ಬೆಂಗಳೂರು: ಸಿಎಂ ಸ್ಥಾನದಲ್ಲಿ ತಾವೇ ಮುಂದುವರೆಯಲು ಸಿದ್ದರಾಮಯ್ಯ ಸ್ಟ್ರಾಟಜಿ ಮಾಡ್ತಿದ್ದಾರೆ, ಡಿಕೆಶಿ ಒಬ್ಬಂಟಿಗರಾಗಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ (R.Ashok) ಕುಟುಕಿದ್ದಾರೆ.
ಬೆಂಗಳೂರಿನಲ್ಲಿ ಮಾತಾಡಿದ ಅಶೋಕ್, ಕಾಂಗ್ರೆಸ್‌ನಲ್ಲಿ ಆಗಿರುವ ಎರಡೂವರೆ ವರ್ಷದ ಅಧಿಕಾರ ಹಸ್ತಾಂತರಕ್ಕೆ ಸಿದ್ದರಾಮಯ್ಯ ಮನಸು ಮಾಡ್ತಿಲ್ಲ. ತಾವೇ ಮುಂದುವರೆಯಲು ಸ್ಟ್ರಾಟಜಿ ಮಾಡಿದ್ದಾರೆ. ಅದಕ್ಕಾಗಿ ಆಪ್ತರನ್ನು ಛೂ ಬಿಟ್ಟಿದ್ದಾರೆ. ಪರಮೇಶ್ವರ್, ಜಾರಕಿಹೊಳಿ, ರಾಜಣ್ಣ, ಮಹಾದೇವಪ್ಪ ಎಲ್ಲರೂ ಫೀಲ್ಡಿಗಿಳಿದು ಸಿದ್ದರಾಮಯ್ಯ ಪರ ಬ್ಯಾಟಿಂಗ್ ಮಾಡ್ತಿದ್ದಾರೆ.
ಡಿಕೆಶಿ ಒಬ್ಬಂಟಿ, ಈಗ ಅವರ ಪರ ಯಾರೂ ಇಲ್ಲ. ಹೀಗಾಗಿ ಹೈಕಮಾಂಡ್ ಪಾದವೇ ಗತಿ ಅಂತ ಡಿಕೆಶಿ ಕೂತಿದ್ದಾರೆ ಅಂತ ಅಶೋಕ್ ಕಾಲೆಳೆದಿದ್ದಾರೆ.
ಈ ಕಾಂಗ್ರೆಸ್ ಸರ್ಕಾರ ಬೀಳೋದು ಬೆಳಗಾವಿಯಿಂದಲೇ. ಒಂದು ಕಡೆ ಸತೀಶ್ ಜಾರಕಿಹೊಳಿ ವರ್ಸಸ್ ಲಕ್ಷ್ಮಿ ಹೆಬ್ಬಾಳ್ಕರ್. ಇನ್ನೊಂದು ಕಡೆ ಸತೀಶ್ ವರ್ಸಸ್ ಡಿಕೆಶಿ. ಎಲ್ಲಕ್ಕೂ ಸಿದ್ದರಾಮಯ್ಯ ಸೂತ್ರಧಾರಿ. ಸಿದ್ದರಾಮಯ್ಯ ಯಾವ ರೀತಿ ಸಿಎಂ ಸ್ಥಾನ ಬಿಡ್ತಿಲ್ವೋ, ಹಾಗೆ ಡಿಕೆಶಿ ಅಧ್ಯಕ್ಷ ಸ್ಥಾನ ಬಿಡ್ತಿಲ್ಲ. ಕಾಂಗ್ರೆಸ್ ಸಚಿವರು ಆಡಳಿತ ಮರೆತು ದೆಹಲಿ ಪ್ರವಾಸ ಮಾಡ್ತಿದ್ದಾರೆ. ಮುಂದಿನ ದಿನಗಳಲ್ಲಿ ದೆಹಲಿಗೆ ಹೋಗುವವರ ಸಂಖ್ಯೆ ಇನ್ನೂ ಹೆಚ್ಚಾಗುತ್ತೆ ಎಂದು ತಿಳಿಸಿದ್ದಾರೆ.