ಬೆಂಗಳೂರು: ಕುಖ್ಯಾತ 3 ಕಳ್ಳರನ್ನು ಬ್ಯಾಟರಾಯನಪುರ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 30 ಲಕ್ಷ ಬೆಲೆಬಾಳುವ 65 ಗ್ರಾಂ ಚಿನ್ನ, 25 ಬೈಕ್ 1 ಆಟೋ, ವಿವಿಧ ಕಂಪನಿಯ 24 ಮೊಬೈಲ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕಬೀರ್ ಪಾಷಾ, ಸಯ್ಯದ್ ಖಲೀಂ, ಅಪ್ತಬ್ ಪಾಷಾ ಬಂಧಿತ ಆರೋಪಿಗಳು. ಉಪ್ಪಿನಂಗಡಿ ಠಾಣಾ ವ್ಯಾಪ್ತಿಯಲ್ಲಿ ಸುಲಿಗೆ, ಬೆಂಗಳೂರಿನ ಬ್ಯಾಟರಾಯನಪುರ, ಕೆಂಗೇರಿ, ವಿಜಯ ನಗರ, ಚಂದ್ರಾಲೇಔಟ್, ಕೆ.ಪಿ ಅಗ್ರಹಾರ, ಚಾಮರಾಜಪೇಟೆ, ಡಿ.ಜೆ.ಹಳ್ಳಿ, ಗೋವಿಂದರಾಜನಗರ, ಸುಬ್ರಮಣ್ಯನಗರ ಸೇರಿದಂತೆ ಹಲವು ಠಾಣಾ ವ್ಯಾಪ್ತಿಯಲ್ಲಿ ಕಳವು ಮಾಡಿದ್ದಾರೆ. ಇದನ್ನೂ ಓದಿ: ಬಿಜೆಪಿ ತನ್ನ ಅನುಕೂಲಕ್ಕಾಗಿ ಹಿಂದುತ್ವವನ್ನು ಬಳಸಿಕೊಳ್ಳುತ್ತಿದೆ: ಉದ್ಧವ್ ಠಾಕ್ರೆ
Advertisement
Advertisement
ಬ್ಯಾಟರಾಯನಪುರ ಪೊಲೀಸ್ ಠಾಣಾ ವ್ಯಾಪ್ತಿಯ ಬೈಕ್ ಕಳ್ಳತನ ಪ್ರಕರಣದಲ್ಲಿ ಆರೋಪಿಗಳು ಸಿಕ್ಕಿ ಬಿದ್ದಾಗ ಅಷ್ಟು ಪ್ರಕರಣಗಳು ಬೆಳಕಿಗೆ ಬಂದಿವೆ.
Advertisement
ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಸಕಲೇಶಪುರದಲ್ಲಿ ಕಲ್ಲು ಎತ್ತಿ ಹಾಕಿ ವೃದ್ಧೆಯ ಬರ್ಬರ ಹತ್ಯೆ