಗಿತ್ತು. ಆದರೆ ಈ ಹೊಸ ಯೋಜನೆಯಿಂದ ನೀವು ಕೋಲ್ಕತ್ತಾದಲ್ಲಿಯೇ ಅರ್ಜಿ ಸಲ್ಲಿಸಬಹುದು ಎಂದು ಹೇಳಿದರು.
Advertisement
ಪಾಸ್‍ಪೋರ್ಟ್ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದ ಅವರು, ಸರ್ಕಾರ ಪಾಸ್‍ಪೋರ್ಟ್ ವ್ಯವಸ್ಥೆ ಸುಲಭಗೊಳಿಸಿದ್ದರಿಂದ ಕ್ರಾಂತಿಕಾರಿ ಬದಲಾವಣೆಯಾಗಲಿದ್ದು, ಯಾರು ಹುಟ್ಟಿದ ದಿನಾಂಕ ಇಲ್ಲಯೋ ಅವರು ಸಹ ಅರ್ಜಿ ಸಲ್ಲಿಸಬಹುದು ಹಾಗೂ ಕಡ್ಡಾಯವಾಗಿ ವಿವಾಹ ನೋಂದಣಿ ಪತ್ರ ಸಲ್ಲಿಕೆಯನ್ನು ತೆಗೆದುಹಾಕಲಾಗಿದ್ದು ಇದರಿಂದ ಹಲವು ದಿನಗಳ ವರಗೆ ಕಾಯುವ ತೊಂದರೆ ತಪ್ಪುತ್ತದೆ. ವಿಚ್ಛೇದನ ಹೊಂದಿದವರಿಗೆ ಪಾಸ್‍ಪೋರ್ಟ್ ಪಡೆಯಲು ಇದು ಸಹಾಯಕವಾಗಿದೆ. ಇದನ್ನೂ ಓದಿ: ಮುಸ್ಲಿಂ ಸಮುದಾಯದ ಪರ ನಿಂತ ಸುಷ್ಮಾ ಸ್ವರಾಜ್ ಟ್ರೋಲ್
ವಿಚ್ಛೇದಿತ ಮಹಿಳೆಯರು ತಮ್ಮ ಮಾಜಿ ಪತಿ ಮತ್ತು ಅವರ ಮಕ್ಕಳ ಹೆಸರನ್ನು ತುಂಬಬೇಕಾದ ಅಗತ್ಯವಿಲ್ಲ ಹಾಗೂ ಸದ್ಯ ದೇಶದಲ್ಲಿ ಒಟ್ಟು 370 ಪಾಸ್ ಪೋರ್ಟ್ ಸೇವಾ ಕೇಂದ್ರಗಳಿದ್ದು, ಇವುಗಳನ್ನು ದೇಶದ 545 ಲೋಕಸಭಾ ಕ್ಷೇತ್ರಗಳಿಗೂ ವಿಸ್ತರಿಸುವ ಗುರಿಯನ್ನು ತಿಳಿಸಿದ್ದಾರೆ.
ಏನಿಲ್ಲಾ ಷರತ್ತುಗಳು ಬದಲಾವಣೆಯಾಗಿವೆ?
ನಾಗರಿಕರು ತಮ್ಮ ವ್ಯಾಪ್ತಿಯಲ್ಲೇ ಬರುವ ಸೇವಾ ಕೇಂದ್ರದಲ್ಲಿ ಅರ್ಜಿ ಸಲ್ಲಿಸುವ ಕ್ರಮ, ಪತಿ-ಪತ್ನಿಯರ ಕಡ್ಡಾಯ ವಿವಾಹ ನೋಂದಣಿ ಪತ್ರ ಲಗತ್ತು, ಜನ್ಮ ದಿನಾಂಕ ಪ್ರಮಾಣ ಪತ್ರ ಹಾಗೂ ವಿಚ್ಛೇದಿತ ದಂಪತಿಗಳ ಹೆಸರು ನಮೂದುಗೊಳಿಸುವ ಕಠಿಣ ಷರತ್ತುಗಳನ್ನು ಸಡಿಲಗೊಳಿಸಿದೆ.