ಬೆಂಗಳೂರು: ರಾಜಕೀಯ ರಣಾಂಗಣದಲ್ಲಿ ಇದುವರೆಗೆ ಆಣೆ-ಪ್ರಮಾಣ ರಾಜಕೀಯ ಕಾಮನ್ ಆಗಿತ್ತು. ದೇವರ ಮೇಲೆ ಆಣೆ-ಪ್ರಮಾಣ ಮಾಡೋದು ಸಹಜವಾಗಿತ್ತು. ಆದರೀಗ `ಡೆತ್ ಚಾಲೆಂಜ್’ ಶುರುವಾಗಿದೆ.
`ನಾನು ಒಕ್ಕಲಿಗ ಮಹಿಳೆಗೆ ಹೊಡೆಯಿರಿ’ ಅಂತಾ ಹೇಳಿದ್ದೇನೆ ಎನ್ನುವುದನ್ನು ಪ್ರೂವ್ ಮಾಡಿದ್ರೆ ನಾನು ನೇಣು ಹಾಕಿಕೊಳ್ಳುತ್ತೇನೆ. ಇಲ್ಲದಿದ್ರೆ ಡಿ.ಕೆ ಸುರೇಶ್ (DK Suresh) ನೇಣು ಹಾಕಿಕೊಳ್ತಾರಾ ಎಂದು ತೋಟಗಾರಿಕಾ ಸಚಿವ ಮುನಿರತ್ನ (Munirathna) ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಿ.ಕೆ ಸುರೇಶ್‌ಗೆ ಸವಾಲ್ ಎಸೆದಿದ್ದಾರೆ. ಇದನ್ನೂ ಓದಿ: ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆಯ ಮೃತದೇಹ ಪತ್ತೆ – ಕೊಲೆ ಆರೋಪ
Advertisement
Advertisement
ಮುನಿರತ್ನ ಪ್ರಚೋದನಕಾರಿ ಭಾಷಣ ಮಾಡಿರುವ ಬಗ್ಗೆ ಸಂಸದ ಡಿ.ಕೆ ಸುರೇಶ್ ವೀಡಿಯೋವೊಂದನ್ನ ರಿಲೀಸ್ ಮಾಡಿದ್ದರು. ಈ ಸಂಬಂಧ ಸಚಿವ ಮುನಿರತ್ನ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಶನಿವಾರದಿಂದ ಎಕ್ಸ್‌ಪ್ರೆಸ್‌ವೇ ಸಂಚಾರ ಮತ್ತಷ್ಟು ದುಬಾರಿ – 22% ಟೋಲ್ ದರ ಹೆಚ್ಚಳ
Advertisement
ಸಂಸದ ಡಿ.ಕೆ ಸುರೇಶ್ ನನ್ನ ಬಗ್ಗೆ ಕೆಲ ಪದಬಳಕೆ ಮಾಡಿದ್ದಾರೆ. ಅವರ ಮೇಲೆ ನನಗೆ ಬಹಳ ಗೌರವ ಇದೆ. 