– 1 ಕೋಟಿ ರೂ. ಮೌಲ್ಯದ 4 ಕೆಜಿ ಚಿನ್ನಾಭರಣ ವಶ
ಬೆಂಗಳೂರು: ಮನೆ ಮುಂದೆ ರಂಗೋಲಿ ನೋಡಿಕೊಂಡು ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಕಳ್ಳರನ್ನು ಹೆಡೆಮುರಿಕಟ್ಟುವಲ್ಲಿ ಕೆ.ಪಿ. ಅಗ್ರಹಾರ ಪೊಲೀಸರು ಯಶಸ್ವಿಯಾಗಿದ್ದಾರೆ.
ರಾಜಾ ಅಲಿಯಾಸ್ ಜಪಾನ್ ರಾಜಾ, ಕಿರಣ್ ಕುಮಾರ್ ಹಾಗೂ ನಾಗರಾಜ್ ಅಲಿಯಾಸ್ ಮತ್ತಿನಾಗ ಬಂಧಿತ ಆರೋಪಿಗಳು. ಬಂಧಿತರಿಂದ ಬರೋಬ್ಬರಿ 1 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಕೆ.ಪಿ.ಅಗ್ರಹಾರ ಸೇರಿದಂತೆ ವಿಜಯನಗರ, ಎಚ್‍ಎಸ್‍ಆರ್ ಲೇಔಟ್ ಹಾಗೂ ಹಲವು ಠಾಣೆಯಯಲ್ಲಿ ಪ್ರಕರಣ ದಾಖಲಾಗಿತ್ತು.
Advertisement
Advertisement
ಕಳ್ಳತನ ಹೇಗೆ ಮಾಡ್ತಿದ್ರು?
ಬಂಧಿತ ಆರೋಪಿಗಳು ಮೊದಲು ಬೈಕಿನಲ್ಲೇ ಮನೆಯನ್ನು ಗಮನಿಸುತ್ತಿದ್ದರು. ಮುಖ್ಯವಾಗಿ ಹಾಲಿನ್ ಪ್ಯಾಕ್, ರಂಗೋಲಿ, ಪೇಪರ್‍ಗಳನ್ನು ನೋಡಿ ಕಳ್ಳತನಕ್ಕೆ ಹೊಂಚು ಹಾಕುತ್ತಿದ್ದರು. ಯಾವ ಮನೆಯಲ್ಲಿ ರಂಗೋಲಿ ಇರುತ್ತಿರಲಿಲ್ಲವೋ ಅಥವಾ ಯಾವ ಮನೆಯಲ್ಲಿ ಹಾಲಿನ ಪ್ಯಾಕ್ ಹಾಗೂ ಪೇಪರ್‍ಗಳನ್ನು ತೆಗೆದುಕೊಳ್ಳದೇ ಇರುತ್ತಿದ್ದರೋ ಅಂತಹ ಮನೆಗಳೇ ಇವರಿಗೆ ಟಾರ್ಗೇಟ್ ಆಗಿರುತ್ತಿತ್ತು. ಮನೆಯನ್ನು ಗುರುತಿಸಿದ ಬಳಿಕ ಕ್ಷಣಮಾತ್ರದಲ್ಲಿ ಮನೆಯನ್ನು ದೋಚುತ್ತಿದ್ದರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv