ತಿರುವನಂತಪುರಂ: ‘ಸೈಬರ್ ಸುರಕ್ಷತೆ’ ಈಗ ಕೇರಳದ ಶಾಲಾ ಪಠ್ಯಕ್ರಮದ ಒಂದು ಭಾಗವಾಗಿದೆ.
ರಾಜ್ಯದ ಪ್ರೌಢಶಾಲೆಗಳಲ್ಲಿ ‘ಲಿಟಲ್ ಕೈಟ್ಸ್’ ಘಟಕಗಳ ಮೂಲಕ ಮೂರು ಲಕ್ಷ ತಾಯಂದಿರಿಗೆ ಸೈಬರ್ ಸುರಕ್ಷತೆ ತರಬೇತಿ ನೀಡಬೇಕೆಂದು ಸರ್ಕಾರ ನಿರ್ಧರಿಸಿದೆ. ಈ ತರಬೇತಿ ಕೇಂದ್ರವನ್ನು ರಾಜ್ಯ ಶಿಕ್ಷಣ ಸಚಿವ ವಿ.ಶಿವನ್ ಕುಟ್ಟಿ ಉದ್ಘಾಟಿಸಿದರು. ಇದನ್ನೂ ಓದಿ: ಕಾಂಗ್ರೆಸ್ ತೊರೆದ ಪ್ರಮೋದ್ ಮಧ್ವರಾಜ್ ಬಿಜೆಪಿ ಸೇರ್ಪಡೆ
Advertisement
Advertisement
ಈ ವೇಳೆ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಕಾರ್ಯಕ್ರಮದ ಭಾಗವಾಗಿ ಎರಡು ಲಕ್ಷ ತಾಯಂದಿರಿಗೆ ‘ಸೈಬರ್ ಸುರಕ್ಷತೆ’ ಬಗ್ಗೆ ತರಬೇತಿ ನೀಡಬೇಕು ಎಂಬ ಯೋಜನೆ ಇತ್ತು. ಆದರೆ ನಂತರ ಅದನ್ನು 3 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಶೈಕ್ಷಣಿಕ ಮತ್ತು ಆಡಳಿತಾತ್ಮಕ ಕ್ಷೇತ್ರಗಳಲ್ಲಿ ‘ಸೈಬರ್ ಸುರಕ್ಷತೆ’ ಬಗ್ಗೆ ತಿಳಿದುಕೊಳ್ಳುವುದು ತುಂಬಾ ಮುಖ್ಯ ಎಂದು ತಿಳಿಸಿದರು.
Advertisement
ಕಾರ್ಯಕ್ರಮಕ್ಕೆ ಅಪಾರ ಮೆಚ್ಚುಗೆ ಮತ್ತು ಪ್ರತಿಕ್ರಿಯೆಯನ್ನು ನೋಡಿದ ಅವರು, ವಿದ್ಯಾರ್ಥಿಗಳು ಮತ್ತು ತಾಯಂದಿರು ಸೇರಿದಂತೆ 10 ಲಕ್ಷ ಫಲಾನುಭವಿಗಳಿಗೆ ಸೈಬರ್ ಸುರಕ್ಷತೆ ತರಬೇತಿಯನ್ನು ನೀಡಲಾಗುವುದು ಎಂದು ಘೋಷಿಸಿದರು.
Advertisement
ತರಬೇತಿಯ ವಿಷಯಗಳು ಸ್ಮಾರ್ಟ್‍ಫೋನ್‍ಗಳು, ಇಂಟರ್ನೆಟ್ ಮತ್ತು ಅದರ ಸುರಕ್ಷಿತ ಬಳಕೆಯನ್ನು ಒಳಗೊಂಡಿರುತ್ತದೆ. ಇದರಲ್ಲಿ ಹೊಸ ತಂತ್ರಜ್ಞಾನಗಳ ಪರಿಚಯ, ಒಟಿಪಿಗಳು ಮತ್ತು ಪಿನ್‍ಗಳಂತಹ ಪಾಸ್‍ವರ್ಡ್‍ಗಳ ಸುರಕ್ಷತೆ, ನಕಲಿ ಸುದ್ದಿಗಳನ್ನು ಗುರುತಿಸುವುದು ಮತ್ತು ತಡೆಗಟ್ಟುವುದು, ಸೈಬರ್ ದಾಳಿಗಳು ಮತ್ತು ಆನ್‍ಲೈನ್ ವಹಿವಾಟುಗಳನ್ನು ಕೈಗೊಳ್ಳುವಾಗ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ತರಗತಿಯನ್ನು ಮಾಡಲಾಗುವುದು ಎಂದು ತಿಳಿಸಿದರು. ಇದನ್ನೂ ಓದಿ: ಮಾನಸಿಕ ಖಿನ್ನತೆಗೆ ಒಳಗಾಗಿ MBBS ವಿದ್ಯಾರ್ಥಿ ಆತ್ಮಹತ್ಯೆ
ರಾಜ್ಯಾದ್ಯಂತ 2,000 ಪ್ರೌಢಶಾಲೆಗಳಲ್ಲಿ ‘ಲಿಟಲ್ ಕೈಟ್ಸ್’ ಘಟಕಗಳನ್ನು ತೆಗೆಯಬೇಕು. ಈ ಮೂಲಕ 30 ಜನರಿಗೆ, 5 ಸೆಷನ್‍ನಲ್ಲಿ ಮೂರು ಗಂಟೆಗಳ ಕ್ಲಾಸ್ ತೆಗೆದುಕೊಳ್ಳಬೇಕು ಎಂದು ವಿವರಿಸಿದರು.