ಮಂಗಳೂರು: ಎದುರಾಳಿ ತಂಡದ ವಿರುದ್ಧ ಸಂಚು ರೂಪಿಸುತ್ತಿದ್ದಾಗಲೇ ನಟೋರಿಯಸ್ ರೌಡಿಶೀಟರ್ ಒಬ್ಬನನ್ನು ಸಿಸಿಬಿ ಪೊಲೀಸರು (Police) ಬಂಧಿಸಿದ ಘಟನೆ ಉಳ್ಳಾಲದಲ್ಲಿ (Ullal) ನಡೆದಿದೆ.
ಬಂಧಿತ ಆರೊಪಿಯನ್ನು, ದಾವುದ್ (43) ಎಂದು ಗುರುತಿಸಲಾಗಿದೆ. ಆರೋಪಿ ಉಳ್ಳಾಲದ ಧರ್ಮನಗರದ ಆತನ ಮನೆಯಲ್ಲಿ ಎದುರಾಳಿ ತಂಡದ ವಿರುದ್ಧ ಸಂಚು ಮಾಡುತ್ತಿದ್ದ. ಈ ವೇಳೆ ಸಿಸಿಬಿ ಪೊಲೀಸರು ದಾಳಿ ನಡೆಸಿ, ಆತನನ್ನು ಬಂಧಿಸಿದ್ದಾರೆ.
ಬಂಧನದ ವೇಳೆ ಸಿಸಿಬಿ ಪೊಲೀಸರ ಮೇಲೆ ಆರೋಪಿ ಮಚ್ಚಿನಿಂದ ದಾಳಿ ಮಾಡಲು ಮುಂದಾಗಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಈ ಸಂಬಂಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಾವುದ್ ವಿರುದ್ಧ ಟಾರ್ಗೆಟ್ ಇಲ್ಯಾಸ್ ಕೊಲೆ ಸೇರಿದಂತೆ 10 ಪ್ರಕರಣಗಳಿವೆ.