– ಎರಡು ದಿನಗಳಲ್ಲಿ ಕಾರ್ಡ್ ಸಮಸ್ಯೆ ಬಗೆಹರಿಸಲು ಸೂಚನೆ
ಬೆಂಗಳೂರು: ಬಿಪಿಎಲ್ ಕಾರ್ಡ್ (BPL Card) ಸಮಸ್ಯೆ ಪರಿಹರಿಸಲು ನವೆಂಬರ್ 25ರ ವರೆಗೆ ಗಡುವು ನೀಡಲಾಗಿದೆ. ನಿಗದಿತ ಅವಧಿಯೊಳಗೆ ರದ್ದಾದ ಬಿಪಿಎಲ್ ಕಾರ್ಡ್‌ಗಳನ್ನ ಮೂಲ ಸ್ಥಾನಕ್ಕೆ ತರಲು ಆಹಾರ ಸಚಿವರು ಸೂಚಿಸಿದ್ದಾರೆ. ಆದ್ರೆ 6 ದಿನಗಳಲ್ಲಿ ರದ್ದಾದ ಬಿಪಿಎಲ್ ಕಾರ್ಡ್‌ಗಳನ್ನ ಮೂಲ ಸ್ಥಾನಕ್ಕೆ ತರುವುದು ಕಷ್ಟ ಕಷ್ಟ ಅಂತಿದ್ದಾರೆ.
Advertisement
ಬಿಪಿಎಲ್ ಕಾರ್ಡ್‌ಗಳ ಪರಿಷ್ಕರಣೆಗೆ ತಾತ್ಕಾಲಿಕವಾಗಿ ಸ್ಥಗಿತವಾಗಿದೆ. ಅರ್ಹರಿದ್ದರೂ ಕಾರ್ಡ್ ರದ್ದಾಗಿ ಸಮಸ್ಯೆ ಆಗಿರೋದ್ರಿಂದ ಸಮಸ್ಯೆ ಆಗಿರುವ ಕಾರ್ಡ್‌ಗಳನ್ನ ಸರಿಪಡಿಸಿ ಮೂಲ ಸ್ಥಾನಕ್ಕೆ ತರಲು ಆಹಾರ ಸಚಿವ ಮುನಿಯಪ್ಪ (KH Muniyappa) ಗಡುವು ನೀಡಿದ್ದಾರೆ. ನವೆಂಬರ್ 25ರ ಒಳಗಡೆ ಸಮಸ್ಯೆ ಬಗೆಹರಿಸಿ ಅಕ್ಕಿ ವಿತರಣೆ ಮಾಡೋದಕ್ಕೆ ಸೂಚಿಸಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಎನ್‌ಡಿಎ ‘ಮಹಾ’ ಸುನಾಮಿ- ಕಾಂಗ್ರೆಸ್ ‘ಆಘಾಡಿ’ ಕೂಟ ಛಿದ್ರ ಛಿದ್ರ – ಯಾರಿಗೆ ಎಷ್ಟು ಸ್ಥಾನ?
Advertisement
ಅಧಿಕಾರಿಗಳು ಇದು ಕಷ್ಟ ಎಂದು ಹೇಳುತ್ತಿದ್ದಾರೆ. ಬಿಪಿಎಲ್‌ನಿಂಎ ಎಪಿಎಲ್‌ಗೆ ಬದಲಾವಣೆ ಆಗಿರುವ ಕಾರ್ಡ್‌ಗಳನ್ನ ಮತ್ತೆ ಬದಲಾಯಿಸಬೇಕಾದ್ರೆ ದೊಡ್ಡ ಪ್ರಕ್ರಿಯೆ ಇದೆ ಅಂತಾ ಹೇಳಲಾಗ್ತಿದೆ. 15 ದಿನಗಳ ಕಾಲ ಪ್ರಕ್ರಿಯೆ ನಡೆಯಲಿದೆ. ಆದ್ರೆ 6 ದಿನಗಳಲ್ಲಿ ಹೇಗೆ ಮೂಲ ಸ್ಥಾನಕ್ಕೆ ತರುತ್ತಾರೆ ಎಂಬುದು ಪ್ರಶ್ನೆ ಆಗಿದೆ. ಹಾಗಾದ್ರೆ ಬಿಪಿಎಲ್‌ನಿಂದ ಎಪಿಎಲ್‌ಗೆ ಶಿಫ್ಟ್ ಮಾಡೋ ಪ್ರಕ್ರಿಯೆ ಹೇಗೆ ನಡೆಯುತ್ತೆ? ಯಾವ್ಯಾವ ಹಂತಗಳಿವೆ ಅನ್ನೋದನ್ನ ಮುಂದೆ ಓದಿ ತಿಳಿಯಿರಿ…
Advertisement
Advertisement
ಬಿಪಿಎಲ್ ಕಾರ್ಡ್ ಪ್ರಕ್ರಿಯೆ ಹೇಗೆ?
