ಸಿನಿಮಾದಲ್ಲಿ ಡ್ರಗ್ಸ್ ದೃಶ್ಯಗಳಿದ್ದರೆ ನೋಟಿಸ್: ಕಠಿಣ ಕ್ರಮಕ್ಕೆ ಮುಂದಾದ ಪೊಲೀಸ್ ಇಲಾಖೆ

Public TV
1 Min Read
Baby 3

ಡ್ರಗ್ಸ್ (Drugs) ಪಿಡುಗನ್ನು ನಿರ್ನಾಮ ಮಾಡುವ ಪಣ ತೊಟ್ಟಿರುವ ಪೊಲೀಸ್ ಇಲಾಖೆಯು ಇದೀಗ ಸಿನಿಮಾಗಳ ಮೇಲೆ ಕಣ್ಣಿಟ್ಟಿದೆ. ಸಿನಿಮಾಗಳಲ್ಲಿ (Cinema) ಮಾದಕ ವಸ್ತುಗಳನ್ನು ಪ್ರಚೋದಿಸುವ ದೃಶ್ಯಗಳು ಇದ್ದರೆ, ಅಂತಹ ಸಿನಿಮಾಗಳಿಗೆ ನೋಟಿಸ್ (Notice) ನೀಡಲಾಗುವುದು ಎಂದು ಹೈದರಾಬಾದ್ ಪೊಲೀಸ್ ತಿಳಿಸಿದ್ದಾರೆ.

Baby 2

ಹೈದರಾಬಾದ್ ಪೊಲೀಸರು ಇತ್ತೀಚೆಗಷ್ಟೇ ಮಾದಾಪುರದಲ್ಲಿ ನಡೆಸಿದ ಕಾರ್ಯಚರಣೆಯಲ್ಲಿ ವಿದೇಶಿ ಡ್ರಗ್ಸ್ ಪೆಡ್ಲರ್ ಗಳ ಜೊತೆ ಸಿನಿಮಾ ನಿರ್ಮಾಪಕರು ಬಂಧನಕ್ಕೊಳಗಾಗಿದ್ದರು. ಅಲ್ಲದೇ, ಸಿನಿಮಾ ರಂಗದಲ್ಲಿ ಡ್ರಗ್ಸ್ ವಹಿವಾಟು ಜೋರಾಗಿದೆ ಎನ್ನುವ ಆರೋಪ ಕೂಡ ಇದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಹೈದರಾಬಾದ್ ಪೊಲೀಸ್ ಆಯುಕ್ತ ಸಿ.ವಿ. ಆನಂದ್, ‘ಸಿನಿಮಾಗಳಲ್ಲಿ ಡ್ರಗ್ಸ್ ಬಳಕೆ ಬಗ್ಗೆ ತೋರಿಸಿದರೆ ನೋಟಿಸ್ ನೀಡಿ, ಕಠಿಣ ಕ್ರಮಕ್ಕೆ ಮುಂದಾಗಲಾಗುವುದು’ ಎಂದಿದ್ದಾರೆ. ಇದನ್ನೂ ಓದಿ:ದೊಡ್ಡ ಮೊತ್ತಕ್ಕೆ ಸೇಲ್ ಆಯಿತು ‘ಸಲಾರ್’ ಸ್ಯಾಟ್ ಲೈಟ್ ರೈಟ್ಸ್

Baby 1

ಡ್ರಗ್ಸ್ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ವಿಜಯ್ ದೇವರಕೊಂಡ ಅವರ ಸಹೋದರನ ‘ಬೇಬಿ’ (Baby) ಚಿತ್ರ ತಂಡಕ್ಕೆ ನೋಟಿಸ್ ಕೂಡ ನೀಡಲಾಗಿದೆಯಂತೆ. ಈ ಸಿನಿಮಾದಲ್ಲಿ ಡ್ರಗ್ಸ್ ಬಳಕೆ ಕುರಿತಾಗಿ ದೃಶ್ಯವಿದೆ. ಅದರಿಂದ ಜನರ ಮೇಲೆ ಋಣಾತ್ಮಕ ಪರಿಣಾಮ ಬೀರಲಿದೆ ಎಂದು ನೋಟಿಸ್ ನೀಡಲಾಗಿದೆ. ಸಿನಿಮಾ ಪರಿಶೀಲನೆಯ ನಂತರ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪೊಲೀಸ್ ಅಧಿಕಾರಿಗಳು ದಾಳಿ ನಡೆಸಿದ ಸಂದರ್ಭದಲ್ಲಿ ಸಿನಿಮಾದಲ್ಲಿ ತೋರಿಸಿದ ರೀತಿಯಲ್ಲೇ ಡ್ರಗ್ಸ್ ಬಳಕೆ ಆಗುತ್ತಿದ್ದು ಎನ್ನುವ ಮಾಹಿತಿಯನ್ನೂ ಅಧಿಕಾರಿಗಳು ಹೊರ ಹಾಕಿದ್ದಾರೆ. ತಮಗೆ ನೋಟಿಸ್ ಬಂದಿರುವ ಕುರಿತು ಬೇಬಿ ಸಿನಿಮಾದ ನಿರ್ಮಾಪಕ ಸಾಯಿ ರಾಜೇಶ್ ಕೂಡ ಖಚಿತ ಪಡಿಸಿದ್ದಾರೆ. ಅದಕ್ಕೆ ತಮ್ಮದೇ ಆದ ರೀತಿಯಲ್ಲಿ ಉತ್ತರಿಸುವುದಾಗಿಯೂ ತಿಳಿಸಿದ್ದಾರೆ.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article