ಬೆಂಗಳೂರು: ಉತ್ತರ ಕನ್ನಡ ಜಿಲ್ಲೆಯಗಳ ಗಡಿಭಾಗದ ಅಭಿವೃದ್ಧಿಗೆ ಆಗ್ರಹಿಸಿ ಕನ್ನಡಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ನವೆಂಬರ್ 24ಕ್ಕೆ ಕಾರವಾರ ಬಂದ್ ಘೋಷಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಐತಿಹಾಸಿಕ ಗಡಿ ಪ್ರದೇಶವಾಗಿರುವ ಕಾರವಾರದ ಅಭಿವೃದ್ಧಿ ಕೆಲಸಗಳು ಕುಂಠಿತವಾಗಿದೆ. ಸಿ-ಬರ್ಡ್ ಗಾಗಿ ರೈತರಿಂದ ಜಮೀನು ಪಡೆದು, ಅವರಿಗೆ ಇದೂವರೆಗೂ ಪರಿಹಾರ ನೀಡಿಲ್ಲ. ಇದಲ್ಲದೇ ಗೋವಾ ಸರ್ಕಾರ ಕೂಡ ಕಾರವಾರದ ಮೀನನ್ನು ನಿಷೇಧ ಮಾಡಿದೆ. ಇದರಿಂದಾಗಿ ಮೀನುಗಾರರ ಪರಿಸ್ಥಿತಿ ಗಂಭೀರವಾಗಿದೆ. ಹೀಗಾಗಿ ಉತ್ತರ ಕನ್ನಡ ಜಿಲ್ಲೆಯ ಗಡಿಭಾಗದ ಅಭಿವೃದ್ಧಿಗೆ ಆಗ್ರಹಿಸಿ ಇದೇ ನವೆಂಬರ್ 24ರಂದು ಕಾರವಾರ ಬಂದ್ ಗೆ ಕರೆ ನೀಡಿದ್ದೇವೆ. ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಬಂದ್ ಇರಲಿದೆ. ಈ ವೇಳೆ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕುತ್ತೇವೆ ಎಂದು ಹೇಳಿದ್ದಾರೆ.
Advertisement
Advertisement
ಇದೇ ವೇಳೆ ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದ ಅವರು, ರಾಜ್ಯದ ಮುಖ್ಯಮಂತ್ರಿಗಳಿಗೂ ಸೇರಿದಂತೆ ಎಲ್ಲರಿಗೂ ಕರ್ನಾಟಕ ಅಂದರೆ, ಬೆಂಗಳೂರು ಮಾತ್ರ ಅನ್ನುವಂತಾಗಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ನೇತೃತ್ವದ ಯಾವೊಬ್ಬ ಸಚಿವರಿಗೂ ಉತ್ತರ ಕನ್ನಡದ ಬಗ್ಗೆ ಏನಾದರೂ ಗೊತ್ತಿದೆಯಾ? ಎಲ್ಲರೂ ಬೆಂಗಳೂರು, ಬೆಂಗಳೂರು ಎಂದೇ ಹೇಳುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.
Advertisement
ಹೆಲಿಕಾಪ್ಟರ್ ಹಾರಾಟಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ರಾಜಕೀಯ ನಾಯಕರು ಹೆಲಿಕಾಪ್ಟರ್ ನಲ್ಲೇ ಓಡಾಡುತ್ತಾರೆ. ಅವರಿಗೆ ರಾಜ್ಯದ ಜನರು ಕಾಣಲ್ಲ, ರೋಡು ಕಾಣಲ್ಲ. ಕೇವಲ ಬೆಟ್ಟ-ಗುಡ್ಡ, ಆಕಾಶ ಮಾತ್ರ ಕಾಣಿಸುತ್ತೆ. ಇವರಿಗೆ ಹೆಲಿಕಾಪ್ಟರ್‍ನಲ್ಲಿ ಮೈಸೂರು ದಸರಾ, ಬೆಂಗಳೂರು ರಾಜಧಾನಿ ಮಾತ್ರ ಕಾಣುತ್ತೆ. ಯಾವ ರಾಜಕೀಯ ಮುಖಂಡರು ನೆಲದಲ್ಲಿ ನಡೆಯಲ್ಲ, ಕಾರಲ್ಲಿ ಓಡಾಡಲ್ಲ. ಹೀಗಾಗಿ ಹೆಲಿಕಾಪ್ಟರ್ ಬಂದ್ ಆಗಬೇಕು. ಇದಕ್ಕಾಗಿ ನಾವು ಹೋರಾಟ ಮಾಡಲಿದ್ದೇವೆ. ಮುಂದಿನ ದಿನಗಳಲ್ಲಿ ಹೆಲಿಕಾಪ್ಟರ್ ಬಂದ್ ಹೋರಾಟ ತೀವ್ರವಾಗಿರುತ್ತದೆ.
Advertisement
ಕೈ ಕಾಲು ಸರಿಯಿಲ್ಲದೇ ಇರುವವರು, ಕಾರಿನಲ್ಲಿ ಕೂರಲೇ ಆಗದೇ ಇರುವವರು, ವೈದ್ಯರ ಬಳಿ ನನಗೆ ನೆಲದ ಮೇಲೆ ಓಡಾಡಿದರೇ, ಖಾಯಿಲೆ ಬರುತ್ತದೆಂದು ಪ್ರಮಾಣ ಪತ್ರ ಪಡೆದವರು ಮಾತ್ರ ಹೆಲಿಕಾಪ್ಟರ್ ಗಳಲ್ಲಿ ಓಡಾಡಲಿ. ಆದರೆ ಎಲ್ಲವೂ ಸರಿಯಿದ್ದರೂ, ರಾಜ್ಯದ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಹೆಲಿಕಾಪ್ಟರ್ ಗಳನ್ನು ಬಳಸುತ್ತಿರುವುದು ದುರಾದೃಷ್ಟಕರ ಸಂಗತಿ. ತುರ್ತು ಸಂದರ್ಭಗಳಲ್ಲಿ ಹೆಲಿಕಾಪ್ಟರ್ ಬಳಕೆಗೆ ನಾವು ವಿರೋಧ ಪಡಿಸುವುದಿಲ್ಲ. ಆದರೆ ಅದನ್ನೇ ದುರುಪಯೋಗ ಪಡಿಸಿಕೊಳ್ಳುತ್ತಿರುವುದು ಸರಿಯಲ್ಲವೆಂದು ಹೇಳಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews