ಇತ್ತೀಚಿನ ದಿನಗಳಲ್ಲಿ ಭಾರತೀಯ ವಿದ್ಯಾರ್ಥಿಗಳ ವೀಸಾ (Student Visa) ನಿರಾಕರಣೆಯ ದರ ಹೆಚ್ಚಾಗುತ್ತದೆ. ಈ ಮೊದಲು ಅಮೆರಿಕ ಸರ್ಕಾರ (America Government) ಭಾರತಕ್ಕೆ (India) ನೀಡುತ್ತಿದ್ದ ವೀಸಾ ಸಂಖ್ಯೆಗಳಲ್ಲಿ ಗಣನೀಯವಾಗಿ ಕಡಿತಗೊಳಿಸಿತ್ತು. ಆದರೆ ಇದೀಗ ಆಸ್ಟ್ರೇಲಿಯಾದ (Australia) ಕೆಲವು ವಿಶ್ವವಿದ್ಯಾಲಯಗಳು ಭಾರತೀಯ ವಿದ್ಯಾರ್ಥಿಗಳ ವೀಸಾ ಕಡಿತಗೊಳಿಸುವಲ್ಲಿ ಮುಂದಾಗಿದ್ದಾರೆ.
ಹೌದು, ಆಸ್ಟ್ರೇಲಿಯಾದ ಕೆಲವು ಪ್ರಮುಖ ವಿಶ್ವವಿದ್ಯಾಲಯಗಳು ಭಾರತದ ಆರು ರಾಜ್ಯಗಳು ಹಾಗೂ ಒಂದು ಕೇಂದ್ರಾಡಳಿತ ಪ್ರದೇಶದ ವಿದ್ಯಾರ್ಥಿಗಳ ವೀಸಾ ಅರ್ಜಿಯನ್ನು ತಾತ್ಕಾಲಿಕವಾಗಿ ನಿಲ್ಲಿಸಿದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ವಂಚನೆಯ ಪ್ರಕರಣಗಳು ಹಾಗೂ ಉದ್ದೇಶರಹಿತ ಅರ್ಜಿದಾರರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ ಆಸ್ಟ್ರೇಲಿಯಾ ವಿಶ್ವವಿದ್ಯಾಲಯಗಳು ಈ ನಿರ್ಧಾರವನ್ನು ಕೈಗೊಂಡಿದೆ.
ಭಾರತದ ರಾಜ್ಯಗಳು ಯಾವುವು?
ಪಂಜಾಬ್
ಹರಿಯಾಣ
ಉತ್ತರ ಪ್ರದೇಶ
ರಾಜಸ್ಥಾನ
ಉತ್ತರಾಖಂಡ
ಜಮ್ಮು ಮತ್ತು ಕಾಶ್ಮೀರ
ಭಾರತೀಯ ವಿದ್ಯಾರ್ಥಿಗಳ ವೀಸಾ ಅರ್ಜಿಗಳನ್ನು ನಿರಾಕರಿಸಲು ಮುಂದಾಗಿರುವ ಆಸ್ಟ್ರೇಲಿಯಾದ ವಿಶ್ವವಿದ್ಯಾಲಯಗಳಾದ ವಿಕ್ಟೋರಿಯಾದ ಫೆಡರೇಶನ್ ವಿಶ್ವವಿದ್ಯಾಲಯ, ನ್ಯೂ ಸೌತ್ ವೆಲ್ಸ್ ನ ವೆಸ್ಟರ್ನ್ ಸಿಗ್ನಿ ವಿಶ್ವವಿದ್ಯಾಲಯ, ವಿಕ್ಟೋರಿಯಾ ವಿಶ್ವವಿದ್ಯಾಲಯ, ಎಡಿತ್ ಕೋವನ್ ವಿಶ್ವವಿದ್ಯಾಲಯ, ಟಾರೆನ್ಸ್ ವಿಶ್ವವಿದ್ಯಾಲಯ ಮತ್ತು ಸೌದರ್ನ್ ಕ್ರಾಸ್ ವಿಶ್ವವಿದ್ಯಾಲಯ ಸೇರಿ ಇನ್ನಿತರ ವಿಶ್ವವಿದ್ಯಾಲಯಗಳು ಈ ನಿರ್ಧಾರ ಕೈಗೊಂಡಿವೆ.
ವೀಸಾ ನಿರಾಕರಣೆಗೆ ಕಾರಣ:
ಇತ್ತೀಚಿನ ದಿನಗಳಲ್ಲಿ ವೀಸಾ ಅರ್ಜಿಗಳಲ್ಲಿ ಸಲ್ಲಿಸುವವರ ಪೈಕಿ ಹೆಚ್ಚಾಗಿ ವಿದ್ಯಾರ್ಥಿ ವೀಸಾಗಳ ದುರುಪಯೋಗ ಮತ್ತು ಆಸ್ಟ್ರೇಲಿಯಾ ಅಂತರಾಷ್ಟ್ರೀಯ ಶಿಕ್ಷಣ ವ್ಯವಸ್ಥೆಯ ದುರುಪಯೋಗ ಸೇರಿ ಗಂಭೀರ ಆರೋಪಗಳು ಕೇಳಿ ಬಂದಿರುವ ಹಿನ್ನೆಲೆ ಈ ನಿರ್ಧಾರ ಕೈಗೊಂಡಿದೆ.
ಸದ್ಯ ಆಸ್ಟ್ರೇಲಿಯಾದಲ್ಲಿ 1,25, 000ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಈ ಪೈಕಿ ಆಸ್ಟ್ರೇಲಿಯಾದಲ್ಲಿ ಎರಡನೇ ಅತಿ ದೊಡ್ಡ ವಿದ್ಯಾರ್ಥಿಗಳ ಸಂವಹ ಹೊಂದಿರುವ ದೇಶ ಅದು ಭಾರತ. ಹೀಗಾಗಿ ಆಸ್ಟ್ರೇಲಿಯಾ ಸರ್ಕಾರ ಕೆಲವು ಮಾನದಂಡಗಳಿಗೆ ಅನುಗುಣವಾಗಿ ಭಾರತೀಯ ವಿದ್ಯಾರ್ಥಿಗಳ ವೀಸಾ ಅರ್ಜಿಗಳ ಪ್ರಕ್ರಿಯೆಯನ್ನು ಮುಂದುವರಿಸುತ್ತಿದೆ. ಆದರೆ ಇದರ ಜೊತೆಗೆ ಆಸ್ಟ್ರೇಲಿಯಾ ವ್ಯವಹಾರಗಳ ಇಲಾಖೆ ಹಂಚಿಕೊಂಡ ಅಂಕಿ ಅಂಶಗಳ ಮಾಹಿತಿ ಪ್ರಕಾರ, ಭಾರತದಿಂದ ಬರುವ ವಿದ್ಯಾರ್ಥಿಗಳ ವೀಸಾ ಅರ್ಜಿಗಳಲ್ಲಿ ಸರಿಸುಮಾರು ಶೇ 24.3ರಷ್ಟು ವಂಚನೆಯ ಅರ್ಜಿಗಳಾಗಿದೆ ಎಂದು ತಿಳಿಸಿದೆ.
ನಕಲಿ ಶೈಕ್ಷಣಿಕ ದಾಖಲೆಗಳು, ಸುಳ್ಳು ಹಣಕಾಸಿನ ದಾಖಲೆಗಳು, ಅಧ್ಯಯನ ಮಾಡುವುದಾಗಿ ತಿಳಿಸಿ ಶಾಶ್ವತವಲಸೆಗಾಗಿ ಶಿಕ್ಷಣ ವೀಸಾಗಳನ್ನು ದುರ್ಬಳಕೆ ಮಾಡುತ್ತಿರುವುದು ಕೆಲವು ವಿಶ್ವವಿದ್ಯಾಲಯಗಳು ಗುರುತು ಪಡಿಸಿದೆ.
ಇನ್ನು ಕೆಲವು ವಿದ್ಯಾರ್ಥಿಗಳು ಅಧ್ಯಯನಕ್ಕಾಗಿ ಬಂದು ಸ್ವಲ್ಪ ಸಮಯದ ನಂತರ ಬೇರೆ ಕೋರ್ಸ್ ಹಾಗೂ ಬೇರೆ ವಿಶ್ವವಿದ್ಯಾಲಯಗಳಿಗೆ ಬದಲಾಗುತ್ತಾರೆ. ಜೊತೆಗೆ ಶೈಕ್ಷಣಿಕ ವಿಷಯಗಳಿಗಿಂತ ಹೆಚ್ಚಾಗಿ ಇನ್ನಿತರ ಹೊರಗಿನ ವ್ಯವಹಾರಗಳಿಗೆ ಆದ್ಯತೆ ನೀಡುತ್ತಾರೆ. ಹೀಗಾಗಿ ಪಂಜಾಬ್, ಹರಿಯಾಣ, ಜಮ್ಮು ಮತ್ತು ಕಾಶ್ಮೀರ, ಉತ್ತರ ಪ್ರದೇಶ ಮತ್ತು ಉತ್ತರಾಖಂಡಗಳಿಂದ ವಿದ್ಯಾರ್ಥಿಗಳ ನೇಮಕವನ್ನು ನಿಲ್ಲಿಸುವಂತೆ ಫೆಡರೇಶನ್ ವಿಶ್ವವಿದ್ಯಾಲಯ ತಿಳಿಸಿದೆ. ಅದೇ ರೀತಿ ಪಂಜಾಬ್ ಹರಿಯಾಣ ಮತ್ತು ಗುಜರಾತ್ ನಿಂದ ವಿದ್ಯಾರ್ಥಿಗಳ ನೇಮಕಾತಿಯನ್ನು ನಿಲ್ಲಿಸುವಂತೆ ವೆಸ್ಟರ್ನ್ ಸೌತ್ ವಿಶ್ವವಿದ್ಯಾಲಯ ನಿರ್ದೇಶಿಸಿದೆ. ಇದೇ ರೀತಿ ಇನ್ನಿತರ ವಿಶ್ವವಿದ್ಯಾಲಯಗಳು ಕೂಡ ಆರೋಪಿಸಿದ್ದು, ವಿದ್ಯಾರ್ಥಿಗಳ ನೇಮಕವನ್ನು ನಿಲ್ಲಿಸುವಂತೆ ತಿಳಿಸಿದೆ.
ಈ ವಿಶ್ವವಿದ್ಯಾಲಯಗಳು ನಿರ್ದಿಷ್ಟ ರಾಜ್ಯಗಳ ವಿದ್ಯಾರ್ಥಿ ವೀಸಾ ಅರ್ಜಿಯನ್ನು ತಾತ್ಕಾಲಿಕವಾಗಿ ನಿಲ್ಲಿಸಿದ್ದು, ವೀಸಾ ಪರಿಶೀಲನೆಯ ಕ್ರಮಗಳನ್ನು ಹೆಚ್ಚಿಸಿದೆ.