7 ವರ್ಷ ಅವರ ಜೊತೆಯಿದ್ದೆ. ಇದೇ ಸುರೇಶ್ ನನಗೆ 5 ಭಾಷೆಗಳಲ್ಲಿ ಮಾತನಾಡುವಂತೆ ಹೇಳುತ್ತಿದ್ದರು. ಉರ್ದು, ತಮಿಳು, ತೆಲುಗಿನಲ್ಲಿ ಮಾತನಾಡಿ ಸರ್ ವೋಟು ಬರುತ್ತೆ ಅಂತಾ ಹೇಳಿದ್ದರು. ಆದರೀಗ ಅವರೇ ಈ ರೀತಿ ಹೇಳ್ತಿರೋದು ಸರಿಯಲ್ಲ. ಇಷ್ಟು ಕೀಳುಮಟ್ಟಕ್ಕೆ ಇಳಿಯುತ್ತಾರೆ ಅಂತಾ ಅಂದುಕೊಂಡಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
Advertisement
ಒಕ್ಕಲಿಗ ಹೆಣ್ಣು ಮಗಳು ಅಂತಾ ನಾನೇನಾದರೂ ಹೇಳಿದರೆ ನಾನು ಇವತ್ತೇ ರಿಸೈನ್ ಮಾಡ್ತೀನಿ. ಕ್ರಿಶ್ಚಿಯನ್ ಮತಾಂತರ ವಿಚಾರದಲ್ಲಿ ಮಾತನಾಡುವಾಗ ಹಾಗೂ ಕೊರೊನಾ ಸಂದರ್ಭದಲ್ಲಿ ಊಟ ಕೊಡದವರನ್ನ ನಾನು ಅವತ್ತು ಹೊಡೆದೋಡಿಸಿ ಅಂದಿದ್ದೇನೆ. ಆದರೆ ಒಕ್ಕಲಿಗ ಹೆಣ್ಣು ಮಗಳು ಅಂತಾ ಪದಪ್ರಯೋಗ ಮಾಡಿದ್ರೇ ನೇಣುಗಂಬ ಏರೋಕೆ ರೆಡಿ ಇದ್ದೀನಿ. ನಾನು ಹಾಗೇ ಹೇಳಿದ್ರೆ ಭೂಮಿ ಮೇಲೆ ಇರಲ್ಲ. ಡೆತ್ ನೋಟ್ ಬರೆದು ನೇಣು ಹಾಕಿಕೊಳ್ಳುವೆ. ಇಲ್ಲದೇ ಇದ್ರೆ ಡಿಕೆ ಸುರೇಶ್ ನೀವು ನೇಣು ಹಾಕಿಕೊಳ್ತೀರಾ ಎಂದು ಸವಾಲ್ ಹಾಕಿದ್ದಾರೆ.
ಡಿ.ಕೆ ಸುರೇಶ್ ವಿರುದ್ಧ ಫೋಟೋ ರಿಲೀಸ್ ಮಾಡಿದ ಮುನಿರತ್ನ, ಬಿಜೆಪಿ ಸ್ಥಳೀಯ ನಾಯಕಿ ಸುನಂದಾ ಬೋರೇಗೌಡ ಅವರು ಇಲ್ಲಿನ ಜೆ.ಪಿ ಪಾರ್ಕ್ ಭಾಗದಲ್ಲಿ ಪ್ಲಾಸ್ಟಿಕ್ ಲೋಟ ಹಂಚುತ್ತಿದ್ದರು. ಈ ವೇಳೆ ಮುಸ್ಲಿಂ ಮಹಿಳೆಯೊಬ್ಬಳು ಸುನಂದಾಗೆ ಹಲ್ಲೆ ಮಾಡೋಕೆ ಮುಂದಾಗಿದ್ರು. ಈ ಘಟನೆ ನಂತರ ಮುಸ್ಲಿಂ ಮಹಿಳೆ (Muslim Women) ಮನೆಗೆ ಹೋಗಿ ಡಿ.ಕೆ ಸುರೇಶ್ ಸನ್ಮಾನ ಮಾಡಿ 50 ಸಾವಿರ ಕೊಟ್ಟಿದ್ದರು. ಇದು ಒಕ್ಕಲಿಗ ಮಹಿಳೆಗೆ ಮಾಡಿದ ಅವಮಾನ ಅಲ್ವೇ ಎಂದು ಪ್ರಶ್ನಿಸಿದ್ದಾರೆ.
