ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಾಲಿಗೆ ನವೆಂಬರ್ ಡೆಡ್‌ಲೈನ್ ಅಂತ ವಿಪಕ್ಷ ನಾಯಕ ಆರ್.ಅಶೋಕ್ ಸಿಡಿಸಿದ ಬಾಂಬ್ ಈಗ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಕಾಂಗ್ರೆಸ್ ಸಚಿವರು ಕಿಡಿಕಾರಿದ್ರೆ, ನೋಡ್ತಾ ಇರಿ ಅಂತಾ ಬಿಜೆಪಿ ರಾಜಕೀಯ ಮೇಲಾಟ ಶುರು ಮಾಡಿದೆ. ಈ ನಡುವೆ ಸಚಿವ ಜಿ. ಪರಮೇಶ್ವರ್ ಆಪ್ತರ ಟೀಂ ದೆಹಲಿ ಪ್ರವಾಸಕ್ಕೆ ಸಜ್ಜಾಗ್ತಿದೆ.
ಕಾಂಗ್ರೆಸ್ ನಲ್ಲಿ ಮೊದಲೇ ಪವರ್ ಶೇರಿಂಗ್ ಫೈಟ್ ಜೋರಾಗಿದೆ. ಹೈಕಮಾಂಡ್ ಸೂಚನೆ ಬೆನ್ನಲ್ಲೇ ಎಲ್ಲವೂ ಮೇಲ್ನೋಟಕ್ಕೆ ತಣ್ಣಗಾದಂತಿದೆ. ಆದರೆ ಈಗ ಅಶೋಕ್, ಸಿದ್ದರಾಮಯ್ಯ ಸಿಎಂ ಸ್ಥಾನದ ಅವಧಿ ನವೆಂಬರ್ ವರೆಗೆ ಮಾತ್ರ ಎಂದು ಬಾಂಬ್ ಹಾಕಿದ್ದಾರೆ. ಇದನ್ನೂ ಓದಿ: ಸಿಎಂ ಬದಲಾವಣೆ| ಭವಿಷ್ಯ ಹೇಳೋದನ್ನ ಯಾವಾಗ ಕಲಿತ್ರೋ ಗೊತ್ತಿಲ್ಲ: ಅಶೋಕ್‌ಗೆ ಪರಮೇಶ್ವರ್ ಟಾಂಗ್
Advertisement
Advertisement
ಸಿದ್ದರಾಮಯ್ಯ ಸಿಎಂ ಆಗುವಾಗಲೇ ಅವರ ಅಧಿಕಾರ ಅವದಿ 2.5 ವರ್ಷ ನಿಗದಿ ಆಗಿದೆ ಎನ್ನಲಾಗಿತ್ತು. ನವೆಂಬರ್‌ಗೆ ಸಿದ್ದರಾಮಯ್ಯ ಸಿಎಂ ಅವಧಿ ಖಚಿತವಾಗಿ ಮುಗಿಯಲಿದೆ ಎಂಬ ಅಶೋಕ್ ಹೇಳಿಕೆ ಈಗ ಹೊಸ ಚರ್ಚೆ ಹುಟ್ಟು ಹಾಕಿದೆ. ಇನ್ನೂ ಹೈಕಮಾಂಡ್ ದೆಹಲಿ ಬುಲಾವ್‌ಗೆ ಮೊದಲೇ ಪರಮೇಶ್ವರ್ ಆಪ್ತ ಸಚಿವರ ದೆಹಲಿ ಚಲೋ ಕೈಗೊಳ್ಳಲು ಮುಂದಾಗಿದ್ದಾರೆ. ಫೆಬ್ರವರಿ 10ರ ಒಳಗೆ ದೆಹಲಿ ತೆರಳಿ ಹೈಕಮಾಂಡ್ ಭೇಟಿಗೆ ನಾಲ್ವರು ಸಚಿವರು ಮುಂದಾಗಿದ್ದಾರೆ.
Advertisement
ದಲಿತ ನಾಯಕರ ಸಭೆಗೆ ಬ್ರೇಕ್ ಹಾಕಿದ್ದನ್ನೇ ಮುಂದಿಟ್ಟುಕೊಂಡು ಹೈಕಮಾಂಡ್ ಭೇಟಿ ಮಾಡ್ತಿದ್ದಾರೆ. ಈ ಭೇಟಿ ಸಂದರ್ಭದಲ್ಲಿ ಪವರ್ ಶೇರಿಂಗ್ ಫೈಟ್, ಪವರ್ ಸೆಂಟರ್ ಪಾಲಿಟಿಕ್ಸ್ ಎಲ್ಲ ವಿಚಾರ ಹೈಕಮಾಂಡ್ ಮುಂದಿಡುವ ಲೆಕ್ಕಾಚಾರ ಇದೆ ಎನ್ನಲಾಗಿದೆ. ಆದ್ರೆ ಆರ್.ಅಶೋಕ್ ಹೇಳಿಕೆಗೆ ಕಾಂಗ್ರೆಸ್ ಸಚಿವರಾದ ಪರಮೇಶ್ವರ್, ಬೋಸರಾಜು ವಾಗ್ದಾಳಿ ನಡೆಸಿದ್ದಾರೆ.
Advertisement
ಈ ನಡುವೆ ಸಿಎಂ ರಾಜಕೀಯ ಸಲಹೆಗಾರ ಹುದ್ದೆಗೆ ಬಿ.ಆರ್ ಪಾಟೀಲ್ ರಾಜೀನಾಮೆ ವಿಚಾರ ಕಾಂಗ್ರೆಸ್ ನಲ್ಲಿ ಸಾಕಷ್ಟು ಸದ್ದು ಮಾಡ್ತಿದೆ.
ರಾಜಕೀಯ ಸಲಹೆಗಾರ ಹುದ್ದೆಗೆ ರಾಜೀನಾಮೆ ಬಳಿಕ ಇವತ್ತು ಬಿ.ಆರ್ ಪಾಟೀಲ್ ಮೊದಲ ಪ್ರತಿಕ್ರಿಯೆ ನೀಡಿದ್ದು, ನಾನು ಯಾವತ್ತೋ ರಾಜೀನಾಮೆ ಕೊಡಬೇಕು ಅಂತಾ ಇದ್ದೆ. ರಾಜ್ಯಪಾಲರ ತೂಗು ಕತ್ತಿ ಮೇಲಿತ್ತು. ಹಾಗಾಗಿ ರಾಜಿನಾಮೆ ನೀಡಿದೆ. ಆದ್ರೆ ರಾಜೀನಾಮೆ ವಾಪಸ್ ಪಡೆಯಲ್ಲ ಅನುದಾನ ಕೂಡ ಸರಿಯಾಗಿ ಬರ್ತಿಲ್ಲ, ಶಾಸಕನಾಗಿ ಅಭಿವೃದ್ಧಿ ಕೆಲಸ ಮಾಡೋಕೆ ಆಗ್ತಿಲ್ಲ, ಸಿಎಂ ಜೊತೆ ಮಾತಾಡ್ತೀನಿ ಅಂತ ಹೇಳಿದ್ದಾರೆ.
ಕಲಬುರಗಿ ಜಿಲ್ಲಾ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿ, ಬಿ.ಆರ್ ಪಾಟೀಲ್ ಸಂಪರ್ಕಕ್ಕೆ ಸಿಗಲಿಲ್ಲ, ಸಿಎಂ ಮತ್ತು ಬಿ.ಆರ್ ಪಾಟೀಲ್ ಚೆನ್ನಾಗಿದ್ದಾರೆ. ಅವರೇ ಮಾತಾಡ್ತಾರೆ ಅಂತೇಳಿದ್ರು. ಇದನ್ನೂ ಓದಿ: ಬಿಹಾರ ಬಜೆಟ್ ಕನ್ನಡಿಗರಿಗೆ ಅನ್ಯಾಯ ಮಾಡಿದೆ: ಪ್ರಿಯಾಂಕ್ ಖರ್ಗೆ
ಒಟ್ಟಿನಲ್ಲಿ ಪವರ್ ಶೇರ್ ವಾರ್ ಬೂದಿ ಮುಚ್ಚಿದ ಕೆಂಡದಂತೆ ಇರುವಾಗಲೇ ಅಶೋಕ್ ಬಾಂಬ್ ನಾನಾ ಲೆಕ್ಕಾಚಾರಗಳಿಗೆ ಕಾರಣವಾಗಿದ್ದು, ಅಡ್ಡೇಟಿನ ಮೇಲೆ ಗುಡ್ಡೇಟಿನ ಹೇಳಿಕೆಯೋ? ನಿಜಕ್ಕೂ ನವೆಂಬರ್ ಡೆಡ್ ಲೈನೋ? ಎಂಬುದಕ್ಕೆ ಕಾಲವೇ ಉತ್ತರಿಸಬೇಕಿದೆ.