ಬಿಪಿಎಲ್‌ನಿಂದ ಎಪಿಎಲ್‌ಗೆ ಶಿಫ್ಟ್ ಆದ ಕಾರ್ಡ್‌ಗಳನ್ನ ಮೂಲ ಸ್ಥಾನಕ್ಕೆ ತರಲು ಸ್ಥಳ ಪರಿಶೀಲನೆ ಮಾಡಬೇಕು. ಬಡವರು ಇದ್ದಾರಾ? ಶ್ರೀಮಂತರು ಇದ್ದಾರಾ? ಅಂತ ಮನೆ ಪರಿಶೀಲಿಸಬೇಕು. ಆರ್‌ಡಿ ನಂಬರ್ ಪರಿಶೀಲನೆ ಮಾಡಬೇಕು. ಸ್ಥಳ ಪರಿಶೀಲನೆ ಜೊತೆಗೆ ದಾಖಲೆ ಪರಿಶೀಲನೆ ಮಾಡಬೇಕು. ಆಹಾರ ನಿರೀಕ್ಷಕರು ಒನ್ ಬೈ ಒನ್ ಆಗಿ ಕಾರ್ಡ್‌ಗಳನ್ನ ಕನ್ವರ್ಟ್ ಮಾಡಬೇಕು. ಏಕಾಏಕಿ ಮೂಲ ಸ್ಥಾನಕ್ಕೆ ಶಿಫ್ಟ್ ಮಾಡೋಕೆ ಆಗಲ್ಲ. ಎನ್‌ಐಸಿ ಸಾಫ್ಟ್‌ವೇರ್ ಮೂಲಕ ಕಾರ್ಡ್ ಕನ್ವರ್ಟ್ ಮಾಡಬೇಕು. ಕಾರ್ಡ್ ಕನ್ವರ್ಟ್ ಮಾಡಬೇಕು ಅಂದರೆ 10 ರಿಂದ 15 ದಿನ ಸಮಯಬೇಕು ಎನ್ನಲಾಗ್ತಿದೆ. ಇದನ್ನೂ ಓದಿ: ಯೋಗೇಶ್ವರ್‌ಗೆ ಗೆಲುವು – ಮದ್ದೂರಿನ ಹೊಳೆ ಆಂಜನೇಯನಿಗೆ ಹರಕೆ ತೀರಿಸಿದ ಸಿಪಿವೈ ಪತ್ನಿ
ಇನ್ನೂ ರದ್ದಾದ ಕಾರ್ಡ್ ನಿಂದ ಅಕ್ಕಿ ಬರದೇ ಜನ ಕಚೇರಿಯಿಂದ ಕಚೇರಿಗೆ ಅಲೆಯುತ್ತಾ ಇದ್ದಾರೆ. ಎರಡ್ಮೂರು ತಿಂಗಳಾದ್ರು ಸಮಸ್ಯೆ ಬಗೆಹರಿಯುತ್ತಿಲ್ಲ. ಜನರು ಮಾತ್ರ ಸಮಸ್ಯೆ ಬಗೆಹರಿಸದಿದ್ದರೂ ಅಕ್ಕಿ ಕೊಡೋ ವ್ಯವಸ್ಥೆ ಮಾಡಲಿ ಅಕ್ಕಿ ಸಿಗ್ತಿಲ್ಲ ಅಂತಿದ್ದಾರೆ.
ಒಟ್ಟಾರೆ ಸಮಸ್ಯೆ ಆಗಿರುವ ಕಾರ್ಡ್‌ಗಳನ್ನ ಮೂಲ ಸ್ಥಾನಕ್ಕೆ ತರಲು 25ನೇ ತಾರೀಖಿನವೆರೆಗೂ ಸಮಯ ನೀಡಿದ್ದಾರೆ. ಅಷ್ಟರ ಒಳಗಡೆ ಮಾಡ್ತಾರಾ ಮತ್ತೆ ಸಮಯ ತೆಗೆದುಕೊಳ್ಳುತ್ತಾರಾ ? ಎಂಬುದನ್ನ ಕಾದು ನೋಡಬೇಕಿದೆ. ಇದನ್ನೂ ಓದಿ: ನಿನ್ನ ನೋಡ್ಬೇಕು ಬಾ ಅಂತ ಕರೆಸಿ ಪ್ರಿಯತಮೆಯಿಂದ್ಲೇ ಪ್ರಿಯಕರನ ಕಿಡ್ನ್ಯಾಪ್, 5 ಲಕ್ಷ ಸುಲಿಗೆ!