ಈ ಹಿಂದೆ ನನ್ನ ಕೈಯಲ್ಲಿ ಬೇರೆ ಭಾಷೆಯಲ್ಲಿ ಮಾತಾನಾಡಿಸುವಂತೆ ಹೇಳಿದ್ದು ಯಾರು? ಬೇರೆ ಭಾಷೆಯಲ್ಲಿ ಮಾತಾನಾಡಿದ ತಕ್ಷಣ ನನ್ನ ಮಾತೃಭಾಷೆ ನಾನು ಮಾತಾನಾಡುವ ಭಾಷೆ ಕನ್ನಡ ಬದಲಾಗುತ್ತದೆಯೇ? ಸಂಸದರಿಗೆ ಸಣ್ಣ ವಿಚಾರದಲ್ಲಿ ರಾಜಕೀಯ ಮಾಡೋದು ಶೋಭೆ ತರಲ್ಲ. ಯಾಕೆ ಜಾತಿ ತಂದು ಅಡ್ಡ ಇಡುತ್ತೀರಾ? ಬೆಂಗಳೂರು ಶಾಂತಿಯಿಂದಿದೆ. ನಿಮ್ಮ ವಕ್ರದೃಷ್ಟಿ ಬೆಂಗಳೂರು ಮೇಲೆ ಬೀಳೋದು ಬೇಡ. ಬೆಂಗಳೂರನ್ನು ಹಾಳು ಮಾಡಬೇಡಿ ಎಂದು ಮನವಿ ಮಾಡಿದರು.
ಬೇರೆ ಭಾಷೆಯಲ್ಲಿ ಮಾತಾನಾಡೋದು ತಪ್ಪು ಅನ್ನೋದಾದ್ರೆ, ನನ್ನನ್ನು ಮಾತಾನಾಡುವಂತೆ ಹೇಳಿರೋದು ಯಾರು? ರಜನಿಕಾಂತ್ ಕನ್ನಡದಿಂದ ಹೋಗಿ ಸೂಪರ್ ಸ್ಟಾರ್ ಆಗಿ ಬೆಳೆದಿಲ್ವಾ? ನನ್ನ ಉಸಿರು ನನ್ನ ಮಾತೃಭಾಷೆ ಕನ್ನಡ, ಈ ಕೀಳು ರಾಜಕೀಯ ಬೇಡ ಎಂದರು.
ಬೆಂಗಳೂರು ದಕ್ಷಿಣ, ಆನೇಕಲ್, ರಾಮನಗರ, ಚನ್ನಪಟ್ಟಣ, ಮಾಗಡಿ ಎಲ್ಲೂ ನೀವು ಗೆಲ್ಲೋದಕ್ಕಾಗಲ್ಲ. ಆದರೂ ಆರ್‌ಆರ್ ನಗರದ ಮೇಲೆ ಮಾತ್ರ ಯಾಕೆ ಗಮನ? ಅವರ ಅಣ್ಣ ಪಾಪ ಗಡ್ಡ ತೆಗೆಯುತ್ತಿಲ್ಲ. ಯಾಕೆಂದ್ರೆ ಅವ್ರಿಗೆ ಸಿಎಂ ಆಗಬೇಕು ಅನ್ನೋ ಆಸೆ. ಅದರ ಬಗ್ಗೆ ಇವರಿಗೆ ಯೋಚನೆಯಿಲ್ಲ. ಡಿ.ಕೆ ಸುರೇಶ್ ಅವರಣ್ಣ ಗಡ್ಡ ಶೇವಿಂಗ್ ಮಾಡದೇ ಎಲ್ಲಾ ಕಡೆ ಓಡಾಡ್ತಾ ಇದ್ದಾರೆ. ಆದ್ರೆ ಇವರಿಗೆ ಬರೀ ಆರ್.ಆರ್ ನಗರದ್ದೇ ಚಿಂತೆಯಾಗಿದೆ. ಮೊದಲು ಡಿಕೆಶಿ (DK Shivakumar) ಶೇವಿಂಗ್ ಬಗ್ಗೆ ಗಮನ ಕೊಡಲಿ ಎಂದು ತಿರುಗೇಟು ನೀಡಿದ್ದಾರೆ.