ಬೆಂಗಳೂರು: ವಿಶ್ವಾದ್ಯಂತ ಸದ್ದು ಮಾಡಿದ ರಾಕಿಂಗ್ ಸ್ಟಾರ್ ಯಶ್ ನಟಿಸಿದ ‘ಕೆಜಿಎಫ್’ ಚಿತ್ರ ಈಗ ಮೊಬೈಲಿನಲ್ಲೇ ವೀಕ್ಷಿಸಬಹುದು. ಕೆಜಿಎಫ್ ಚಿತ್ರ ಅಮೆಜಾನ್ ಪ್ರೈಂನಲ್ಲಿ ಹಿಂದಿ ಹೊರತುಪಡಿಸಿ ಕನ್ನಡ, ತಮಿಳು, ತೆಲುಗು ಹಾಗೂ ಮಲೆಯಾಳಂ ಭಾಷೆಯಲ್ಲಿರುವ ಚಿತ್ರವನ್ನು ವೀಕ್ಷಿಸಬಹುದು.
ಅಮೆಜಾನ್ ಪ್ರೈಂ ವಿಡಿಯೋ ಭಾನುವಾರ ತನ್ನ ಟ್ವಿಟ್ಟರ್ ಖಾತೆಯಲ್ಲಿ ಫೆಬ್ರವರಿ 5ರಂದು ಕೆಜಿಎಫ್ ಸಿನಿಮಾ ಬಿಡುಗಡೆ ಮಾಡುವುದಾಗಿ ಟ್ವೀಟ್ ಮಾಡಿತ್ತು. ಅಲ್ಲದೇ ಕನ್ನಡ, ತಮಿಳು, ತೆಲುಗು ಹಾಗೂ ಮಲೆಯಾಳಂ ಭಾಷೆಯಲ್ಲಿ ಸಿನಿಮಾ ಬಿಡುಗಡೆ ಮಾಡುವುದಾಗಿ ಟ್ವೀಟ್ ಮಾಡಿತ್ತು.
Advertisement
5000 RTs and we release KGF ????????
— prime video IN (@PrimeVideoIN) February 3, 2019
Advertisement
ಅಮೆಜಾನ್ ಪ್ರೈಂ ವಿಡಿಯೋ ಈ ಟ್ವೀಟ್ ಮಾಡುತ್ತಿದ್ದಂತೆ ಅಭಿಮಾನಿಗಳು ರೀ-ಟ್ವೀಟ್ ಮಾಡಲು ಶುರು ಮಾಡಿದ್ದರು. ಇದುವರೆಗೂ ಒಟ್ಟು 11 ಸಾವಿರಕ್ಕೂ ಹೆಚ್ಚು ರೀ-ಟ್ವೀಟ್ ಆಗಿ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
Advertisement
ಹಿಂದಿಯ ಖಾಸಗಿ ಚಾನೆಲ್‍ನಲ್ಲಿ ಕೆಜಿಎಫ್ ಚಿತ್ರ ಅತೀ ಶೀಘ್ರದಲ್ಲೇ ಪ್ರಸಾರವಾಗಲಿದೆ ಎಂದು ಪ್ರೋಮೋವನ್ನು ಹರಿಬಿಟ್ಟಿದ್ದಾರೆ. ಹಿಂದಿಯಲ್ಲಿ ಈ ಚಿತ್ರ ಗರಿಷ್ಠ ಬೆಲೆಗೆ ಸೇಲ್ ಆಗಿದೆ. ಮೂಲಗಳ ಪ್ರಕಾರ ಈ ಚಿತ್ರ ಹಿಂದಿಯಲ್ಲಿ ಇದೇ ತಿಂಗಳು ಪ್ರಸಾರವಾಗಲಿದೆ.
Advertisement
Thank you fans for making this KGF release larger than life. Y’all are tremendous ????????
— prime video IN (@PrimeVideoIN) February 3, 2019
ಕೆಜಿಎಫ್ ಸಿನಿಮಾ ಕಳೆದ ವರ್ಷ ಡಿಸೆಂಬರ್ 21ರಂದು ಬಿಡುಗಡೆ ಆಗಿತ್ತು. ಈ ಸಿನಿಮಾ ವಿಶ್ವಾದ್ಯಂತ ಬಿಡುಗಡೆಯಾಗಿ ಸೂಪರ್ ಹಿಟ್ ಕಂಡಿದೆ. ಈ ಚಿತ್ರ ದೇಶ್ಯಾದ್ಯಂತ 2,400 ಚಿತ್ರಮಂದಿರದಲ್ಲಿ ಬಿಡುಗಡೆ ಆಗಿತ್ತು. ಕೆಜಿಎಫ್ ಚಿತ್ರ ಬಾಲಿವುಡ್ ಬಾದ್‍ಶಾ ನಟಿಸಿದ ‘ಝೀರೋ’ ಚಿತ್ರವನ್ನು ಹಿಂದಿಕ್ಕಿ 200 ಕೋಟಿ ರೂ. ಕ್ಲಬ್ ಸೇರಿತ್ತು.
ಏನಿದು ಅಮೆಜಾನ್ ಪ್ರೈಂ ಮೆಂಬರ್ಸ್?
ಹಣವನ್ನು ಪಾವತಿಸಿ ಪಡೆಯುವ ಸೇವೆಯೇ ಅಮೆಜಾನ್ ಪ್ರೈಂ ಸೇವೆ. ಪ್ರೈಂ ಸದಸ್ಯರಾದರೆ ಡೆಲಿವರಿಗಾಗಿ(ಒಂದು ದಿನ, ಎರಡು ದಿನ) ಹೆಚ್ಚುವರಿ ಶುಲ್ಕವನ್ನು ಪಾವತಿಸುವ ಅಗತ್ಯವಿಲ್ಲ. ಅಷ್ಟೇ ಅಲ್ಲದೇ ಪ್ರೈಂ ವಿಡಿಯೋ, ಮ್ಯೂಸಿಕ್ ಗಳನ್ನು ಸಹ ಉಚಿತವಾಗಿ ನೋಡಬಹುದಾಗಿದೆ. ಹೊಸದಾಗಿ ರಿಲೀಸ್ ಆಗಿರುವ ಸಿನಿಮಾಗಳನ್ನು ಇದರಲ್ಲಿ ನೋಡಬಹುದು. ಈ ಸೇವೆಯನ್ನು ಮೊದಲ ಬಾರಿಗೆ 13 ವರ್ಷಗಳ ಹಿಂದೆ ಅಂದರೆ 2005ರ ಜನವರಿ 2ರಂದು ಆರಂಭಿಸಲಾಗಿತ್ತು. ಏಪ್ರಿಲ್ 2018ರ ವೇಳೆಗೆ ವಿಶ್ವದೆಲ್ಲೆಡೆ 10 ಕೋಟಿ ಪ್ರೈಂ ಸದಸ್ಯರನ್ನು ಅಮೆಜಾನ್ ಸಂಸ್ಥೆ ಹೊಂದಿದೆ. ಭಾರತದಲ್ಲಿ ಈ ಸೇವೆಯನ್ನು 2016 ಜುಲೈ ತಿಂಗಳಿನಲ್ಲಿ ಆರಂಭಿಸಿತ್ತು. ಸದ್ಯ ಈಗ ತಿಂಗಳಿಗೆ 129 ರೂ., ವರ್ಷಕ್ಕೆ 999 ರೂ. ಪಾವತಿಸಿದರೆ ಅಮೇಜಾನ್ ಪ್ರೈಂ ಮೆಂಬರ್ ಆಗಬಹುದು. ಕ್ರೆಡಿಟ್, ಡೆಬಿಟ್ ಕಾರ್ಡ್ ಮೂಲಕ ಮೆಂಬರ್ ಆದರೆ 30 ದಿನಗಳ ಕಾಲ ಉಚಿತ ಟ್ರಯಲ್ ಮೂಲಕ ಸಿನಿಮಾಗಳನ್ನು ವೀಕ್ಷಿಸಬಹುದು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv